ಅತಿಯಾಗಿ ಕ್ಯಾಮೊಮೈಲ್ ಸೇವಿಸಿದರೆ ಆರೋಗ್ಯದ ಮೇಲಾಗುವ ದುಷ್ಪರಿಣಾಮವೇನು?

|

Updated on: Oct 02, 2023 | 6:03 PM

Chamomile Side Effects: ಚಹಾದ ರೂಪದಲ್ಲಿ ಕ್ಯಾಮೊಮೈಲ್ ಅನ್ನು ಸೇವಿಸುವವರಿಗೆ ಇದರಿಂದ ಹೆಚ್ಚಿನ ಅಡ್ಡಪರಿಣಾಮ ಆಗುವುದಿಲ್ಲ. ನೇರವಾಗಿ ಕ್ಯಾಮೊಮೈಲ್ ಸೇವನೆ, ಶಾಂಪೂ ಬಳಕೆ, ಔಷಧಿಯಲ್ಲಿ ಬಳಕೆ ಮಾಡುವವರಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು.

ಅತಿಯಾಗಿ ಕ್ಯಾಮೊಮೈಲ್ ಸೇವಿಸಿದರೆ ಆರೋಗ್ಯದ ಮೇಲಾಗುವ ದುಷ್ಪರಿಣಾಮವೇನು?
ಕ್ಯಾಮೊಮೈಲ್
Image Credit source: iStock
Follow us on

ಕ್ಯಾಮೊಮೈಲ್ ಟೀ ಇತ್ತೀಚೆಗೆ ಹೆಚ್ಚು ಫೇಮಸ್ ಆಗುತ್ತಿದೆ. ಈ ಹರ್ಬಲ್ ಟೀ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಅದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳು ಕೂಡ ಇವೆ. ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತೇ ಇರುವಂತೆ ಮಿತವಾಗಿ ಕ್ಯಾಮೊಮೈಲ್ ಬಳಸಿದರೆ ಏನೂ ತೊಂದರೆಯಿಲ್ಲ. ಆದರೆ, ಕೆಲವರಿಗೆ ಇದರಿಂದ ಅಲರ್ಜಿಗಳು ಉಂಟಾಗುವ ಸಾಧ್ಯತೆಯಿದೆ.

ಕ್ಯಾಮೊಮೈಲ್ ಬಳಕೆಯಿಂದಾಗುವ ಅಡ್ಡ ಪರಿಣಾಮಗಳು:

ಚಹಾದ ರೂಪದಲ್ಲಿ ಕ್ಯಾಮೊಮೈಲ್ ಅನ್ನು ಸೇವಿಸುವವರಿಗೆ ಇದರಿಂದ ಹೆಚ್ಚಿನ ಅಡ್ಡಪರಿಣಾಮ ಆಗುವುದಿಲ್ಲ. ನೇರವಾಗಿ ಕ್ಯಾಮೊಮೈಲ್ ಸೇವನೆ, ಶಾಂಪೂ ಬಳಕೆ, ಔಷಧಿಯಲ್ಲಿ ಬಳಕೆ ಮಾಡುವವರಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಕ್ಯಾಮೊಮೈಲ್ ಬಳಕೆಯಿಂದ ಆಗುವ ಕೆಲವು ಸಾಮಾನ್ಯ ಅಡ್ಡ ಪರಿಣಾಮಗಳೆಂದರೆ, ವಾಕರಿಕೆ, ತಲೆಸುತ್ತುವಿಕೆ, ಅತಿಸಾರ, ಅಲರ್ಜಿಯ ಪ್ರತಿಕ್ರಿಯೆ.

ಇದನ್ನೂ ಓದಿ: ದಿನವೂ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಾಗುವ ಬದಲಾವಣೆಗಳೇನು?

ಅಂದಹಾಗೆ, ಕ್ಯಾಮೊಮೈಲ್ ಹರ್ಬಲ್ ಮೆಡಿಸಿನ್​ಗಳಲ್ಲಿ ಬಳಸಲಾಗುವ ಒಂದು ಹೂವು. ಕ್ಯಾಮೊಮೈಲ್ ಟೀ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಕ್ಯಾಮೊಮೈಲ್ ಟೀ ಬ್ಯಾಗ್​ಗಳನ್ನು ಗ್ರೀನ್ ಟೀಯಂತೆ ಬಳಸಬಹುದು. ಈ ಚಹಾ ಗಾಯವನ್ನು ಮಾಗಿಸುವುದು, ಸಂಧಿವಾತ, ಸುಟ್ಟ ಗಾಯಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಕ್ಯಾಮೊಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ. ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ದೇಹದಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣಗಳನ್ನು ಉತ್ತಮ ಮಟ್ಟದಲ್ಲಿರಿಸುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಕ್ಯಾಮೊಮೈಲ್ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರ ಸೇವಿಸಿ

ಕ್ಯಾಮೊಮೈಲ್ ಟೀ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಶೀತ, ಅಸ್ವಸ್ಥತೆ, ನಿತ್ರಾಣ, ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ