ಇತ್ತೀಚಿನ ದಿನಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹಾಗಾಗಿ ಆರೋಗ್ಯದ ಕಡೆ ಗಮನಹರಿಸುವುದು ಅತೀ ಅಗತ್ಯ.ಮೇಲಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಅರಿವು ಮೂಡಿಸುವುದು ಅತೀ ಅಗತ್ಯ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಆದರೆ, ಜ್ವರದ ಹೊರತುಪಡಿಸಿ ಕೆಲವರ ದೇಹ ಯಾವಾಗಲೂ ಬೆಚ್ಚಗಿರುತ್ತದೆ. ಶೀತ ವಾತಾವರಣದಲ್ಲಿಯೂ ಕೆಲವರ ಅಂಗೈಯನ್ನು ಸ್ಪರ್ಶಿಸಿದಾಗ ಬೆಚ್ಚಗಿರುತ್ತದೆ. ಇಂತಹ ಲಕ್ಷಣಗಳನ್ನು ಜನರು ನಿರ್ಲಕ್ಷ್ಯಿಸುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಹೊತ್ತು ಬಿಸಿಲಿನಲ್ಲಿ ಕೆಲಸ ಮಾಡುವವರ ದೇಹ ಹೆಚ್ಚು ಬಿಸಿಯಾಗಿರುತ್ತದೆ. ಈ ಸ್ಥಿತಿಯನ್ನು ಹೈಪೋಥರ್ಮಿಯಾ ಎಂದೂ ಕರೆಯುತ್ತಾರೆ.ಆದರೆ ಇದು ಜ್ವರವಲ್ಲ. ಇದಲ್ಲದೆ ಹೆಚ್ಚಿನ ಥೈರಾಯ್ಡ್ ಮಟ್ಟವನ್ನು ಹೊಂದಿರುವ ಜನರ ದೇಹವು ಸ್ವಲ್ಪ ಬಿಸಿಯಾಗಿರುತ್ತದೆ. ಆದರೆ ದೇಹದ ಅತಿಯಾದ ತಾಪದ ಜೊತೆಗೆ ಬೆವರು, ಭೇದಿ, ಆತಂಕವಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಸೀಲಿಯಾಕ್ ಕಾಯಿಲೆ ಎಂದರೇನು? ರೋಗಲಕ್ಷಣಗಳೇನು?
ದೇಹದಲ್ಲಿ ತಾಪಮಾನವು ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿದರೆ, ಅದು ಯಾವುದೇ ಸೋಂಕಿನ ಸಂಕೇತವೂ ಆಗಿರಬಹುದು. ಎದೆ ಅಥವಾ ಹೊಟ್ಟೆಯ ಸೋಂಕಿನಲ್ಲಿ, ಸಾಮಾನ್ಯವಾಗಿ ಸೌಮ್ಯವಾದ ಜ್ವರ ಇರುತ್ತದೆ. ಇದು ಸೋಂಕನ್ನು ಸೂಚಿಸುತ್ತದೆ. ದೇಹದ ಯಾವುದೇ ಅಂಗಗಳಲ್ಲಿ ತಾಪಮಾನ ಹೆಚ್ಚಾದರೆ, ಅದು ಆ ಅಂಗದಲ್ಲಿ ಸೋಂಕಿನ ಸಂಕೇತವಾಗಿದೆ. ಈ ಪರಿಸ್ಥಿತಿಯಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Thu, 23 May 24