Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ

ನಿಯಮಿತ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಅದೆಷ್ಟೋ ರೋಗಗಳು ಬಾರದಂತೆ ಗೋಡಂಬಿಯಲ್ಲಿನ ಪೋಷಕಾಂಶಗಳು ಅರೋಗ್ಯವನ್ನು ಕಾಪಾಡುತ್ತದೆ.

Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ
ಗೋಡಂಬಿ
Follow us
shruti hegde
|

Updated on: May 12, 2021 | 3:28 PM

ಗೋಡಂಬಿ ಕೊಳ್ಳಲು ಹೋದರೆ ದುಬಾರಿ ಆಹಾರ ಪದಾರ್ಥ. ಆದರೆ ಇದರ ಸೇವನೆಯಿಂದ ಪ್ರಯೋಜನ ಕೂಡಾ ಅಷ್ಟೇ ಇದೆ. ಉಷ್ಣಾಂಶ ಹವಾಮಾನವಿರುವ ಜಾಗದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಪ್ರಪಂಚದಾದ್ಯಂತ ವ್ಯಾಪಕವಾಗಿ ಸಿಗುವ ಆಹಾರ ಪದಾರ್ಥವಿದು. ಭಾರತದಲ್ಲಿ ಸಿಹಿತಿಂಡಿಗಳನ್ನು ಮಾಡುವಾಗ ಮತ್ತು ಸಾಂಪ್ರದಾಯಿಕ ತಿಂಡಿಗಳ ರುಚಿ ಹೆಚ್ಚಿಸಲು ಗೋಡಂಬಿಯನ್ನು ಹೆಚ್ಚು ಬಳಸುತ್ತಾರೆ. ನಿಯಮಿತ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳಿವೆ. ಅದೆಷ್ಟೋ ರೋಗಗಳು ಬಾರದಂತೆ ಗೋಡಂಬಿಯಲ್ಲಿನ ಪೋಷಕಾಂಶಗಳು ಅರೋಗ್ಯವನ್ನು ಕಾಪಾಡುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾ ಸಹಾಯಕಾರಿ. ಇದರಲ್ಲಿರುವ ಒಲಿಕ್​ ಆಮ್ಲಗಳು, ಪೈಟೋಸ್ಟೆರಾಲ್​ ಮತ್ತು ಫಿನಲಿಕ್​ ಸಂಯುಕ್ತಗಳು ಹೃದಯ ಕಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಜೊತೆಗೆ ದೇಹಕ್ಕೆ ಅಗತ್ಯವಿರುವ ಕೊಬ್ಬು ಕೂಡಾ ಗೋಡಂಬಿ ಸೇವನೆಯಿಂದ ಸಿಗುತ್ತದೆ. ಹೃದಯ ಸ್ನಾಯುಗಳ ಬಲಗೊಳ್ಳುವಿಕೆಗೆ ಗೋಡಂಬಿ ಸೇವನೆ ಉತ್ತಮ ಮಾರ್ಗ.

ಕ್ಯಾನ್ಸರ್​ ರೋಗ ಬಾರದಂತೆ ತಡೆಹಿಡಿಯುತ್ತದೆ ಉತ್ಕರ್ಷಣ ನಿರೋಧಕ ಶಕ್ತಿಯು ಗೋಡಂಬಿಯಲ್ಲಿ ಹೆಚ್ಚಾಗಿ ಇದೆ. ಇದರಿಂದ ಕ್ಯಾನ್ಸರ್​ನಂತಹ ಕಾಯಿಲೆಗಳು ಬಾರದಂತೆ ತಡೆಹಿಡಿಯಬಹುದು. ವಿಟಮಿನ್​ ಇ ಅಂಶ ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ಹೊಳೆಯುವ ಚರ್ಮ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಇದು ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕೆಲವರ ಮುಖದಲ್ಲಿ ಗೆರೆಗಳು ಕಂಡುಬರುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿನ ಅಂಶವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಕಾರಣವಾಗುತ್ತದೆ.

ನರ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ನಗರಗಳಲ್ಲಿ ಸೇರಿಕೊಳ್ಳುವ ಕ್ಯಾಲ್ಸಿಯಂನ ಅಧಿಕ ಪ್ರಮಾಣವನ್ನು ತಡೆಹಿಡಿಯಲು ಗೋಡಂಬಿ ಸೇವನೆ ಸಹಾಯಕವಾಗಿದೆ. ಅಗತ್ಯವಿರುವಷ್ಟೇ ಕ್ಯಾಲ್ಸಿಯಂ ಅಂಶವನ್ನು ದೇಹಕ್ಕೆ ಪೂರೈಕೆ ಮಾಡಲು ಸಹಾಯಕಾರಿಯಾಗಿದೆ. ಹಾಗೂ ಗೋಡಂಬಿಯ ನಿಯಮಿತ ಸೇವನೆಯಿಂದ ಮೆದುಳಿನ ನರಗಳು ಶಕ್ತಿಯುತವಾಗಿ ಕೆಲಸ ಮಾಡುತ್ತದೆ.

ತೂಕ ಇಳಿಕೆಗೆ ಸಹಾಯಕ ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವಿದ್ದರೂ ಕೂಡಾ ನಿಯಮಿತ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದರ ಕುರಿತಾಗಿ ಯಾವುದೇ ಪುರಾವೆಗಳು ಇಲ್ಲವಾದರೂ ಕೂಡಾ, ಮಹಿಳೆಯರ ಮೇಲೆ ನಡೆಸಿದ ಅಧ್ಯಯನ ಪ್ರಕಾರ ತೂಕ ಇಳಿಸಬಹುದು ಎಂಬುದನ್ನು ತಿಳಿದುಬಂದಿದೆ.

ರಕ್ತಹೀನತೆಯನ್ನು ತಡೆಯುತ್ತದೆ ಗೋಡಂಬಿಯಲ್ಲಿ ಕಬ್ಬಿಣ ಮತ್ತು ತಾಮ್ರದ ಅಂಶ ಹೆಚ್ಚಾಗಿರುವುದರಿಂದ ರಕ್ತದ ಉತ್ಪತ್ತಿ ಮತ್ತು ರಕ್ತದ ಚಲನೆಯು ಸರಾಗವಾಗಿ ನಡೆಯುತ್ತದೆ. ಕಬ್ಬಿಣದ ಅಂಶದ ಕೊರತೆಯು ಸಾಮಾನ್ಯವಾಗಿ ರಕ್ತ ಹೀನತೆಗೆ ಕಾರಣವಾಗಿರುವುದರಿಂದ ಗೋಡಂಬಿಯಲ್ಲಿನ ಕಬ್ಬಣದ ಅಮಶವು ರಕ್ತಹೀನತೆಯನ್ನು ತಡೆಹಿಡಿಯಲು ಸಹಾಯಕವಾಗಿದೆ.

ಇದನ್ನೂ ಓದಿ: Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ