Health Tips: ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಏಕೆ ಕುಡಿಯಬಾರದು ಗೊತ್ತಾ? ಇಲ್ಲಿದೆ ವಿವರ

|

Updated on: Jun 29, 2024 | 8:58 AM

ನಮ್ಮಲ್ಲಿ ಸಾಕಷ್ಟು ಜನರಿಗೆ ಬಿಸಿನೀರಿಗೆ ತಣ್ಣೀರು ಅಥವಾ ತಣ್ಣೀರಿಗೆ ಬಿಸಿ ನೀರು ಸೇರಿಸಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ವಿಶೇಷವಾಗಿ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

Health Tips: ಬಿಸಿ ನೀರಿಗೆ ತಣ್ಣೀರು ಮಿಕ್ಸ್ ಮಾಡಿ ಏಕೆ ಕುಡಿಯಬಾರದು ಗೊತ್ತಾ? ಇಲ್ಲಿದೆ ವಿವರ
ಬಿಸಿ ಮತ್ತು ತಣ್ಣೀರಿನ ಮಿಶ್ರಣ
Follow us on

ತಣ್ಣೀರಿಗೆ ಬಿಸಿ ನೀರು ಅಥವಾ ಬಿಸಿ ನೀರಿಗೆ ತಣ್ಣೀರು ಮಿಕ್ಸ್​ ಮಾಡಿ ಕುಡಿಯುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಆದರೆ ಈ ರೀತಿಯ ಅಭ್ಯಾಸ ಒಳ್ಳೆದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಬಿಸಿನೀರಿನಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ. ಆದರೆ ಬಿಸಿ ನೀರಿಗೆ ತಣ್ಣೀರು ಸೇರಿಸಿದರೆ ಅದು ಕಲುಷಿತವಾಗುತ್ತದೆ. ಆದ್ದರಿಂದ ಎರಡನ್ನೂ ಸಂಯೋಜಿಸುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬಿಸಿನೀರು ವಾತ ಮತ್ತು ಕಫವನ್ನು ಶಾಂತಗೊಳಿಸುತ್ತದೆ. ಆದರೆ ತಣ್ಣೀರು ಎರಡನ್ನೂ ಮಿಶ್ರಣ ಮಾಡುವುದರಿಂದ ಕಫ ದೋಷ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಬಿಸಿ ಮತ್ತು ತಣ್ಣೀರಿನ ಮಿಶ್ರಣವು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಇದು ಉಬ್ಬುವಿಕೆಗೆ ಕಾರಣವಾಗುವುದಲ್ಲದೇ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ತಣ್ಣೀರು ಮತ್ತು ಬಿಸಿನೀರು ಮಿಶ್ರಣ ಮಾಡುವುದು ಸರಿಯಲ್ಲ.

ಇದನ್ನೂ ಓದಿ: Cancer fatigue treatment: ಕ್ಯಾನ್ಸರ್​ನಿಂದ ಆಯಾಸವೋ ಆಯಾಸ, ಇದನ್ನು ಹೇಗೆ ನಿಭಾಯಿಸುವುದು? ಇಲ್ಲಿದೆ ತಜ್ಞರ ಸಲಹೆ

ಹಾಗಾದರೆ ಯಾವ ನೀರು ಕುಡಿಯಬೇಕು?

ಮಣ್ಣಿನ ಪಾತ್ರೆಯಲ್ಲಿನ ನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ನೈಸರ್ಗಿಕವಾಗಿ ನೀರನ್ನು ತಂಪಾಗಿ ಮತ್ತು ಸ್ವಚ್ಛವಾಗಿರಿಸುತ್ತದೆ. ಇದು ನೀರಿನಲ್ಲಿರುವ ಖನಿಜಗಳನ್ನು ಸಹ ಸಂರಕ್ಷಿಸುತ್ತದೆ. ಮಣ್ಣಿನ ಮಡಿಕೆಗಳು ಸ್ಥಿರವಾದ, ಮಧ್ಯಮ ತಾಪಮಾನವನ್ನು ನಿರ್ವಹಿಸುತ್ತವೆ. ಆಯುರ್ವೇದದ ಪ್ರಕಾರ ಮಣ್ಣಿನ ಪಾತ್ರೆಯಲ್ಲಿನ ನೀರು ದೇಹಕ್ಕೆ ಒಳ್ಳೆಯದು. ಮಣ್ಣಿನ ಪಾತ್ರೆಯಲ್ಲಿ ಇಟ್ಟಿರುವ ನೀರಿನಲ್ಲಿ ಆಮ್ಲಜನಕವೂ ಬಂದು ಬೀಳುತ್ತದೆ. ಇದು ನೀರನ್ನು ತುಂಬಾ ತಂಪಾಗಿರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ವಿಶೇಷವಾಗಿ ಬಿಸಿ ವಾತಾವರಣದಲ್ಲಿ, ಈ ನೀರು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗದಂತೆ ಅಥವಾ ಕಫ ದೋಷವನ್ನು ಉಲ್ಬಣಗೊಳಿಸದೆ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ