Celiac disease: ಸೀಲಿಯಾಕ್ ಕಾಯಿಲೆ ಎಂದರೇನು? ರೋಗಲಕ್ಷಣಗಳೇನು?
ನಿಮ್ಮ ಮಗುವಿಗೆ ಗೋಧಿ ಅಥವಾ ಇದರ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಿದ ಬಳಿಕ ಹೊಟ್ಟೆ ನೋವು ಬರುತ್ತದೆಯೇ? ಹಾಗಾದರೆ ಇದು ಸೀಲಿಯಾಕ್ ಕಾಯಿಲೆಯಾಗಿರಬಹುದು. ಈ ರೋಗವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದರೂ, ಈ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವುದು ಸಾಮಾನ್ಯವಾಗಿದೆ.
ನಿಮ್ಮ ಮಗುವಿಗೆ ಗೋಧಿ ಅಥವಾ ಇದರ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಿದ ಬಳಿಕ ಹೊಟ್ಟೆ ನೋವು ಬರುತ್ತದೆಯೇ? ಹಾಗಾದರೆ ಇದು ಸೀಲಿಯಾಕ್ ಕಾಯಿಲೆಯಾಗಿರಬಹುದು. ಈ ರೋಗವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದರೂ, ಈ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವುದು ಸಾಮಾನ್ಯವಾಗಿದೆ. ಸೀಲಿಯಾಕ್ ರೋಗವು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ಗೋಧಿ, ಬಾರ್ಲಿಗಳಲ್ಲಿ ಕಂಡುಬರುವ ಗ್ಲುಟೆನ್ ಎಂಬ ಪ್ರೋಟೀನ್ ಸೇವನೆಯಿಂದ ಉಂಟಾಗುತ್ತದೆ. ಈ ಗ್ಲುಟೆನ್ ಸೇವನೆಯು ಸಣ್ಣ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಈ ಕಾರಣದಿಂದಾಗಿ, ಅಲರ್ಜಿ, ಹೊಟ್ಟೆಯಲ್ಲಿ ನೋವು, ಅತಿಸಾರವೂ ಉಂಟಾಗುತ್ತದೆ.
ವೈದ್ಯರ ಪ್ರಕಾರ, ಗೋಧಿಯಿಂದ ತಯಾರಿಸಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ನಿಮ್ಮ ಮಗುವಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದರೆ ಖಂಡಿತವಾಗಿಯೂ ವೈದ್ಯರ ಬಳಿ ಪರೀಕ್ಷಿಸಬೇಕು. ಡಾ. ಶಿವಾನಿ ದೇಸ್ವಾಲ್ ಹೇಳುವ ಪ್ರಕಾರ ಎರಡು ರೀತಿಯ ಸೀಲಿಯಾಕ್ ಕಾಯಿಲೆಗಳಿವೆ, ಒಂದು ಹೊಟ್ಟೆಗೆ ಸಂಬಂಧಿಸಿದೆ ಇನ್ನೊಂದು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳುತ್ತಾರೆ.
ರೋಗಲಕ್ಷಣಗಳೇನು?
ಸಾಮಾನ್ಯವಾಗಿ ಮಕ್ಕಳಲ್ಲಿ ಅತಿಸಾರ, ಹೊಟ್ಟೆ ನೋವು, ಊತ, ವಾಂತಿ ಮತ್ತು ತೂಕ ನಷ್ಟದಂತಹ ರೋಗಲಕ್ಷಣಗಳು ಕಂಡು ಬರಬಹುದು. ಈ ರೋಗದ ಎರಡನೇ ಹಂತದಲ್ಲಿ ರಕ್ತಹೀನತೆ, ಮಲಬದ್ಧತೆ, ಕಿವಿ ನೋವು, ಡರ್ಮಟೈಟಿಸ್ ಹರ್ಪೆಟಿಫಾರ್ಮ್, ಆಸ್ಟಿಯೊಪೆನಿಯಾ/ ಆಸ್ಟಿಯೊಪೊರೋಸಿಸ್, ಹೆಪಟೈಟಿಸ್ ನಂತಹ ಸಮಸ್ಯೆಗಳು ಕಂಡುಬರುತ್ತವೆ.
ಯಾವ ಜನರಿಗೆ ಸ್ಕ್ರೀನಿಂಗ್ ಅಗತ್ಯವಿದೆ?
ಟೈಪ್ 1 ಮಧುಮೇಹ, ಆಟೋಇಮ್ಯೂನ್ ಲಿವರ್ ಕಾಯಿಲೆ ಮತ್ತು ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿರುವವರು ಸಹ ಪರೀಕ್ಷೆಗೆ ಒಳಗಾಗಬೇಕು. ಗರ್ಭಿಣಿಯರಲ್ಲಿಯೂ ಈ ಸಮಸ್ಯೆಗಳು ಕಂಡುಬರಬಹುದು ಅವಳಿಂದ ಮಗುವಿಗೂ ಅದು ಬರಬಹುದು ಹಾಗಾಗಿ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಬೇಕಾ? ನಿಮ್ಮ ಆಹಾರ ಕ್ರಮ ಹೇಗಿರಬೇಕು, ಸರ್ಕಾರದ ಆಹಾರ ಮಾರ್ಗಸೂಚಿಯಲ್ಲಿ ಏನಿದೆ?
ಹೇಗೆ ತಡೆಗಟ್ಟುವುದು?
ಸೀಲಿಯಾಕ್ ಕಾಯಿಲೆಯನ್ನು ತಡೆಗಟ್ಟಲು, ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಜೊತೆಗೆ ಗ್ಲುಟೆನ್ ಮುಕ್ತ ಆಹಾರವನ್ನು ತೆಗೆದುಕೊಳ್ಳಬೇಕು. ಗೋಧಿ, ಬಾರ್ಲಿಯಲ್ಲಿ ಮಾಡಿದ ಆಹಾರಗಳನ್ನು ಸೇವನೆ ಮಾಡಬೇಡಿ. ನಿಮ್ಮ ಆಹಾರದಲ್ಲಿ ರಾಗಿ, ಜೋಳವನ್ನು ಸೇರಿಸಿ. ಸೀಲಿಯಾಕ್ ರೋಗಲಕ್ಷಣಗಳು ಗೋಚರಿಸಿದರೆ ನೀವು ವೈದ್ಯರನ್ನು ಸಂಪರ್ಕಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ