ದಿನಕ್ಕೆ ಒಂದು ಹಿಡಿ ಗೋಡಂಬಿ ತಿಂದರೆ ಸಾಕು; ಪ್ರಯೋಜನ ಸಾಕಷ್ಟಿವೆ

|

Updated on: Aug 22, 2024 | 6:14 PM

28 ಗ್ರಾಂ ಗೋಡಂಬಿ ದೇಹಕ್ಕೆ ದೈನಂದಿನ ಅಗತ್ಯ ಪ್ರೋಟೀನ್ (5 ಗ್ರಾಂ), ಫೈಬರ್ (1 ಗ್ರಾಂ), 20 ಪ್ರತಿಶತ ಮೆಗ್ನೀಸಿಯಮ್ ಮತ್ತು 15 ಪ್ರತಿಶತ ಸತುವನ್ನು ಒದಗಿಸುತ್ತದೆ. ಗೋಡಂಬಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

ದಿನಕ್ಕೆ ಒಂದು ಹಿಡಿ ಗೋಡಂಬಿ ತಿಂದರೆ ಸಾಕು; ಪ್ರಯೋಜನ ಸಾಕಷ್ಟಿವೆ
Follow us on

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗೋಡಂಬಿ ತಿಂದರೆ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಗೋಡಂಬಿ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ವಿವಿಧ ರೋಗಗಳಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಗೋಡಂಬಿ ಸೇವನೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾದರೆ ಗೋಡಂಬಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

28 ಗ್ರಾಂ ಗೋಡಂಬಿ ದೈನಂದಿನ ಅಗತ್ಯ ಪ್ರೋಟೀನ್ (5 ಗ್ರಾಂ), ಫೈಬರ್ (1 ಗ್ರಾಂ), 20 ಪ್ರತಿಶತ ಮೆಗ್ನೀಸಿಯಮ್ ಮತ್ತು 15 ಪ್ರತಿಶತ ಸತುವನ್ನು ಒದಗಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಗೋಡಂಬಿಯನ್ನು ಪ್ರತಿದಿನ ಸೇವಿಸಬಹುದು. 3-4 ಗೋಡಂಬಿ ತಿಂದರೆ ಅದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಗೋಡಂಬಿ ಸೇವನೆಯಿಂದ ಬೊಜ್ಜು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಕ್ಯಾನ್ಸರ್ ತಡೆಗಟ್ಟುತ್ತದೆ:

ಗೋಡಂಬಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ. ಗೋಡಂಬಿಯನ್ನು ಪ್ರತಿದಿನ ಸೇವಿಸುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಹಲವು ಅಧ್ಯಯನಗಳು ಕಂಡುಕೊಂಡಿವೆ. ಗೋಡಂಬಿಯನ್ನು ತಿನ್ನುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ನಂತಹ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಣ್ಣುಗಳಿಗೆ ಒಳ್ಳೆಯದು:

ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ, ಕೆ ಮತ್ತು ಇ ಅತ್ಯಗತ್ಯ. ಗೋಡಂಬಿಯಲ್ಲಿರುವ ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೃಷ್ಟಿ ಮಂದವಾಗಿರುವ ಜನರು ತಮ್ಮ ದೈನಂದಿನ ಆಹಾರದಲ್ಲಿ 5 ರಿಂದ 6 ಸಂಪೂರ್ಣ ಗೋಡಂಬಿಯನ್ನು ತೆಗೆದುಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ