Health Tips: ಆರೋಗ್ಯವಾಗಿರಲು ಎಷ್ಟು ಬಾರಿ ಆಹಾರ ತಿನ್ನಬೇಕು? ತಜ್ಞರ ಸಲಹೆ ಇಲ್ಲಿದೆ

ಗುರುಗ್ರಾಮ್‌ನ ನಾರಾಯಣ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಪಂಕಜ್ ವರ್ಮಾ, ದೈಹಿಕವಾಗಿ ಆರೋಗ್ಯವಾಗಿರಲು, ಜನರು ಸಾಮಾನ್ಯವಾಗಿ ದಿನಕ್ಕೆ ಎಷ್ಟು ಬಾರಿ ತಿನ್ನಬೇಕು ಎಂಬುದರ ಕುರಿತು ಸಲಹೆಯನ್ನು ನೀಡಿದ್ದಾರೆ.

Health Tips: ಆರೋಗ್ಯವಾಗಿರಲು ಎಷ್ಟು ಬಾರಿ ಆಹಾರ ತಿನ್ನಬೇಕು? ತಜ್ಞರ ಸಲಹೆ ಇಲ್ಲಿದೆ
Health Tips

Updated on: Mar 15, 2024 | 5:33 PM

ಒತ್ತಡ ಮುಕ್ತ ಜೀವನ ಹಾಗೂ ಆರೋಗ್ಯಕರ ಆಹಾರಕ್ರಮದಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡಬಹುದಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು, ನಮ್ಮ ಆಹಾರದಲ್ಲಿ ವಿಟಮಿನ್, ಖನಿಜಗಳು ಮತ್ತು ನಾರಿನಂಶದಂತಹವುಗಳನ್ನು ಪ್ರತಿದಿನ ಸೇರಿಸುವುದು ಮುಖ್ಯವಾಗಿದೆ. ಆದರೆ ಅನೇಕ ಬಾರಿ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ, ಅವರು ದಿನಕ್ಕೆ ಹಲವಾರು ಬಾರಿ ತಿನ್ನುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಯೋಜನಗಳನ್ನು ಪಡೆಯುವ ಬದಲು, ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಗುರುಗ್ರಾಮ್‌ನ ನಾರಾಯಣ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಪಂಕಜ್ ವರ್ಮಾ, ದೈಹಿಕವಾಗಿ ಆರೋಗ್ಯವಾಗಿರಲು, ಜನರು ಸಾಮಾನ್ಯವಾಗಿ ದಿನಕ್ಕೆ ಎಷ್ಟು ಬಾರಿ ತಿನ್ನಬೇಕು ಎಂಬುದರ ಕುರಿತು ಸಲಹೆಯನ್ನು ನೀಡಿದ್ದಾರೆ.

ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಮೂರು ಬಾರಿ ಅಂದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಆಹಾರ ತಿನ್ನುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಡಾ.ಪಂಕಜ್ ವರ್ಮಾ ಹೇಳುತ್ತಾರೆ. ಮತ್ತೊಂದೆಡೆ, ಸಾಮಾನ್ಯ ವ್ಯಕ್ತಿಗೆ ಹೋಲಿಸಿದರೆ, ಸಾಮಾನ್ಯಕ್ಕಿಂತ ಕಡಿಮೆ ತೂಕವಿರುವವರು ಅಥವಾ ಯಾವುದೇ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ ನಾಲ್ಕು ಬಾರಿ ತಿನ್ನುವುದು ಉತ್ತಮ ಎಂದು ಹೇಳಿದ್ದಾರೆ

ಇದನ್ನೂ ಓದಿ: Breast Cancer: ತಲೆನೋವಿ​ಗೂ ಸ್ತನ ಕ್ಯಾನ್ಸರ್​ಗೂ ಇದೆ ಸಂಬಂಧ; ಈ ಬಗ್ಗೆ ಎಚ್ಚರವಿರಲಿ

ಉದಾಹರಣೆಗೆ, ಮಧುಮೇಹ ರೋಗಿಗಳು ದಿನಕ್ಕೆ ಮೂರು ಬಾರಿ ತಿನ್ನಬೇಕು ಏಕೆಂದರೆ ಅವರು ದೀರ್ಘಕಾಲ ಹಸಿದಿದ್ದಲ್ಲಿ ಅವರ ಸಮಸ್ಯೆಗಳು ಹೆಚ್ಚಾಗಬಹುದು. ಅದೇ ರೀತಿ, ಸ್ಥೂಲಕಾಯದಿಂದ ಬಳಲುತ್ತಿರುವವರು ಅಥವಾ ಸಾಮಾನ್ಯಕ್ಕಿಂತ ಹೆಚ್ಚು ತೂಕ ಹೊಂದಿರುವ ಜನರು ದಿನಕ್ಕೆ ಎರಡು ಅಥವಾ ಮೂರು ಬಾರಿ ಲಘು ಆಹಾರವನ್ನು ತಿನ್ನಲು ಸಲಹೆ ನೀಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us