ನಿಮ್ಮ ದೈನಂದಿನ ಆರೋಗ್ಯಕರ ಆಹಾರದಲ್ಲಿ ಬೀಟ್ರೂಟ್ ಸೇರಿಸಲು 7 ಸೃಜನಶೀಲ ಮಾರ್ಗಗಳು!

ಬೀಟ್ರೂಟ್ ನ ಬಣ್ಣ ಮತ್ತು ಮೃದುವಾದ ಪರಿಮಳದಿಂದಾಗಿ ನಿಮ್ಮ ಆಹಾರದಲ್ಲಿ ಇರಲೇಬೇಕಾದ ತರಕಾರಿಯಾಗಿದ್ದು, ಇದೆಲ್ಲದರ ಜೊತೆಗೆ ಇದನ್ನು ಇನ್ನಷ್ಟು ವಿಶೇಷವಾಗಿಸುವ ಅಂಶವೆಂದರೆ ಅದು ನೀಡುವ ವಿವಿಧ ಆರೋಗ್ಯ ಪ್ರಯೋಜನಗಳು. ನಿಮ್ಮ ದೈನಂದಿನ ಆಹಾರದಲ್ಲಿ ಬೀಟ್ರೂಟ್ ಅನ್ನು ಹೇಗೆ ಸೇರಿಸುವುದು ಎಂದು ತಿಳಿಯಲು ಇಲ್ಲಿದೆ ಸರಳ ಮಾಹಿತಿ.

ನಿಮ್ಮ ದೈನಂದಿನ ಆರೋಗ್ಯಕರ ಆಹಾರದಲ್ಲಿ ಬೀಟ್ರೂಟ್ ಸೇರಿಸಲು 7 ಸೃಜನಶೀಲ ಮಾರ್ಗಗಳು!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2023 | 5:42 PM

ಬೀಟ್ರೂಟ್ ಪ್ರಪಂಚದಾದ್ಯಂತದ ಅನೇಕ ಅಡುಗೆ ಮನೆಗಳಲ್ಲಿ ತನ್ನ ಸ್ಥಾನವನ್ನು ಕಂಡು ಕೊಂಡ ಒಂದು ಪ್ರಸಿದ್ಧ ತರಕಾರಿಯಾಗಿದೆ. ಇದರ ತೆಳುವಾದ ಪರಿಮಳವು ರುಚಿ ಮೊಗ್ಗುಗಳಿಗೆ ಆಹ್ಲಾದಕರವಾಗಿರುತ್ತದೆ. ಬೀಟ್ರೂಟ್ ನ ಬಣ್ಣ ಮತ್ತು ಮೃದುವಾದ ಪರಿಮಳದಿಂದಾಗಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇ ಬೇಕಾದ ತರಕಾರಿಯಾಗಿದೆ. ಇದೆಲ್ಲದರ ಜೊತೆಗೆ ಇದನ್ನು ಇನ್ನಷ್ಟು ವಿಶೇಷವಾಗಿಸುವ ಅಂಶವೆಂದರೆ ಅದು ನೀಡುವ ವಿವಿಧ ಆರೋಗ್ಯ ಪ್ರಯೋಜನಗಳು. ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೀಟ್ರೂಟ್ಗಳು ಫೈಬರ್, ಫೋಲೇಟ್ (ವಿಟಮಿನ್ ಬಿ 9), ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಬೀಟ್ರೂಟ್ ಅನ್ನು ಹೇಗೆ ಸೇರಿಸುವುದು ಎಂದು ತಿಳಿಯಲು ಹೆಲ್ತ್ ಶಾಟ್ಸ್ ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಾಯಿತ ಆಹಾರ ತಜ್ಞ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಉಷಾಕಿರಣ್ ಸಿಸೋಡಿಯಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಆಹಾರದಲ್ಲಿ ಬೀಟ್ರೂಟ್ ಸೇರಿಸುವುದು ಹೇಗೆ?

ಈ ಪೌಷ್ಟಿಕ ತರಕಾರಿಯನ್ನು ನಿಮ್ಮ ದೈನಂದಿನ ಊಟದಲ್ಲಿ ಸೇರಿಸಲು ಅನೇಕ ಮಾರ್ಗಗಳಿವೆ. ಆರೋಗ್ಯಕರ ಆಹಾರಕ್ಕಾಗಿ ಏಳು ಆಸಕ್ತಿದಾಯಕ ಮತ್ತು ರುಚಿಕರವಾದ ವಿಧಾನಗಳು ಇಲ್ಲಿವೆ!

1. ಬೀಟ್ರೂಟ್ ಜ್ಯೂಸ್

“ಅನೇಕರಿಗೆ, ಅದರಲ್ಲಿಯೂ ಹೆಚ್ಚಾಗಿ ಮಧುಮೇಹಿಗಳಿಗೆ ಮತ್ತು ಹಲವು ರೋಗಗಳಿಂದ ಅಥವಾ ನಿಶಕ್ತಿಯಿಂದ ಬಳಲುತ್ತಿರುವವರಿಗೆ ಜನಪ್ರಿಯ ಆಯ್ಕೆಯಾದ ಬೀಟ್ರೂಟ್ ರಸವು ನಿಮ್ಮ ದಿನವನ್ನು ಪ್ರಾರಂಭಿಸಲು ಉಲ್ಲಾಸದಾಯಕ ಮಾರ್ಗವಾಗಿದೆ” ಎಂದು ತಜ್ಞರು ಹೇಳುತ್ತಾರೆ. ಬೀಟ್ರೂಟ್ ಅನ್ನು ಕ್ಯಾರೆಟ್, ಕಿತ್ತಳೆ ಅಥವಾ ಪುದೀನಾದಂತಹ ಇತರ ಹಣ್ಣುಗಳು ಮತ್ತು ತರಕಾರಿಗಳ ಸಂಯೋಜನೆಯೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. ಇದು ಪೋಷಕಾಂಶ ದಟ್ಟವಾದ ಪಾನೀಯ ಮಾತ್ರವಲ್ಲ, ಇದು ದೇಹವನ್ನು ನಿರ್ವಿಷಗೊಳಿಸಲು ಸಹ ಸಹಾಯ ಮಾಡುತ್ತದೆ.

2. ಬೀಟ್ರೂಟ್ ಪರೋಟ

ಈ ಪಾಕವಿಧಾನವು ನಿಮ್ಮ ಸಾಂಪ್ರದಾಯಿಕ ಪರೋಟಗಳಿಗೆ ಪೌಷ್ಟಿಕ ತಿರುವನ್ನು ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬೀಟ್ರೂಟ್ ಅನ್ನು ತುರಿದು ಗೋಧಿ ಹಿಟ್ಟು, ಮಸಾಲೆಗಳು ಮತ್ತು ನಿಮ್ಮ ಆಯ್ಕೆಯಪದಾರ್ಥಗಳೊಂದಿಗೆ ಬೆರೆಸಿ. ಹಿಟ್ಟನ್ನು ಬಾಣಲೆಯಲ್ಲಿ ಬೇಯಿಸಿ. ಈ ಕೆಂಪು ಪರೋಟಗಳು ನಿಮ್ಮ ಉಪಾಹಾರ ಅಥವಾ ಊಟಕ್ಕೆ ಒಳ್ಳೆಯ ಸೇರ್ಪಡೆಯಾಗಬಹುದು.

3. ಬೀಟ್ರೂಟ್ ಸಲಾಡ್

ನಿಮ್ಮ ದಿನವನ್ನು ಪೌಷ್ಠಿಕಾಂಶದೊಂದಿಗೆ ಪ್ರಾರಂಭಿಸಲು ಸಲಾಡ್ಗಳು ಉತ್ತಮ ಮಾರ್ಗವಾಗಿದೆ. “ಬೀಟ್ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಜೊತೆಗೆ ಸೌತೆಕಾಯಿ, ಟೊಮೆಟೊ ಮತ್ತು ಫೆಟಾ ಚೀಸ್ನಂತಹ ಇತರ ಪದಾರ್ಥಗಳನ್ನು ಸಲಾಡ್ ಗೆ ಸೇರಿಸಿ. ಸ್ವಲ್ಪ ಆಲಿವ್ ಎಣ್ಣೆ ಮತ್ತು ನಿಂಬೆ ರಸವನ್ನು ಚಿಮುಕಿಸಿ, ಸ್ವಲ್ಪ ಉಪ್ಪನ್ನು ಸಿಂಪಡಿಸಿದರೆ ಬೀಟ್ರೂಟ್ ಸಲಾಡ್ ಸಿದ್ಧವಾಗಿರುತ್ತದೆ” ಎಂದು ಡಾ. ಸಿಸೋಡಿಯಾ ಸಲಹೆ ನೀಡುತ್ತಾರೆ.

4. ಬೀಟ್ರೂಟ್ ಸೂಪ್

ಈ ಸೂಪ್ ಪಾಕವಿಧಾನವು ಪೂರ್ವ ಯುರೋಪಿಯನ್ ಪಾಕಪದ್ಧತಿಯಿಂದ ಸ್ಫೂರ್ತಿ ಪಡೆದಿದೆ. ಈ ಸೂಪ್ ಬೀಟ್ರೂಟ್, ಕ್ಯಾರೆಟ್, ಈರುಳ್ಳಿ ಮತ್ತು ಎಲೆಕೋಸಿನಂತಹ ತರಕಾರಿಗಳೊಂದಿಗೆ ಸಂಯೋಜನೆ ಗೊಳ್ಳುತ್ತದೆ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬಡಿಸಬಹುದು. ಜೊತೆಗೆ ಇದು ಯಾವುದೇ ಹವಾಮಾನಕ್ಕೂ ಕೂಡ ಪರಿಪೂರ್ಣ ಆರೋಗ್ಯಕರ ಆಯ್ಕೆಯಾಗಿದೆ. ನಿಮ್ಮ ರುಚಿಗೆ ಅನುಗುಣವಾಗಿ ನೀವು ಪದಾರ್ಥಗಳನ್ನು ಸಹ ಸೇರಿಸಬಹುದು.

5. ಬೀಟ್ರೂಟ್ ಪಲ್ಯ

“ಬೀಟ್ರೂಟ್ ಅನ್ನು ನಯವಾದ ಪೇಸ್ಟ್ ಮಾಡಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ ಜೀರಿಗೆ, ಕೊತ್ತಂಬರಿ ಮತ್ತು ಅರಿಶಿನದಂತಹ ಮಸಾಲೆಗಳೊಂದಿಗೆ ಬೇಯಿಸಿ. ಇದಕ್ಕೆ ತೆಂಗಿನ ಹಾಲು ಅಥವಾ ಮೊಸರು ಸೇರಿಸಿ. ಈ ಪಲ್ಯವು ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಲು ಉತ್ತಮ ಆಯ್ಕೆಯಾಗಿದೆ” ಎಂದು ಕೆಲವು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

6. ಬೀಟ್ರೂಟ್ ಹಲ್ವಾ

ಬೀಟ್ರೂಟ್ ಹಲ್ವಾ ಮಾಡುವುದು ತುಂಬಾ ಸುಲಭ. ಸಕ್ಕರೆ ಮತ್ತು ತುಪ್ಪದೊಂದಿಗೆ ಹಾಲಿನಲ್ಲಿ ತುರಿದ ಬೀಟ್ರೂಟ್ ಅನ್ನು ನಿಧಾನವಾಗಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಬಾದಾಮಿ, ಗೋಡಂಬಿ ಮತ್ತು ಏಲಕ್ಕಿಯಿಂದ ಅಲಂಕರಿಸಲ್ಪಟ್ಟ ಇದು ಸಿಹಿ ಇಷ್ಟಪಡುವವರಿಗೆ ಒಂದು ಔತಣವಾಗಿದೆ, ವಿಶೇಷವಾಗಿ ಮುಂಬರುವ ಹಬ್ಬಗಳಲ್ಲಿಯೂ ಈ ಪಾಕವಿಧಾನವನ್ನು ನೀವು ಪ್ರಯತ್ನಿಸಬಹುದು.

7. ಬೀಟ್ರೂಟ್ ಉಪ್ಪಿನಕಾಯಿ

ಹುದುಗಿಸಿದ ಆಹಾರಗಳು ಯಾವಾಗಲೂ ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಉಪ್ಪು ನೀರು, ವಿನೆಗರ್ ಮತ್ತು ಮಸಾಲೆಗಳಲ್ಲಿ ಬೇಯಿಸಿದ ಬೀಟ್ರೂಟ್ ನಿಮ್ಮ ಊಟಕ್ಕೆ ಪೂರಕವಾಗಬಹುದು. ಇದು ಪರಿಮಳವನ್ನು ಹೆಚ್ಚಿಸುವುದಲ್ಲದೆ ಪ್ರೋಬಯಾಟಿಕ್ ಪ್ರಯೋಜನಗಳನ್ನು ಸಹ ಹೊಂದಿದೆ.

ನಿಮ್ಮ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇರಿಸುವುದು ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೆ ಪ್ರಯೋಜನಕಾರಿಯೂ ಆಗಿದೆ. ಇತರ ಆರೋಗ್ಯಕರ ಪದಾರ್ಥಗಳೊಂದಿಗೆ ಬೆರೆಯುವ ಅದರ ಸಾಮರ್ಥ್ಯವು, ವಿವಿಧ ಭಕ್ಷ್ಯಗಳ ಭಾಗವಾಗಲು ಅನುವು ಮಾಡಿಕೊಡುತ್ತದೆ.

ಆರೋಗ್ಯ, ಸೌಂದರ್ಯದ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್