Health Tips: ಸೊಳ್ಳೆಗಳು ಕೆಲವರನ್ನು ಮಾತ್ರ ಕಚ್ಚುವುದಕ್ಕೆ ಕಾರಣವೇನು ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 06, 2024 | 5:58 PM

 ಕೆಲವರಿಗೆ ಸೊಳ್ಳೆಗಳು ಹೆಚ್ಚು ಕಡಿಯುವುದಿಲ್ಲ. ಆದರೆ ಕೆಲವರ ಸುತ್ತ ಮುತ್ತ ತುಂಬಾ ಸೊಳ್ಳೆಗಳಿರುತ್ತವೆ ಅಲ್ಲದೆ ಬೇಗ ಸೊಳ್ಳೆ ಕಚ್ಚುತ್ತವೆ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಈ ಸೊಳ್ಳೆಗಳು ಕೆಲವೊಮ್ಮೆ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಝಿಕಾ ವೈರಸ್ ಹೀಗೆ ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುತ್ತದೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಈ ಸೊಳ್ಳೆಗಳು ಏಕೆ ಕೆಲವರಿಗೆ ಮಾತ್ರ ಕಚ್ಚುತ್ತವೆ? ಅದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Health Tips: ಸೊಳ್ಳೆಗಳು ಕೆಲವರನ್ನು ಮಾತ್ರ ಕಚ್ಚುವುದಕ್ಕೆ ಕಾರಣವೇನು ಗೊತ್ತಾ?
Follow us on

ನೀವು ಗಮನಿಸಿರಬಹುದು, ಕೆಲವರಿಗೆ ಸೊಳ್ಳೆಗಳು ಹೆಚ್ಚು ಕಡಿಯುವುದಿಲ್ಲ. ಆದರೆ ಕೆಲವರ ಸುತ್ತ ಮುತ್ತ ತುಂಬಾ ಸೊಳ್ಳೆಗಳಿರುತ್ತವೆ ಅಲ್ಲದೆ ಬೇಗ ಸೊಳ್ಳೆ ಕಚ್ಚುತ್ತವೆ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಈ ಸೊಳ್ಳೆಗಳು ಕೆಲವೊಮ್ಮೆ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಝಿಕಾ ವೈರಸ್ ಹೀಗೆ ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗುತ್ತದೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಈ ಸೊಳ್ಳೆಗಳು ಏಕೆ ಕೆಲವರಿಗೆ ಮಾತ್ರ ಕಚ್ಚುತ್ತವೆ? ಅದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಸೊಳ್ಳೆ ಕಡಿತಕ್ಕೆ ಮುಖ್ಯ ಕಾರಣವೆಂದರೆ ನಾವು ಧರಿಸುವ ಬಟ್ಟೆಗಳು ಏಕೆಂದರೆ ಸೊಳ್ಳೆಗಳು ತಿಳಿ ಬಣ್ಣದ ಬಟ್ಟೆಗಳಿಗಿಂತ ಗಾಢ ಬಣ್ಣದ ಬಟ್ಟೆಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ. ಅಲ್ಲದೆ, ಅರ್ಧ ತೋಳಿನ ಬಟ್ಟೆಗಳು ಮತ್ತು ಸಣ್ಣ ಬಟ್ಟೆಗಳನ್ನು ಧರಿಸುವುದರಿಂದ ಸೊಳ್ಳೆ ಕಡಿತದ ಸಾಧ್ಯತೆಗಳು ಹೆಚ್ಚಾಗುತ್ತವೆ. ಡೆಂಗ್ಯೂಗೆ ಕಾರಣವಾಗುವ ಈಡಿಸ್ ಸೊಳ್ಳೆ ಕಾಲುಗಳಿಗಿಂತ ಕೈಗಳನ್ನು ಕಚ್ಚುತ್ತದೆ. ಮಲೇರಿಯಾವನ್ನು ಉಂಟುಮಾಡುವ ಅನಾಫಿಲಿಸ್ ಸೊಳ್ಳೆಗಳು ಕಾಲುಗಳನ್ನು ಕಚ್ಚುತ್ತವೆ. ಆದ್ದರಿಂದ, ಮಾನ್ಸೂನ್ ಸಮಯದಲ್ಲಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆ ಧರಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹೆಚ್ಚು ಹೆಚ್ಚು ಸೊಳ್ಳೆ ಕಡಿತವಾಗುವುದನ್ನು ತಡೆಯಬಹುದು.

ಇದನ್ನೂ ಓದಿ: ಈ ರೋಗಗಳು ಬರದಂತೆ ತಡೆಯಲು ಬಾಳೆ ಹೂವನ್ನು ಸೇವನೆ ಮಾಡಿ

ಸೊಳ್ಳೆಗಳು ಹೆಚ್ಚು ಕಚ್ಚಲು ಮತ್ತೊಂದು ಪ್ರಮುಖ ಕಾರಣವೆಂದರೆ ಕೆಲವು ರಕ್ತದ ಗುಂಪುಗಳು. ತಜ್ಞರು ಹೇಳುವ ಪ್ರಕಾರ ಸೊಳ್ಳೆಗಳು, ಇತರ ರಕ್ತದ ಗುಂಪುಗಳಿಗೆ ಹೋಲಿಸಿದರೆ ‘ಒ’ ರಕ್ತದ ಗುಂಪಿನವರನ್ನು ಹೆಚ್ಚು ಆಕರ್ಷಿಸುತ್ತದೆ. ಹಾಗಾಗಿ ಅಂತವರಿಗೆ ಹೆಚ್ಚು ಸೊಳ್ಳೆ ಕಚ್ಚುತ್ತದೆ. ಅಲ್ಲದೆ, ದೇಹದ ತಾಪಮಾನ ಹೆಚ್ಚಾಗಿರುವವರನ್ನು ಕೂಡ ಸೊಳ್ಳೆಗಳು ಕಚ್ಚುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಆಲ್ಕೋಹಾಲ್ ಸೇವನೆಯು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ಆಗುವುದಿಲ್ಲ ಅಲ್ಲದೆ, ಬೆವರು ಹೆಚ್ಚಾಗುತ್ತದೆ. ಈ ಎಲ್ಲಾ ಅಂಶಗಳು ಕೂಡ ಹೆಣ್ಣು ಸೊಳ್ಳೆಗಳು ಬೇಗ ಆಕರ್ಷಿತವಾಗುವಂತೆ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ