Pregnancy Tips: ಗರ್ಭ ಧರಿಸಲು ಯಾವ ದಿನದಂದು ದಂಪತಿಗಳು ಲೈಂಗಿಕ ಕ್ರಿಯೆ ನಡೆಸಬೇಕು? ಈ ವೇಳಾಪಟ್ಟಿ ನೋಡಿ

ಮಕ್ಕಳಾಗದಿರಲು ಹಲವಾರು ರೀತಿಯ ಆರೋಗ್ಯ ಸಂಬಂಧಿ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳಿಗೆ ನಿಸರ್ಗದ ನಿಯಮಗಳ ಬಗ್ಗೆ ಅರಿವಿಲ್ಲದಿದ್ದಾಗ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. ಅಂದರೆ ಋತುಚಕ್ರದ ದಿನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಅಥವಾ ಅಂಡಾಣು ಬಿಡುಗಡೆಯಾಗುವ ದಿನಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಇತ್ಯಾದಿ.

Pregnancy Tips: ಗರ್ಭ ಧರಿಸಲು ಯಾವ ದಿನದಂದು ದಂಪತಿಗಳು ಲೈಂಗಿಕ ಕ್ರಿಯೆ ನಡೆಸಬೇಕು? ಈ ವೇಳಾಪಟ್ಟಿ ನೋಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2024 | 3:15 PM

ದಾಂಪತ್ಯ ಪ್ರಾರಂಭಗೊಂಂಡ ಬಳಿಕ ಹೊಸ ಜೀವನದ ಆರಂಭವಾಗುತ್ತದೆ. ಬಳಿಕ ತಮ್ಮದೇ ಕುಟುಂಬ ಬೆಳೆಯುತ್ತದೆ. ಆದರೆ ಇದು ಎಲ್ಲರಿಗೂ ಹೇಳಿದಷ್ಟು ಸುಲಭದ ಮಾತಲ್ಲ. ಏಕಂದರೆ ಪ್ರತಿ ದಂಪತಿಗೂ ತಮ್ಮದೊಂದು ಸಂತಾನ ಬೇಕು ಎಂಬ ಕನಸಿರುವುದು ಸಹಜ. ಅದನ್ನು ನನಸು ಮಾಡಿಕೊಳ್ಳಲು ಹಲವಾರು ರೀತಿಯ ಸಮಸ್ಯೆಗಳು ಬರಬಹುದು ಅದರಲ್ಲಿ ಕೆಲವರಿಗೆ ಸಂತಾನ ಭಾಗ್ಯ ಪಡೆಯಲು ಯಾವಾಗ ಸೇರಬೇಕು? ಸರಿಯಾದ ಸಮಯ ಯಾವುದು ಎಂಬುದರ ಬಗ್ಗೆ ತಿಳಿದಿರುವುದಿಲ್ಲ ಇದು ಕೂಡ ಮಕ್ಕಳಾಗದಿರಲು ಕಾರಣವಾಗಬಹದು.

ಮಕ್ಕಳಾಗದಿರಲು ಹಲವಾರು ರೀತಿಯ ಆರೋಗ್ಯ ಸಂಬಂಧಿ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳಿಗೆ ನಿಸರ್ಗದ ನಿಯಮಗಳ ಬಗ್ಗೆ ಅರಿವಿಲ್ಲದಿದ್ದಾಗ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. ಅಂದರೆ ಋತುಚಕ್ರದ ದಿನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಅಥವಾ ಅಂಡಾಣು ಬಿಡುಗಡೆಯಾಗುವ ದಿನಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಇತ್ಯಾದಿ. ಹಾಗಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಮುಂದುವರೆದರೆ ಇನ್ನಷ್ಟು ಹೆಚ್ಚಿನ ವರ್ಷಗಳ ಕಾಲ ನಿರಾಶೆ ಕಾಡಬಹುದು.

ಯಾವ ದಿನದಂದು ದಂಪತಿಗಳು ಸೇರಬೇಕು?

ತಿಂಗಳ ಋತುಚಕ್ರ ಶುರುವಾದ 7 ದಿನಗಳ ಬಳಿಕ ದಂಪತಿ ಲೈಂಗಿಕ ಕ್ರಿಯೆ ನಡೆಸಬೇಕು. ಪ್ರತಿದಿನ ಅಥವಾ ಎರಡು ದಿನಕ್ಕೆ ಒಂದು ಬಾರಿ ಮಿಲನಕ್ರಿಯೆ ನಡೆಸಿದರೆ ಸೂಕ್ತ. ಈ ಸಮಯದಲ್ಲಿ ಸೇರಿದರೆ ನೀವು ಗರ್ಭ ಧರಿಸುವ ಸಾಧ್ಯತೆ ಹೆಚ್ಚು. ಮತ್ತೆ ಬರುವ ತಿಂಗಳ ಋತುಚಕ್ರ ಸಮಯದ ಹಿಂದಿನ 8 ದಿನ ದಂಪತಿ ಸೇರಬಾರದು. ಈ ವೇಳಾ ಪಟ್ಟಿ ಪಾಲಿಸಿ ನೋಡಿ ಗರ್ಭ ನಿಲ್ಲಲು ಸಹಾಯವಾಗುತ್ತದೆ.

ಇದನ್ನೂ ಓದಿ; ಅತಿಯಾದ ಶಬ್ದ ಮಕ್ಕಳ ಮೆದುಳನ್ನು ಹಾನಿಗೊಳಿಸುತ್ತದೆ; ಅಧ್ಯಯನದಿಂದ ಬಹಿರಂಗ

ಇದಕ್ಕೂ ಮೊದಲು ಅನುಭವವುಳ್ಳ ಪ್ರಸೂತಿ ತಜ್ಞರ ಬಳಿ ಗಂಡ ಹೆಂಡತಿ ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಿಕೊಂಡು ಗರ್ಭಧಾರಣೆಗೆ ಏನಾದರೂ ಅಡ್ಡಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಗರ್ಭಧಾರಣೆಗೆ ಏನಾದರೂ ತೊಡಕಿದ್ದಲ್ಲಿ ಸೂಕ್ತ ಚಿಕಿತ್ಸೆಗಳಿಂದ ನಿವಾರಿಸಬಹುದು. ಜೊತೆಗೆ ದಂಪತಿ ತಮ್ಮ ಫಲವತ್ತತೆಯ ದಿನಗಳು ಯಾವುದು ಎಂದು ತಜ್ಞರಿಂದ ಅರಿತುಕೊಂಡು ಆ ನಿರ್ದಿಷ್ಟ ದಿನಗಳಲ್ಲಿ ಮಿಲನಗೊಳ್ಳಬೇಕು. ಆಗ ಗರ್ಭಧಾರಣೆಯ ಸಾಧ್ಯತೆ ಗರಿಷ್ಟವಾಗಿರುತ್ತದೆ. ಈ ಎಲ್ಲಾ ಸಲಹೆಗಳು ಮತ್ತು ವೇಳಾ ಪಟ್ಟಿಯನ್ನು ಸರಿಯಾಗಿ ಪಾಲಿಸುವುದರಿಂದ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಗರ್ಭ ಧರಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ