Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ

|

Updated on: May 19, 2021 | 1:56 PM

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿಯೇ ಇದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯವಾಗಿರಿ.

Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ
ಹಣ್ಣುಗಳು
Follow us on

ಕೊವಿಡ್​ 19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅನೇಕ ರಾಜ್ಯಗಳು ಲಾಕ್​ಡೌನ್​ ಮೊರೆ ಹೋಗಿವೆ. ಮನೆಯಲ್ಲಿಯೇ ಇದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ವ್ಯವಸ್ಥೆ ಬದಲಾಗಬೇಕು. ಉತ್ತಮ ಪ್ರೋಟೀನ್​ಯುಕ್ತ ಆಹಾರವೇ ನಿಮ್ಮದಾಗಿರಬೇಕು. ಹಾಗಿದ್ದಾಗ ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಪೋಷಕಾಂಶಯುಕ್ತ ಆಹಾರ ಸಾಮಗ್ರಿಗಳೇ ತುಂಬಿರಲಿ.

ಕೊರೊನಾ ಸೋಂಕು ತಡೆಗಟ್ಟಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ದಿನನಿತ್ಯ ಯೋಗಾಭ್ಯಾಸ ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ಪೌಷ್ಠಿಕಾಂಶವಿರಬೇಕು. ಆಗ ನಮ್ಮ ದೇಹವು ರೋಗದ ವಿರುದ್ಧ ಹೋರಾಡಲು ಸಾಧ್ಯ. ಹಾಗಿದ್ದರೆ, ನಾವು ನಿತ್ಯ ಯಾವ ಪದಾರ್ಥಗಳನ್ನು ಸೇವಿಸಬೇಕು? ನಮ್ಮ ದಿನನಿತ್ಯದ ಆಹಾರ ಕ್ರಮ ಹೇಗಿರಬೇಕು ಎಂಬುದರ ಕುರಿತಾಗಿ ಒಮ್ಮೆ ಯೋಚಿಸಿ.

ಆದಷ್ಟು ಬಿಸಿ ನೀರು ಕುಡಿಯಿರಿ. ಹವಾಮಾನ ಏರು-ಪೇರಿನಿಂದಾಗಿ ಆರೋಗ್ಯದ ಸ್ಥಿತಿ ಹದಗೆಟ್ಟಿರಬಹುದು. ಶೀತ-ಜ್ವರ-ಕೆಮ್ಮುಗಳಂತಹ ಸಮಸ್ಯೆ ಉಂಟಾಗುವುದು ಹೆಚ್ಚು. ಹೀಗಿದ್ದಾಗ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳಿತು. ಸಮಯಕ್ಕೆ ಸರಿಯಾಗಿ ಊಟ-ಆಹಾರ ಸೇವನೆ ಮಾಡುವುದು ಉತ್ತಮ. ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ಕ್ರಮ ರೂಢಿಯಲ್ಲಿದ್ದರೆ ರೋಗಗಳಿಂದ ದೂರವಿರಬಹುದಲ್ಲವೇ? ಹಾಗಿದ್ದರೆ ಅಡುಗೆ ಮನೆಯಲ್ಲಿ ಯಾವ ಯಾವ ಪೌಷ್ಠಿಕಾಂಶಯುಕ್ತ ಆಹಾರ ಸಾಮಗ್ರಿಗಳಿರಬೇಕು ಎಂಬುದರ ಬಗ್ಗೆ ಗಮನಿಸೋಣ.

ಹೆಚ್ಚು ಫೈಬರ್​ಯುಕ್ತ ಆಹಾರ, ಪ್ರೋಟೀನ್​ಗಳು, ಕಾರ್ಬೋಹೈಡ್ರೇಟ್​ಗಳು, ಪೋಷಕಾಂಶಗಳು ದೇಹದ ಆರೋಗ್ಯ ಸುರಕ್ಷತೆಗೆ ಬೇಕು. ಈ ನಿಟ್ಟಿನಲ್ಲಿ ನಿಮ್ಮ ಅಡುಗೆ ಮನೆ ಯಾವ ಯಾವ ಸಾಮಗ್ರಿಗಳಿಂದ ತುಂಬಿರಬೇಕು? ಎಂಬುದನ್ನು ನೋಡೋಣ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ದೇಹಕ್ಕೆ ಪೋಷಕಾಂಶ ಒದಗಿಸುವ ಆಹಾರ ಸಾಮಗ್ರಿಗಳನ್ನು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ತರಕಾರಿಗಳು, ಹಣ್ಣುಗಳಿಂದ ಉತ್ತಮ ಪ್ರೋಟೀನ್​ಗಳನ್ನು ಹಾಗೂ ಫೈಟೊನ್ಯೂಟ್ರಿಯಂಟ್​ಗಳನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಧಾನ್ಯಗಳು: ಬಾರ್ಲಿ, ರಾಗಿ, ಅಕ್ಕಿ, ರವೆ, ಗೋಧಿ ಹಿಟ್ಟು

ಸೊಪ್ಪು: ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು, ಕರಿಬೇವಿನ ಸೊಪ್ಪು,

ತರಕಾರಿಗಳು: ಸೋರೇಕಾಯಿ, ಬೀನ್ಸ್​, ಬದನೆಕಾಯಿ

ಹಣ್ಣುಗಳು: ಹುಣಸೆ ಹಣ್ಣು, ಜಾಕ್​ಫ್ರೂಟ್​, ಬಾಳೆಹಣ್ಣು, ಟೊಮಾಟೊ, ಪೇರಲ, ಮಾವು, ಕಲ್ಲಂಗಡಿ, ಪಪ್ಪಾಯಿ, ಕಪ್ಪುದ್ರಾಕ್ಷಿ, ಸ್ಟ್ರಾಬೆರಿ, ಅನಾನಸ್​, ಚೆರ್ರಿ

ಗಡ್ಡೆ-ಗೆಣಸು: ಆಲೂಗಡ್ಡೆ, ಬೀಟ್ರೂಟ್​, ಶುಂಠಿ

ಇವುಗಳು ನಿಮ್ಮ ಅಡುಗೆಮನೆಯಲ್ಲಿರಲಿ. ಜೊತೆಗೆ ಹಾಲು ಮತ್ತು ಮೊಸರು, ಬಾದಾಮಿ, ಗೋಡಂಬಿ, ಪಿಸ್ತಾ, ತೆಂಗಿನಕಾಯಿಯಂತಹ ಆಹಾರ ಪದಾರ್ಥಗಳನ್ನು ಸೇವಿಸಿ. ಯಾವುದೇ ಆಹಾರ ಪದಾರ್ಥವೂ ಕೂಡಾ ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿಯೇ ಇದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯವಾಗಿರಿ.

ಇದನ್ನೂ ಓದಿ: Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ