AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dengue cases in Karnataka: ಕರ್ನಾಟಕದಾದ್ಯಂತ ಡೆಂಗ್ಯೂ ಕೇಕೆ: ಈ ಬಾರಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಕರಣ, ಇಲ್ಲಿದೆ ವಿವರ

ಕರ್ನಾಟಕದಾದ್ಯಂತ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದೆ. ಸೋಂಕು ಹರಡುವಿಕೆ ತಡೆಗೆ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಮಧ್ಯೆ, ಕಳೆದ ವರ್ಷಕ್ಕಿಂತ ಈ ವರ್ಷ ದುಪ್ಪಟ್ಟು ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

Dengue cases in Karnataka: ಕರ್ನಾಟಕದಾದ್ಯಂತ ಡೆಂಗ್ಯೂ ಕೇಕೆ: ಈ ಬಾರಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಕರಣ, ಇಲ್ಲಿದೆ ವಿವರ
ಕರ್ನಾಟಕದಾದ್ಯಂತ ಡೆಂಗ್ಯೂ ಕೇಕೆ
Vinayak Hanamant Gurav
| Edited By: |

Updated on:Jun 28, 2024 | 9:55 AM

Share

ಬೆಂಗಳೂರು, ಜೂನ್ 28: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಅತಿಯಾಗತೊಡಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಕಡೆಗಳಲ್ಲಿಯೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದು ಪಾಲಿಕೆ ನಿದ್ದೆ ಗೆಡಸಿದೆ. ಹೀಗಾಗಿ ಅಲರ್ಟ್ ಆಗಿರುವ ಪಾಲಿಕೆ ನಿಯಂತ್ರಣಕ್ಕೆ ಮುಂದಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಜೋರಾಗಿದೆ. ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜೂನ್ ತಿಂಗಳಿನಲ್ಲಿ ದುಪ್ಪಟ್ಟು ಕೇಸ್‌ಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ.

2022ರಲ್ಲಿ ಇಡೀ ವರ್ಷಕ್ಕೆ 2335 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದವು. ಆದರೆ, 2023ರಲ್ಲಿ 11,136 ಕೇಸ್‌ಗಳು ಪತ್ತೆಯಾಗಿದ್ದವು. ಈ ವರ್ಷ ಜನವರಿಯಿಂದ ಜೂನ್‌ ತಿಂಗಳವರೆಗೆ 1530 ಡೆಂಗ್ಯೂ ಕೇಸ್‌ಗಳು ದಾಖಲಾಗಿದ್ದವು.

ರಾಜ್ಯದ ಇತರೆಡೆ ಕೂಡ ಡೆಂಗ್ಯೂ ಕೇಸ್‌ಗಳು ಹೆಚ್ಚುತ್ತಲೇ ಇವೆ. ಬೆಂಗಳೂರಿನಲ್ಲಿ ಡೆಂಗ್ಯೂ ತಡೆಯೊಡ್ಡಲು ಬಿಬಿಎಂಪಿ ಹಲವು ಕ್ರಮಗಳನ್ನ ಕೈಗೊಂಡಿದೆ.

ರಾಜಕೀಯ ಸಮರಕ್ಕೆ ಕಾರಣವಾಯಿತು ಡೆಂಗ್ಯೂ

ಡೆಂಗ್ಯೂ ಕೇಸ್‌ ಹೆಚ್ಚಳ ವಿಚಾರ ರಾಜಕೀಯ ಸಮರಕ್ಕೂ ಕಾರಣವಾಗಿದೆ. ಆರೋಗ್ಯ ಕಾಪಾಡುವ ಅಧಿಕಾರಿಗಳಿಗೇ ಡೆಂಗ್ಯೂ ಬಂದಿದೆ. ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆ ಮಾಡಿಕೊಂಡು ಮಲಗಿದೆ ಎಂದು ವಿಪಕ್ಷ ನಾಯಕ ಅಶೋಕ್‌ ಕಿಡಿಕಾರಿದ್ದಾರೆ. ಆರೋಗ್ಯ ಸಚಿವರು ನಾಪತ್ತೆ ಆಗಿದ್ದಾರೆ ಅಂತಾ ಬಿಜೆಪಿ ಎಂಎಲ್​ಸಿ ರವಿಕುಮಾರ್‌ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಕೀಯ ಸಮರವೂ ಜೋರಾಗುತ್ತಿದೆ. ಜನರು ಕೂಡ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ಓದಿ: ಡೆಂಗ್ಯೂ ಜ್ವರವಿದ್ದಾಗ ಈ ಆಹಾರಗಳನ್ನು ಸೇವಿಸಿ: ಡಾ ರವಿಕಿರಣ ಪಟವರ್ಧನ

ಕರ್ನಾಟಕ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 2023ಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ60 ರಷ್ಟು ಏರಿಕೆಯಾಗಿರುವ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತಷ್ಟು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನ ವಾತಾವರಣ ಆಗಾಗ ಬದಲಾಗುತ್ತಿರುವುದು, ಮಳೆ ನೀರು ನಿಲ್ಲುವುದು ಮತ್ತಿತರ ವಿಚಾರಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಇದು ಡೆಂಗ್ಯೂ ಜ್ವರ ಪ್ರಕರಣಗಳ ಏರಿಕೆಗೆ ಪೂರಕವಾಗುತ್ತಿದೆ. ಸದ್ಯ ರಾಜ್ಯದಲ್ಲಿ ಶೇ60 ರಷ್ಟು ಜನರಿಗೆ ಡೆಂಗ್ಯೂ ಬಂದಿದೆ. ಇದರ ಜೊತೆಗೆ ಇತರ ಜ್ವರದ ಕೇಸ್​ಗಳು ಕೂಡ ಏರಿಕೆ ಕಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:20 am, Fri, 28 June 24

Follow Us
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ
‘ವಸುದೇವ ಕುಟುಂಬ’ ಧಾರಾವಾಹಿ ನಿರ್ಮಾಪಕರ ಮೇಲೆ ಉರಿದು ಬಿದ್ದ ನಟಿ ಹಂಸ