ಯಾರಿಗೆ ತಾನೇ ಯಂಗ್ ಆಗಿ ಕಾಣಲು ಇಷ್ಟ ಇಲ್ಲ ಹೇಳಿ, ವಯಸ್ಸು ಆಗಿದ್ದರೂ ಕೂಡ ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಅನೇಕ ರೀತಿಯ ಡಯಟ್ ಮತ್ತು ವ್ಯಾಯಾಮಗಳನ್ನು ಮಾಡುತ್ತಿರುವವರನ್ನು ನೋಡಬಹುದು. ಆದರೆ ಮುಖದ ಮೇಲಿನ ಚರ್ಮ ನಮ್ಮ ವಯಸ್ಸನ್ನು ರಿವೀಲ್ ಮಾಡುತ್ತದೆ. ಹೀಗಾಗಿ ಅರವತ್ತು ಆಗಿದ್ದರೂ ಯಂಗ್ ಆಗಿ ಕಾಣಲು ಬಯಸಿದರೆ ಈ ಕೆಲವು ಸರಳವಾದ ದೈನಂದಿನ ಅಭ್ಯಾಸಗಳನ್ನು ಪಾಲಿಸುವುದು ಬಹಳಷ್ಟು ಪರಿಣಾಮಕಾರಿಯಾಗಿದೆ.
ವಯಸ್ಸಾಗುವಿಕೆಯನ್ನು ತಪ್ಪಿಸಲು ಯುವಕರಾಗಿ ಕಾಣಲು ಬಯಸಿದರೆ, ನಿದ್ರೆಯ ಮೇಲೆ ಹೆಚ್ಚು ಗಮನಹರಿಸಿ. ಹೆಚ್ಚು ನಿದ್ರೆ ಆಲಸ್ಯವನ್ನು ಉಂಟುಮಾಡಿದರೆ, ಕಡಿಮೆ ನಿದ್ರೆಯೂ ಆರೋಗ್ಯವನ್ನು ಹದಗೆಡಿಸುತ್ತದೆ. ಹೀಗಾಗಿ ಪ್ರತಿದಿನ ಇಂತಿಷ್ಟು ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ನಿದ್ದೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಯೌವನ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಿ.
ಒಬ್ಬ ವ್ಯಕ್ತಿಯೂ ಆರೋಗ್ಯವಂತನಾಗಿ ಯೌವನದಿಂದ ಕೂಡಿರಲು ಸೇವಿಸುವ ಆಹಾರವು ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ದಿನನಿತ್ಯ ಸೇವಿಸುವ ಆಹಾರದಲ್ಲಿ ರಾಸಾಯನಿಕ ಮುಕ್ತವಾಗಿರಲಿ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇವಿಸುವುದು ಮುಖ್ಯ. ಹೆಚ್ಚು ಮಾಂಸ ತಿನ್ನುವುದನ್ನು ಹಾಗೂ ಹೆಚ್ಚು ಕರಿದ ಆಹಾರವನ್ನು ತಪ್ಪಿಸುವುದು ಉತ್ತಮ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ವಿಚಾರವು ತಿಳಿದಿರಲಿ.
ಇದನ್ನೂ ಓದಿ: ನೀವು ಅತಿಯಾದ ಚಳಿಯಿಂದ ಬಳಲುತ್ತಿದ್ದೀರಾ? ಈ ಪೋಷಕಾಂಶದ ಕೊರತೆಯೇ ಕಾರಣ
ನಿಮ್ಮನ್ನು ಸದೃಢವಾಗಿರಿಸಿಕೊಳ್ಳಲು, ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆದ್ದರಿಂದ, ನೀವು ಪ್ರತಿದಿನ ವ್ಯಾಯಾಮ ಅಥವಾ ಧ್ಯಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ನೀವು ಯಾವಾಗಲೂ ಫಿಟ್ ಆಗಿರುತ್ತೀರಿ. ವಯಸ್ಸಾಗಿದ್ದರೂ ಕೂಡ ಯುವಕರಂತೆ ಕಾಣಲು ಸಾಧ್ಯವಾಗುತ್ತದೆ.
ಆಲ್ಕೋಹಾಲ್ ಮತ್ತು ಸಿಗರೇಟ್ ಕುಡಿಯುವ ಅಭ್ಯಾಸವಿದ್ದರೆ, ತಕ್ಷಣವೇ ನಿಲ್ಲಿಸುವುದು ಉತ್ತಮ. ಅತಿಯಾದ ಮದ್ಯಪಾನವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮವನ್ನು ಶುಷ್ಕ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಈ ಅಭ್ಯಾಸಗಳು ವಯಸ್ಸಿಗೆ ಮುಂಚೆಯೇ ನಿಮ್ಮನ್ನು ವಯಸ್ಸಾಗುವಂತೆ ಮಾಡುತ್ತದೆ. ಹೀಗಾಗಿ ಈ ಅಭ್ಯಾಸವನ್ನು ಪ್ರಾರಂಭದಿಂದಲೂ ರೂಢಿಸಿಕೊಂಡರೆ ಸಣ್ಣ ವಯಸ್ಸಿನವರಂತೆ ಕಾಣಿಸಿಕೊಳ್ಳಲು ಸಾಧ್ಯ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ