Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು

ನಮ್ಮನ್ನು ನಾವು ಸದೃಢವಾಗಿರಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರ ಹೊರತಾಗಿ ಏನು ಮಾಡಬಹುದು? ಈ ಬಗ್ಗೆ ಯೋಚಿಸಿದಾಗ ಇಂತಹ ಪ್ರಶ್ನೆಗಳಿಗೆ ಉತ್ತರಗಳು ಬೇಕಷ್ಟು ಸಿಕ್ಕಿರುತ್ತವೆ. ಆದರೆ ಇದು ಎಲ್ಲಾ ವಯಸ್ಸಿನ ಜನರಿಗೆ ನಿಜವಾಗಿಯೇ ಬಿಡುತ್ತದೆ ಎಂಬುದರ ಬಗ್ಗೆ ಎಲ್ಲೂ ವಿಶ್ಲೇಷಣೆಗಳಿಲ್ಲ.

Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:May 11, 2021 | 6:17 PM

ಇಡೀ ದೇಶವೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಹೋರಾಡುತ್ತಿದೆ. ವ್ಯಾಪಕವಾಗಿ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದಂತೆಯೇ ಎಲ್ಲಾ ಜನರಿಗೂ ಎದುರಾಗುವ ಪ್ರಶ್ನೆ ಎಂದರೆ ನಮ್ಮ ಆರೋಗ್ಯವನ್ನು ಸುಧಾರಿಸುಕೊಳ್ಳುವುದು ಹೇಗೆ? ನಮ್ಮನ್ನು ನಾವು ಸದೃಢವಾಗಿರಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದರ ಹೊರತಾಗಿ ಏನು ಮಾಡಬಹುದು? ಈ ಬಗ್ಗೆ ಯೋಚಿಸಿದಾಗ ಇಂತಹ ಪ್ರಶ್ನೆಗಳಿಗೆ ಉತ್ತರಗಳು ಬೇಕಷ್ಟು ಸಿಕ್ಕಿರುತ್ತವೆ. ಆದರೆ ಇದು ಎಲ್ಲಾ ವಯಸ್ಸಿನ ಜನರಿಗೆ ನಿಜವಾಗಿಯೇ ಬಿಡುತ್ತದೆ ಎಂಬುದರ ಬಗ್ಗೆ ಎಲ್ಲೂ ವಿಶ್ಲೇಷಣೆಗಳಿಲ್ಲ.

ದೇಹ ಸದೃಢವಾಗಿರಲು 10,000 ಹೆಜ್ಜೆಗಳು ನಡೆಯುವುದು ಅಗತ್ಯವೇ? ದೇಹದ ಫಿಟ್​ನೆಸ್​ ಕಾಪಾಡಿಕೊಳ್ಳಲು ಪ್ರತಿನಿತ್ಯ 10,000 ಹೆಜ್ಜೆಗಳನ್ನು ಸಾಗಬೇಕು ಎಂಬುದನ್ನು ಕೇಳಿಯೇ ಇರುತ್ತೀರಿ. ಆದರೆ ಫಿಟ್​ನೆಸ್​ ಕಾಪಾಡಿಕೊಂಡು ಸಾಗಲು 10 ಸಾವಿರ ಹೆಜ್ಜೆಗಳನ್ನು ಸಾಗಬೇಕು ಎಂಬುದಕ್ಕೆ ಎಲ್ಲಿಯೂ ಪುರಾವೆಗಳಿಲ್ಲ. 20 ವರ್ಷ ವಯಸ್ಸಿನವರಿಗೆ 10 ಸಾವಿರ ಹೆಜ್ಜೆಗಳು ತುಂಬಾ ಕಡಿಮೆ. ಆದರೆ ಅದೇ 60 ವರ್ಷ ವಯಸ್ಸಿನವರಿಗೆ 10 ಸಾವಿರ ಹೆಜ್ಜೆ ನಡೆಯಬೇಕು ಅಂದರೆ ಅದೆಲ್ಲಿಂದ ಸಾಧ್ಯ? ಹಾಗಾಗಿ ವಯಸ್ಸಿನ ಆಧಾರದ ಮೇಲೆ ಕೆಲವು ಅಂಕಿಅಂಶಗಳು ಅವಲಂಬಿತವಾಗಿರುತ್ತದೆ.

ಆರೋಗ್ಯವಾಗಿರಲು ಪ್ರತಿನಿತ್ಯ 8 ಗಂಟೆಗಳ ನಿದ್ರೆ ಅಗತ್ಯವಿದೆಯೇ? ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಮಾನಸಿಕವಾಗಿ ಆರೋಗ್ಯವಾಗಿರಲು ನಿದ್ರೆ ಅತ್ಯವಶ್ಯಕ. ಜೊತೆಗೆ ಮಧುಮೇಹ, ಹೃದಯರೋಗದಂತಹ ಕಾಯಿಲೆಗಳನ್ನು ತಪ್ಪಿಸಲು ನಿದ್ರೆ ಅವಶ್ಯಕ. ನ್ಯಾಷನಲ್​ ಸ್ಲೀಪ್ ಪೌಂಡೇಶನ್​ ಅವರ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಮಲಗಬೇಕು. ಅದೇ ಮಕ್ಕಳಿಗಾದರೆ ಇನ್ನೂ ಹೆಚ್ಚಿನ ನಿದ್ದೆ ಅವಶ್ಯಕ. ಆದರೆ 60 ವರ್ಷಕ್ಕಿಂತ ಮೆಲ್ಪಟ್ಟ ಹಿರಿಯರು 7 ರಿಂದ 8 ಗಂಟೆಗಳ ಕಾಲ ಮಲಗಬೇಕು. ಪ್ರತಿದಿನ 6 ಗಂಟೆಗಿಂತ ಕಡಿಮೆ ಇದ್ದೆ ಮಾಡುವ ಜನರು ವೃದ್ದಾಪ್ಯದಲ್ಲಿ ಬುದ್ದಿಮಾಂದ್ಯತೆಗೆ ಒಳಗಾಗುತ್ತಾರೆ.

ಪ್ರತಿನಿತ್ಯ 8 ಲೀಟರ್​ ನೀರು ಕುಡಿಯುವುದು ಅಗತ್ಯವೇ? ದೇಹಕ್ಕೆ ನೀರು ಬಹಳ ಮುಖ್ಯ. ಆದರೆ ಆರೋಗ್ಯ ತಜ್ಞರ ಪ್ರಕಾರ, ವ್ಯಕ್ತಿಯ ದೇಹಕ್ಕೆ ಎಷ್ಟು ನೀರು ಬೇಕು? ಬದಲಾಗುತ್ತಿರುವ ಹವಾಮಾನದಲ್ಲಿ ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿರುತ್ತದೆ? ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ಆತನ ತೂಕ, ಆತನ ಬೆವರು ಯಾವ ಪ್ರಮಾಣದಲ್ಲಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ, ನಾವು ಚಹಾ, ಕಾಫಿ, ಜ್ಯೂಸ್, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದಾಗಿ ಅಗತ್ಯವಾದ ನೀರು ನಮ್ಮ ದೇಹಕ್ಕೆ ಪೂರಕವಾಗಿರುತ್ತದೆ.

ಪ್ರತಿನಿತ್ಯ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವುದು ಅಗತ್ಯವೇ? ಸಂಶೋಧಕರು, ಪ್ರತಿನಿತ್ಯ 400 ಗ್ರಾಂ ಬದಲಿಗೆ 800 ಗ್ರಾಂ ಹಣ್ಣುಗಳನ್ನು ಸೇವಿಸುವುದರಿಂದ ಅರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ. ಮತ್ತು ಪೌಷ್ಠಿಕಾಂಶಯುಕ್ತ ಆಹಾರ, ದೇಹದ ಸಮತೋಲನಕ್ಕೆ ಸಹಾಯಕ. ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆ ದೇಹಕ್ಕೆ ಹೆಚ್ಚು ರಕ್ಷಣೆಯನ್ನು ನೀಡುತ್ತದೆ.

ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣುಗಳನ್ನು ಹಾಳು ಮಾಡುತ್ತದೆಯೇ? ಕಡಿಮೆ ಬೆಳಕಿನಲ್ಲಿ ಅಥವಾ ಮಂದ ಬೆಳಕಿನಲ್ಲಿ ಓದುವುದು ಬಹಳ ಕಷ್ಟ ಅನಿಸಬಹುದು. ಕಣ್ಣುಗಳಿಗೆ ಹೆಚ್ಚು ಒತ್ತಡವನ್ನುಂಟು ಮಾಡುವುದರಿಂದ ತಲೆನೋವು ಉಂಟಾಗುತ್ತದೆ. ಆದರೆ ತಜ್ಞರು ತಿಳಿಸುವಂತೆ, ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣಿಗೆ ಶಾಶ್ವತವಾಗಿ ಹೊಡೆತ ಬೀಳುವುದಿಲ್ಲ. ಹಾಗೂ ಕಣ್ಣಿನ ಸಮಸ್ಯೆ, ವ್ಯಕ್ತಿಯ ಕಣ್ಣಿನ ಆರೋಗ್ಯದ ಸ್ಥಿತಿಗತಿಯ ಮೇಲೆ ಇದು ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: Health Tips: ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ?

Published On - 4:32 pm, Tue, 11 May 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು