Ginger Benefits: ಅಬ್ಬಬ್ಬಾ! ಶುಂಠಿ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನವೇ?

|

Updated on: Sep 04, 2023 | 6:01 AM

ನಾವು ದಿನನಿತ್ಯ ಬಳಸುವ ಆಹಾರಗಳಲ್ಲಿ ಶುಂಠಿಯೂ ಒಂದು. ಬೆಳಗಿನ ಚಹಾದಿಂದ ಪ್ರಾರಂಭಿಸಿ, ನಾವು ಎಲ್ಲಾ ಮಸಾಲೆಗಳಲ್ಲಿ ಶುಂಠಿಯನ್ನು ಬಳಸುತ್ತೇವೆ. ಆಯುರ್ವೇದದಲ್ಲಿ ಶುಂಠಿಗೆ ಬಹಳ ಮಹತ್ವವಿದೆ. ಶುಂಠಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಶುಂಠಿಯು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಶುಂಠಿಯನ್ನು ಹಸಿಯಾಗಿ ಜಗಿಯಿದರೂ ಆರೋಗ್ಯಕ್ಕೆ ಒಳ್ಳೆಯದು.

Ginger Benefits: ಅಬ್ಬಬ್ಬಾ! ಶುಂಠಿ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನವೇ?
ಶುಂಠಿಯ ಪ್ರಯೋಜನಗಳು
Follow us on

ನಾವು ದಿನನಿತ್ಯ ಬಳಸುವ ಆಹಾರಗಳಲ್ಲಿ ಶುಂಠಿಯೂ ಒಂದು. ಬೆಳಗಿನ ಚಹಾದಿಂದ ಪ್ರಾರಂಭಿಸಿ, ನಾವು ಎಲ್ಲಾ ಮಸಾಲೆಗಳಲ್ಲಿ ಶುಂಠಿಯನ್ನು ಬಳಸುತ್ತೇವೆ. ಆಯುರ್ವೇದದಲ್ಲಿ ಶುಂಠಿಗೆ ಬಹಳ ಮಹತ್ವವಿದೆ. ಶುಂಠಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಶುಂಠಿಯು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಶುಂಠಿಯನ್ನು ಹಸಿಯಾಗಿ ಜಗಿಯಿದರೂ ಆರೋಗ್ಯಕ್ಕೆ ಒಳ್ಳೆಯದು. ಹಾಗದರೆ, ಶುಂಠಿ ಸೇವನೆಯಿಂದ ಆಗುವ ಪ್ರಯೋಜನಗಳೇನು (Ginger Benefits) ಎಂಬುದನ್ನು ನೋಡೋಣ.

ರೋಗನಿರೋಧಕ ಶಕ್ತಿ ವೃದ್ಧಿ

ಶುಂಠಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಳಸಲಾಗುತ್ತದೆ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಶುಂಠಿಯು ದೇಹದ ತ್ಯಾಜ್ಯವನ್ನು ಹೊರಹಾಕುವ ಗುಣವನ್ನು ಹೊಂದಿದೆ. ಆ ಮೂಲಕ ದೇಹವನ್ನು ಆಂತರಿಕವಾಗಿ ಶುದ್ಧವಾಗಿರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ

ಶುಂಠಿ ಸೇವಿಸುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ, ಮಧುಮೇಹ ಇರುವವರು ನಿಯಮಿತವಾಗಿ ಶುಂಠಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಶುಂಠಿಯು ಇನ್ಸುಲಿನ್ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸ್ನಾಯು ನೋವು ಶಮನ

ವ್ಯಾಯಾಮದ ನಂತರ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಕಡಿಮೆ ಮಾಡುವಲ್ಲಿ ಶುಂಠಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ನಿಧಾನವಾಗಿ ಇದು ಪರಿಹಾರವನ್ನು ತರುತ್ತದೆ. ಕೀಲುಗಳು ಮತ್ತು ಸಂಧಿವಾತದ ನೋವನ್ನು ಕಡಿಮೆ ಮಾಡಲು ಶುಂಠಿಯನ್ನು ಸಹ ಬಳಸಬಹುದು.

ತೂಕವನ್ನು ಇಳಿಕೆಗೆ ಸಹಾಯಕ

ಶುಂಠಿಯಲ್ಲಿ ತೂಕವನ್ನು ನಿಯಂತ್ರಿಸುವ ಗುಣವಿದೆ. ಶುಂಠಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ತೂಕವನ್ನು ಕಡಿಮೆ ಮಾಡಬಹುದು. ಶುಂಠಿ ಹಸಿವನ್ನು ಕಡಿಮೆ ಮಾಡುತ್ತದೆ. ಕೊಬ್ಬನ್ನು ಕಡಿಮೆ ಮಾಡುವಲ್ಲಿ ಶುಂಠಿ ಸಹಾಯ ಮಾಡುತ್ತದೆ. ಶುಂಠಿ ರಸವನ್ನು ಸೇವಿಸುವುದರಿಂದ ತಕ್ಷಣವೇ ಚಯಾಪಚಯವು ಹೆಚ್ಚಾಗುತ್ತದೆ.

ಶೀತ ಮತ್ತು ಕೆಮ್ಮು ನಿವಾರಣೆ

ಶುಂಠಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗೆ ಶುಂಠಿ ಟೀ ಕುಡಿದರೆ ಇವೆಲ್ಲವೂ ನಿಯಂತ್ರಣಕ್ಕೆ ಬರುತ್ತವೆ.

ಅಜೀರ್ಣ ಸಮಸ್ಯೆ ಶಮನ

ಅಜೀರ್ಣ ಸಮಸ್ಯೆಗಳಿಗೆ ಶುಂಠಿ ಚೆನ್ನಾಗಿ ಕೆಲಸ ಮಾಡುತ್ತದೆ. ದೀರ್ಘಕಾಲದ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶುಂಠಿ ತುಂಬಾ ಒಳ್ಳೆಯದು. ಇದು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ವಾಕರಿಕೆಯಿಂದ ಬಳಲುತ್ತಿರುವವರಿಗೂ ಇದು ಉತ್ತಮ ಪರಿಹಾರವಾಗಿದೆ.

ಅಲ್ಲದೆ, ಶುಂಠಿಯು ಮಹಿಳೆಯರಲ್ಲಿ ಯಾವುದೇ ರೀತಿಯ ಹಲ್ಲಿನ ಸಮಸ್ಯೆಗಳು, ವಾಕರಿಕೆ, ವಾಂತಿ, ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ