ನೀವು ತಾಯಿಯಾಗಿದ್ದು ನಿಮಗೆ ಮಧುಮೇಹ (Diabetes) ಇದ್ದರೆ ನಿಮ್ಮ ಮಗುವಿಗೆ ಹಾಲುಣಿಸುವುದು ಹೇಗೆ ಚಿಂತಿಸುತ್ತಿದ್ದೀರಾ? ಒಳ್ಳೆಯ ಸುದ್ದಿ ಏನೆಂದರೆ, ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ನೀವು ಸ್ತನ್ಯಪಾನದೊಂದಿಗೆ ಮುಂದುವರಿಯಬಹುದು, ಇದು ನಿಮ್ಮ ಮಗುವಿಗೆ ಸಹ ಪ್ರಯೋಜನಕಾರಿಯಾಗಿದೆ. ಮಧುಮೇಹ ಹೊಂದಿರುವ ಹೊಸ ತಾಯಂದಿರು ಸಮಯಕ್ಕೆ ಸರಿಯಾಗಿ ತಿನ್ನಬೇಕು, ಸಾಕಷ್ಟು ನೀರು ಕುಡಿಯಬೇಕು, ಚೆನ್ನಾಗಿ ನಿದ್ದೆ ಮಾಡಬೇಕು ಮತ್ತು ಹಾಲುಣಿಸುವ ಮೊದಲು ಮತ್ತು ನಂತರ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು. ಇದರ ಹೊರತಾಗಿ ಇತರ ಪ್ರಮುಖ ಸಲಹೆಗಳು ಇಲ್ಲಿವೆ.
ನಿಮ್ಮ ಮಗುವಿಗೆ ಹಾಲುಣಿಸುವ ಸಮಯದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಮತೋಲಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಆಹಾರ ಮತ್ತು ನಿಮ್ಮ ಊಟದ ಸಮಯವನ್ನು ಕಾಳಜಿ ವಹಿಸುವುದು ಮುಖ್ಯವಾಗಿದೆ. ನಿಮ್ಮ ವೈದ್ಯರ ಸಲಹೆಯಂತೆ ನಿಮ್ಮ ಮಗುವಿಗೆ ಆಹಾರ ನೀಡುವ ಮೊದಲು ಅಥವಾ ಅದರ ನಂತರ ಲಘು ಉಪಹಾರವನ್ನು ತೆಗೆದುಕೊಳ್ಳಿ. ಮಗುವಿಗೆ ಹಾಲುಣಿಸುವ ಮೊದಲು ಮತ್ತು ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಮುಖ್ಯ. ಡಾ. ಮೋಹನ್ ಮಧುಮೇಹ ವಿಶೇಷ ಕೇಂದ್ರದ ಉಪಾಧ್ಯಕ್ಷ ಮತ್ತು ಸಲಹೆಗಾರರಾದ ಡಾ ರಂಜಿತ್ ಉನ್ನಿಕೃಷ್ಣನ್ ಅವರು ಮಧುಮೇಹ ಹೊಂದಿರುವ ತಾಯಂದಿರಿಗೆ ಹಾಲುಣಿಸುವ ಸಲಹೆಗಳು ನೀಡಿದ್ದಾರೆ. ಅವುಗಳು ಈ ಕೆಳಗಿನಂತಿವೆ:
ಡಯಾಬಿಟಿಸ್ ಇರುವ ತಾಯಂದಿರು ಸ್ತನಗಳ ನೋವನ್ನು ತಪ್ಪಿಸಲು ತಮ್ಮ ಮಕ್ಕಳಿಗೆ ಪ್ರತಿ ಸ್ತನದಿಂದ ಹಾಲುಣಿಸಬೇಕು. ಮೊಲೆತೊಟ್ಟುಗಳ ಹುಣ್ಣು ಅಥವಾ ಯಾವುದೇ ತೊಂದರೆಗಳಿದ್ದಲ್ಲಿ ಮೊದಲು ನಿಮ್ಮ ಆರೋಗ್ಯ ವೈದ್ಯರಿಂದ ಸಲಹೆ ಪಡೆಯಬೇಕು ಎಂದು ಡಾ. ಉನ್ನಿಕೃಷ್ಣನ್ ಸಲಹೆ ನೀಡುತ್ತಾರೆ. “ಮುಖ್ಯವಾಗಿ ತಾಯಿಯು ಸಂತೋಷದಿಂದ ಇರಬೇಕು ಮತ್ತು ವಿಶ್ರಾಂತಿ ಪಡೆಯಬೇಕು. ಸ್ತನ್ಯಪಾನದ ಯಶಸ್ಸಿಗೆ ತನ್ನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು” ಎಂದು ತಜ್ಞರು ಹೇಳುತ್ತಾರೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Sun, 7 August 22