Health Tips: ಅತಿಯಾದ ಶಬ್ದ ಮಕ್ಕಳ ಮೆದುಳನ್ನು ಹಾನಿಗೊಳಿಸುತ್ತದೆ; ಅಧ್ಯಯನದಿಂದ ಬಹಿರಂಗ

ಶಬ್ದವು ಮಕ್ಕಳ ಬೆಳವಣಿಗೆಯ ಜೊತೆಗೆ ಮೆದುಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚುತ್ತಿರುವ ಶಬ್ದವು ನಮ್ಮ ಕಿವಿಗಳಿಗೆ ಮಾತ್ರವಲ್ಲ, ಮಕ್ಕಳಿಗೂ ಹಾನಿಕಾರಕ ಎಂದು ಇತ್ತೀಚಿನ ಅಧ್ಯಯನವು ತೋರಿಸಿ ಕೊಟ್ಟಿದೆ. ಸಂಚಾರ ಮತ್ತು ಇತರ ಮೂಲಗಳಿಂದ ಬರುವ ಶಬ್ದವು ಮಕ್ಕಳ ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕಡಿಮೆ ಮಾಡುವುದರೊಂದಿಗೆ ಅವರ ಅಧ್ಯಯನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.

Health Tips: ಅತಿಯಾದ ಶಬ್ದ ಮಕ್ಕಳ ಮೆದುಳನ್ನು ಹಾನಿಗೊಳಿಸುತ್ತದೆ; ಅಧ್ಯಯನದಿಂದ ಬಹಿರಂಗ
Follow us
| Updated By: ಅಕ್ಷತಾ ವರ್ಕಾಡಿ

Updated on: Jun 28, 2024 | 5:35 PM

ದಿನೇ ದಿನೇ ಹೆಚ್ಚುತ್ತಿರುವ ಶಬ್ದವು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದರ ಬಗ್ಗೆ ಅರಿವಿರಬಹುದು ಆದರೆ ಇದು ಮಕ್ಕಳ ಬೆಳವಣಿಗೆಯ ಜೊತೆಗೆ ಮೆದುಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೆಚ್ಚುತ್ತಿರುವ ಶಬ್ದವು ನಮ್ಮ ಕಿವಿಗಳಿಗೆ ಮಾತ್ರವಲ್ಲ, ಮಕ್ಕಳಿಗೂ ಹಾನಿಕಾರಕ ಎಂದು ಇತ್ತೀಚಿನ ಅಧ್ಯಯನವು ತೋರಿಸಿ ಕೊಟ್ಟಿದೆ. ಸಂಚಾರ ಮತ್ತು ಇತರ ಮೂಲಗಳಿಂದ ಬರುವ ಶಬ್ದವು ಮಕ್ಕಳ ಏಕಾಗ್ರತೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕಡಿಮೆ ಮಾಡುವುದರೊಂದಿಗೆ ಅವರ ಅಧ್ಯಯನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.

ಜರ್ಮನಿಯ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದಾರೆ. 5 ರಿಂದ 12 ವರ್ಷ ವಯಸ್ಸಿನ 500 ಕ್ಕೂ ಹೆಚ್ಚು ಮಕ್ಕಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡಿದ್ದಾರೆ. ಈ ಮಕ್ಕಳನ್ನು ವಿವಿಧ ಮಟ್ಟದಲ್ಲಿ ಶಬ್ದವಿರುವ ಜಾಗದಲ್ಲಿ ಅಧ್ಯಯನ ಮಾಡುವುದರ ಜೊತೆಗೆ ಕೆಲವು ಕೆಲಸಗಳನ್ನು ಪೂರ್ಣ ಮಾಡಲು ಹೇಳಲಾಗಿದ್ದು, ಆ ಮೂಲಕ ಗದ್ದಲದ ವಾತಾವರಣದಲ್ಲಿದ್ದ ಮಕ್ಕಳು ಏಕಾಗ್ರತೆ ಮತ್ತು ಕಲಿಕೆಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹೆಚ್ಚು ಶಬ್ದವು ಮಕ್ಕಳ ಸ್ಮರಣೆ, ಏಕಾಗ್ರತೆ ಮತ್ತು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.

ಮಾನಸಿಕ ಬೆಳವಣಿಗೆ ಕುಂಠಿತ:

ಶಬ್ದ ಮಕ್ಕಳ ಮೆದುಳಿನಲ್ಲಿ ಒತ್ತಡ ಉಂಟುಮಾಡುತ್ತದೆ, ಜೊತೆಗೆ ಇದು ಏಕಾಗ್ರತೆ ಮತ್ತು ಕಲಿಕೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಮೆದುಳು ಹೆಚ್ಚು ಶ್ರಮಿಸುತ್ತದೆ. ಇದು ಆಯಾಸ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಶಬ್ದ ಮಾಲಿನ್ಯವು ಕಿವಿಗಳ ಮೇಲೆ ಮಾತ್ರವಲ್ಲದೆ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತೋರಿಸಿಕೊಟ್ಟಿದೆ.

ಇದನ್ನೂ ಓದಿ: ಪುರುಷರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಲು ಕಾರಣವೇನು? ಇಲ್ಲಿದೆ ಸರಳ ಸಲಹೆ

ಇದಕ್ಕೆ ಪರಿಹಾರವೇನು?

  • ಶಾಲೆಗಳು ಮತ್ತು ಮಕ್ಕಳ ವಸತಿ ಪ್ರದೇಶಗಳಲ್ಲಿ ಶಬ್ದದ ಮಟ್ಟವನ್ನು ಕಡಿಮೆ ಮಾಡಬೇಕು.
  • ಮಕ್ಕಳನ್ನು ಕರ್ಕಶ ಶಬ್ದದಿಂದ ರಕ್ಷಿಸಲು, ಅವರಿಗೆ ಮನೆಯಲ್ಲಿ ಶಾಂತ ವಾತಾವರಣವನ್ನು ನೀಡಬೇಕು.
  • ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ವಹಿಸುವ ಪೋಷಕರು ಮತ್ತು ಶಿಕ್ಷಕರಿಗೆ ಈ ಅಧ್ಯಯನವು ಮುಖ್ಯವಾಗಿದೆ.
  • ಹಾಗಾಗಿ ಶಬ್ದದಿಂದ ಮಕ್ಕಳನ್ನು ರಕ್ಷಿಸಲು ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಾಂತ ವಾತಾವರಣವನ್ನು ಒದಗಿಸಲು ಪ್ರಯತ್ನಿಸಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ