ಯುಲಿಯಾ ಸ್ವೈರಿಡೆಂಕೊ ಅವರನ್ನು ಝೆಲೆನ್ಸ್ಕಿ ಉತ್ತರಾಧಿಕಾರಿಯಾಗಿ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಪ್ರಧಾನಿ ರಾಜೀನಾಮೆ
ಉಕ್ರೇನ್ ಪ್ರಧಾನಿ ಶ್ಮಿಹಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಿನ್ನೆ ಉಪಪ್ರಧಾನಿ ಯುಲಿಯಾ ಸ್ವೈರಿಡೆಂಕೊ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಪ್ರಧಾನಿ ರಾಜೀನಾಮೆಯನ್ನು ಘೋಷಿಸಿದ್ದಾರೆ. ಶ್ಮಿಹಾಲ್ ಅವರ ಸ್ಥಾನವನ್ನು ಪ್ರಸ್ತುತ ಉಪ ಪ್ರಧಾನ ಮಂತ್ರಿ ಮತ್ತು ಉಕ್ರೇನ್ ದೇಶದ ಮೊದಲ ಮಹಿಳಾ ಆರ್ಥಿಕ ಸಚಿವೆಯಾಗಿರುವ 39 ವರ್ಷದ ಯೂಲಿಯಾ ಸ್ವೈರಿಡೆಂಕೊ ಅವರಿಗೆ ನೀಡುವುದಾಗಿ ಝೆಲೆನ್ಸ್ಕಿ ಸೋಮವಾರ ಹೇಳಿದ್ದರು.

ಕೈವ್, ಜುಲೈ 15: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Zelenskyy) ಸರ್ಕಾರವನ್ನು ಮುನ್ನಡೆಸಲು ಮೊದಲ ಉಪ ಪ್ರಧಾನ ಮಂತ್ರಿ ಯೂಲಿಯಾ ಸ್ವೈರಿಡೆಂಕೊ ಅವರನ್ನು ನಾಮನಿರ್ದೇಶನ ಮಾಡಿದ ಮರುದಿನವಾದ ಇಂದು ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ತಮ್ಮ ರಾಜೀನಾಮೆಯನ್ನು ದೃಢಪಡಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಪ ಪ್ರಧಾನ ಮಂತ್ರಿ ಯೂಲಿಯಾ ಸ್ವೈರಿಡೆಂಕೊ ಅವರನ್ನು ಉತ್ತರಾಧಿಕಾರಿಯಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಿದ ನಂತರ ಉಕ್ರೇನಿಯನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಇಂದು ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಿದರು.
ಟೆಲಿಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಶ್ಮಿಹಾಲ್ ತಮ್ಮ ರಾಜೀನಾಮೆ ಪತ್ರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಉಕ್ರೇನ್ ಅನ್ನು ರಕ್ಷಿಸುತ್ತಿರುವ ನಮ್ಮ ರಕ್ಷಕರಿಗೆ ಧನ್ಯವಾದಗಳು! ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಬಗ್ಗೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು! ನಮ್ಮ ದೇಶಕ್ಕಾಗಿ ಅವರ ದಣಿವರಿಯದ ಕೆಲಸಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳು!” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಡ್ರೋನ್ ದಾಳಿಯಲ್ಲಿ ತನ್ನ ಯುದ್ಧ ವಿಮಾನ ಪತನವಾದ ಬಗ್ಗೆ ಮೌನ ಮುರಿದ ರಷ್ಯಾ
ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ 3 ವರ್ಷಗಳಿಗೂ ಹೆಚ್ಚು ಕಾಲ ಉಕ್ರೇನ್ ಯುದ್ಧ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಸವಾಲುಗಳನ್ನು ಎದುರಿಸುತ್ತಿರುವಾಗ ಪ್ರಮುಖ ರಾಜಕೀಯ ಕೂಲಂಕಷ ಪರೀಕ್ಷೆಯನ್ನು ಸೂಚಿಸುವ ಮೂಲಕ ಭಾರತದ ಹೊಸ ಪ್ರಧಾನ ಮಂತ್ರಿಯಾಗಲು ಝೆಲೆನ್ಸ್ಕಿ ಆರ್ಥಿಕ ಸಚಿವೆ ಯೂಲಿಯಾ ಸ್ವೈರಿಡೆಂಕೊ ಅವರನ್ನು ನಾಮನಿರ್ದೇಶನ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾದ ಡ್ರೋನ್ ದಾಳಿಯಲ್ಲಿ 3 ಜನ ಸಾವು, 64 ಜನರಿಗೆ ಗಾಯ
ಶ್ಮಿಹಾಲ್ ಅವರ ಸ್ಥಾನವನ್ನು ಪ್ರಸ್ತುತ ಉಪ ಪ್ರಧಾನ ಮಂತ್ರಿ ಮತ್ತು ಉಕ್ರೇನ್ ದೇಶದ ಮೊದಲ ಮಹಿಳಾ ಆರ್ಥಿಕ ಸಚಿವೆಯಾಗಿರುವ 39 ವರ್ಷದ ಯೂಲಿಯಾ ಸ್ವೈರಿಡೆಂಕೊ ಅವರಿಗೆ ನೀಡುವುದಾಗಿ ಝೆಲೆನ್ಸ್ಕಿ ಸೋಮವಾರ ಹೇಳಿದ್ದರು. ಅಮೆರಿಕ-ಉಕ್ರೇನ್ ಖನಿಜ ಒಪ್ಪಂದದ ಮಾತುಕತೆಯಲ್ಲಿ ಸ್ವೈರಿಡೆಂಕೊ ಪ್ರಮುಖ ಪಾತ್ರ ವಹಿಸಿದ್ದಾರೆ. ರಕ್ಷಣಾ ಸಹಕಾರ, ಆರ್ಥಿಕ ಚೇತರಿಕೆ ಮತ್ತು ಪುನರ್ನಿರ್ಮಾಣದ ಮೇಲೆ ಕೇಂದ್ರೀಕರಿಸುವ ಮೂಲಕ ಅವರು ಪಾಶ್ಚಿಮಾತ್ಯ ಪಾಲುದಾರರೊಂದಿಗೆ ಉನ್ನತ ಮಟ್ಟದ ಮಾತುಕತೆಗಳಲ್ಲಿ ಉಕ್ರೇನ್ ಅನ್ನು ಆಗಾಗ ಪ್ರತಿನಿಧಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




