Kannada News Health Health Tips : Eating these food for increase immunity cold Kannada News
Health Tips : ನೆಗಡಿ ಕಡಿಮೆಯಾಗಬೇಕಂದ್ರೆ ಈ ಆಹಾರವನ್ನು ಮಿಸ್ ಮಾಡ್ಲೆ ಬೇಡಿ
ಹವಾಮಾನ ಬದಲಾವಣೆಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಅದರಲ್ಲಿಈ ಚಳಿಗಾಲ ಆರಂಭವಾಯಿತೆಂದರೆ ಕೇಳುವುದೇ ಬೇಡ, ಶೀತ, ನೆಗಡಿ ಕಾಮನ್ ಆಗಿರುತ್ತದೆ. ಹೀಗಾಗಿ ಈ ಋತುಮಾನದಲ್ಲಿ ದೇಹವನ್ನು ಬೆಚ್ಚಗಿರಿಸುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು ಅತ್ಯಗತ್ಯ. ನಿಮಗೇನಾದ್ರೂ ಚಳಿಗಾಲದಲ್ಲಿ ವಿಪರೀತ ಶೀತವಾಗುತ್ತಿದ್ರೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತದೆ. ಈ ವೇಳೆ ಯಲ್ಲಿ ಹವಾಮಾನ ಬದಲಾವಣೆಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಈ ವೇಳೆಯಲ್ಲಿ ಸೇವಿಸುವ ಆಹಾರದಿಂದ ಹಿಡಿದು ಪ್ರತಿಯೊಂದರ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೆಲವರಿಗಂತೂ ವಿಪರೀತ ಶೀತ, ನೆಗಡಿ ಕೆಮ್ಮಿನಂತಹ ಸಮಸ್ಯೆಯು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಈ ವೇಳೆಯಲ್ಲಿ ರೋಗ ನಿರೋಧಕ ಹೆಚ್ಚಿಸುವ ಈ ಆಹಾರಗಳ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಶುಂಠಿ : ಶುಂಠಿಯು ಉರಿಯೂತ ಹಗ್ ಉತ್ಕರ್ಷಣ ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಡುಗೆ ಮನೆಯಲ್ಲಿ ಲಭ್ಯವಿರುವ ಈ ಶುಂಠಿಯನ್ನು ಬಳಸಿ ಚಹಾ ಅಥವಾ ಕಷಾಯವನ್ನು ತಯಾರಿಸಿ ಕುಡಿಯಬಹುದು. ಇಲ್ಲದಿದ್ದರೆ ಶುಂಠಿಯನ್ನು ಜಗಿದು ತಿನ್ನುವುದರಿಂದಲು ಚಳಿಗಾಲದಲ್ಲಿ ಕಾಡುವ ಶೀತ ಹಾಗೂ ನೆಗಡಿಯಿಂದ ಮುಕ್ತಿ ಹೊಂದಬಹುದು.
ಅರಿಶಿನ : ಅರಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದ್ದು ಇದು ದೇಹವನ್ನು ಬೆಚ್ಚಗೆ ಇಡಲು ಸಹಕಾರಿಯಾಗಿದೆ. ಇಲ್ಲದಿದ್ದರೆ ಆಹಾರ ಪದಾರ್ಥಗಳನ್ನು ತಯಾರಿಸುವಾಗ ನಿಯಮಿತವಾಗಿ ಅರಶಿನವನ್ನು ಬಳಸಿಕೊಳ್ಳಬಹುದು.
ನಿಂಬೆ : ವಿಟಮಿನ್ ಸಿ ಯ ಹೇರಳವಾಗಿರುವ ಈ ನಿಂಬೆಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲದೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಲಾಡ್ ಅಥವಾ ಬೆಚ್ಚಗಿನ ನೀರಿನಲ್ಲಿ ನಿಂಬೆ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.
ಬಾದಾಮಿ : ಬಾದಾಮಿಯಲ್ಲಿ ವಿಟಮಿನ್ ಇ, ಫೈಬರ್ ಹಾಗೂ ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರತಿದಿನ ಒಂದು ಹಿಡಿ ಬಾದಾಮಿಯನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದಲ್ಲದೆ, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ಪಾಲಕ್ : ಪಾಲಕ್ ಸೊಪ್ಪು ವಿಟಮಿನ್ ಎ, ಸಿ ಮತ್ತು ಕೆ ಯ ಅತ್ಯುತ್ತಮ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಸೂಪ್, ಪರಾಟಾ ಅಥವಾ ಸಲಾಡ್‌ಗಳ ರೂಪದಲ್ಲಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.