Mature Love: ಪ್ರಬುದ್ಧ ಪ್ರೀತಿ ಎಂದರೇನು? ಪ್ರೇಮಿಗಳ ಮನಸ್ಥಿತಿ ಹೇಗಿರುತ್ತೆ?

Mature Love:ಸಂಬಂಧ(Relationship)ಗಳೇ ಕ್ಲಿಷ್ಟಕರ. ನಾವು ಯಾವಾಗಲೂ ಇತರರಿಗಿಂತ ಭಿನ್ನ ಎಂದು ಹೇಳಿಕೊಂಡರೂ ಕೊನೆಗೆ ತಪ್ಪು ಮಾಡುವುದು ಒಂದೇ ವಿಷಯದಲ್ಲಿ. ಪ್ರೀತಿಯನ್ನು ಎಲ್ಲರೂ ಮಾಡಬಹುದು ಆದರೆ ಎಲ್ಲರಿಗೂ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ಗುಣ ಇರುವುದಿಲ್ಲ. ಚಿಕ್ಕಪುಟ್ಟ ಮನಸ್ತಾಪಗಳೇ ಪ್ರೀತಿಯ ಅಂತ್ಯಕ್ಕೆ ಕಾರಣವಾಗಿಬಿಡಬಹುದು.

Mature Love: ಪ್ರಬುದ್ಧ ಪ್ರೀತಿ ಎಂದರೇನು? ಪ್ರೇಮಿಗಳ ಮನಸ್ಥಿತಿ ಹೇಗಿರುತ್ತೆ?
Love
Follow us
TV9 Web
| Updated By: ನಯನಾ ರಾಜೀವ್

Updated on:Jun 01, 2022 | 1:15 PM

ಸಂಬಂಧ(Relationship)ಗಳೇ ಕ್ಲಿಷ್ಟಕರ. ನಾವು ಯಾವಾಗಲೂ ಇತರರಿಗಿಂತ ಭಿನ್ನ ಎಂದು ಹೇಳಿಕೊಂಡರೂ ಕೊನೆಗೆ ತಪ್ಪು ಮಾಡುವುದು ಒಂದೇ ವಿಷಯದಲ್ಲಿ. ಪ್ರೀತಿಯನ್ನು ಎಲ್ಲರೂ ಮಾಡಬಹುದು ಆದರೆ ಎಲ್ಲರಿಗೂ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ಗುಣ ಇರುವುದಿಲ್ಲ. ಚಿಕ್ಕಪುಟ್ಟ ಮನಸ್ತಾಪಗಳೇ ಪ್ರೀತಿಯ ಅಂತ್ಯಕ್ಕೆ ಕಾರಣವಾಗಿಬಿಡಬಹುದು.

ಹಾಗೆಯೇ ಕೆಲವರು ಏನೇ ಪರಿಸ್ಥಿತಿ ಬಂದರೂ ನಿಭಾಯಿಸುತ್ತಾ, ನೀನು ನನಗೆ ಬೇಕೆಂದು ನಾನು ಪ್ರೀತಿ ಮಾಡಲಿಲ್ಲ, ನಿನ್ನನ್ನು ಪ್ರೀತಿ ಮಾಡಿದ್ದೇನೆ ಹಾಗಾಗಿ ನೀನು ನನಗೆ ಬೇಕು ಎಂದು ಹೇಳುವ ಮನಸ್ಥಿತಿಯೂ ಕೆಲಸವರಲ್ಲಿರುತ್ತದೆ. ಪ್ರಬುದ್ಧತೆ ಎಂಬುದು ಕೇವಲ ಭಾವನೆಯಲ್ಲ ಅಥವಾ ನಡವಳಿಕೆಯೂ ಅಲ್ಲ. ಎಲ್ಲವನ್ನೂ ಒಳಗೊ೦ಡ ಸಮಷ್ಠಿ ಪ್ರಜ್ಞೆ. ಸೋಲು ಗೆಲುವು, ಪ್ರೀತಿ ದ್ವೇಷ ತಾಳ್ಮೆ ಹೀಗೆ ಮನುಷ್ಯನ ಎಲ್ಲಾ ಭಾವನೆಗಳನ್ನು ಒಳಗೊ೦ಡ ಮನಸ್ಥಿತಿ.

ಇದಿಷ್ಟೇ ಆದರೆ ಅವನನ್ನು ಜ್ಞಾನಿ ಎನ್ನಬಹುದು. ಪ್ರಬುದ್ಧತೆ ಅದನ್ನೂ ಮೀರಿದ್ದು. ಅಂದರೆ ನೀವು ಜ್ಞಾನದ ತುತ್ತತುದಿಯಲ್ಲಿದ್ದರೂ ಅದೂ ಕೂಡ ಕಲಿಕೆಯ ಮೊದಲ ಮೆಟ್ಟಿಲು ಎಂದು ಭಾವಿಸುವ ಮತ್ತು ತಿಳಿದಿರುವ, ಜ್ಞಾನ ಕೂಡ ಸಂಪೂರ್ಣ ಸತ್ಯವಲ್ಲ ಅದು ಹರಿಯುತ್ತಿರುವ – ಬದಲಾಗುತ್ತಿರುವ ನೀರಿನ ಪ್ರವಾಹ ಎಂಬ ಅರಿವಿರುವ ಮಾನಸಿಕ ಸ್ಥಿತಿ. ಹಾಗಾದರೆ ಪ್ರಬುದ್ಧತೆ ಮಾನಸಿಕ ಸ್ಥಿತಿಯೇ. ಇಲ್ಲ ಅಷ್ಟು ಮಾತ್ರವಲ್ಲ, ಅದು ನಮ್ಮ ವೈಯುಕ್ತಿಕ ಮತ್ತು ಸಾಮಾಜಿಕ ಬದುಕಿನ ವರ್ತನೆ ಅಥವಾ ನಡವಳಿಕೆಯೂ ಸಹ.

ಹಾಗಾದರೆ ಪ್ರಬುದ್ಧ ಪ್ರೇಮವೆಂದರೇನು?, ಪ್ರೀತಿಯನ್ನು ಕಾಪಾಡಿಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಪರಸ್ಪರ ನಂಬಿಕೆ ಇರುತ್ತೆ: ಸಾಮಾನ್ಯವಾಗಿ ಸಂಬಂಧಗಳು ದೂರವಿದ್ದಾಗ ನಂಬಿಕೆ ಕಳೆದು ಕೊಳ್ಳುವುದು ಹೆಚ್ಚು. ಏಕೆಂದರೆ ಅವನು, ಅವಳು ನನ್ನಿಂದ ದೂರವಿದ್ದಾರೆ ಇನ್ನೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡರೆ.. ಅಥವಾ ಮತ್ತೇನು ಸಂಭವಿಸಿದರೆ ಎನ್ನುವ ಉಹಾಪೋಹಗಳು.. ನಿಮ್ಮ ಸಂಬಂಧ ಬಿರುಕು ಮೂಡುವಂತೆ ಮಾಡುತ್ತದೆ. ಹೀಗಾಗಿ ನೀವು ನಿಮ್ಮ ಪ್ರೀತಿ ಪಾತ್ರರಿಂದ ದೂರ ಇದ್ದಾಗ ಅವರ ಮೇಲೆ ಸದಾಕಾಲ ನಂಬಿಕೆ ಇರುತ್ತದೆ.

ಕಾಳಜಿ: ಪ್ರತಿನಿತ್ಯ ಅವರು ಮಾಡುವ ಕೆಲಸದಿಂದ ಹಿಡಿದು ಅವರ ಆರೋಗ್ಯ ವಿಚಾರಣೆಯ ಬಗ್ಗೆ ನೀವು ಕಾಳಜಿ ತೋರಿಸಿದರೆ ನಿಮ್ಮಿಬ್ಬರ ಸಂಬಂಧ ದೂರದಲ್ಲಿ ಇದ್ದಾಗಲೂ ಮತ್ತಷ್ಟು ಹತ್ತಿರಕ್ಕೆ ತಂದು ನಿಲ್ಲಿಸುತ್ತದೆ.

ಹೆಚ್ಚು ಸಮಯ ನೀಡುತ್ತಾರೆ : ಪ್ರೇಮಿಗಳು ಹತ್ತಿರ ವಿಧಾನ ಪ್ರತಿನಿತ್ಯ ಭೇಟಿ ಆಗಿ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಫೇಸ್ಬುಕ್, ವಾಟ್ಸ್ಅಪ್, ವಿಡಿಯೋ ಕಾಲ್ ಮೂಲಕ ಮಗಿಷ್ಟದವರ ಜೊತೆಗೆ ನೀವು ಸಾಕಷ್ಟು ಸಮಯವನ್ನು ಕಳೆಯುತ್ತಾರೆ.

ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆ: ಏನೇ ಅಪನಂಬಿಕೆಗಳಿರಲಿ, ಬಿನ್ನಾಭಿಪ್ರಾಯಗಳಿರಲಿ, ಮಾತನಾಡಿ ಬಗೆಹರಿಸಿಕೊಳ್ಳಿ. ಪ್ರಬುದ್ಧ ಪ್ರೇಮಿಗಳು ಈ ಕೆಲಸವನ್ನು ಮಾಡಿಯೇ ಮಾಡುತ್ತಾರೆ.

ಸ್ವಾತಂತ್ರ್ಯವಿರುತ್ತದೆ ಪ್ರೀತಿ ಮಾಡುತ್ತಿದ್ದಾರೆ ಎಂದ ಮಾತ್ರೆ ಯಾರು ಹೇಳಿದಂತೆ ಯಾರು ಕೇಳುವ ಅಗತ್ಯವೂ ಇಲ್ಲ, ಒಬ್ಬರನ್ನೊಬ್ಬರು ಗೌರವಿಸಬೇಕು, ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿರಬೇಕು ಎಂದು ನಂಬಿರುತ್ತಾರೆ.

ರೋಮ್ಯಾಂಟಿಕ್ ಆಗಿರುವುದು: ನೀವು ನಿಮ್ಮ ಸಂಗಾತಿಯ ಜೊತೆಯಲ್ಲಿ ಇದ್ದಾಗ ಮಾತ್ರ ರೋಮ್ಯಾಂಟಿಕ್ ಆಗಿ ಇರಬೇಕು ಎಂದೇನಿಲ್ಲ.. ನೀವು ದೂರದಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯ ಮಾತುಗಳು ಹಾಗೂ ನೀವು ರೋಮ್ಯಾಂಟಿಕ್ ಆಗಿರುವುದು ನಿಮ್ಮ ಸಂಬಂಧವನ್ನು ಮತ್ತಷ್ಟು ಉಳಿಸುತ್ತೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Wed, 1 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ