AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದ ಯುದ್ಧಕ್ಕೆ ಚೀನಾ ಸಹಾಯ; ಉಕ್ರೇನ್​ಗೆ ಭೇಟಿ ನೀಡಿ ಎಂದ ಝೆಲೆನ್ಸ್ಕಿಗೆ ಟ್ರಂಪ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದರು. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಜೊತೆ ಶಾಂತಿ ಮಾತುಕತೆ ಮಾಡಿಕೊಳ್ಳುವುದರ ಬದಲು ಯುದ್ಧ ಸಾರಿದ್ದರು. ಇದೀಗ ಉಕ್ರೇನ್ ಅಧ್ಯಕ್ಷ ಮತ್ತೆ ಅಮೆರಿಕ ಅಧ್ಯಕ್ಷರ ಮೊರೆ ಹೋಗಿದ್ದು, ದಯವಿಟ್ಟು ನಮ್ಮ ದೇಶಕ್ಕೆ ಬಂದು ಇಲ್ಲಿನ ಪರಿಸ್ಥಿತಿಯನ್ನೊಮ್ಮೆ ನೋಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇದು ಜೈ ಬೈಡೆನ್​ನ ಯುದ್ಧ, ನನ್ನದಲ್ಲ ಎಂದು ಹೇಳಿದ್ದಾರೆ.

ರಷ್ಯಾದ ಯುದ್ಧಕ್ಕೆ ಚೀನಾ ಸಹಾಯ; ಉಕ್ರೇನ್​ಗೆ ಭೇಟಿ ನೀಡಿ ಎಂದ ಝೆಲೆನ್ಸ್ಕಿಗೆ ಟ್ರಂಪ್ ಹೇಳಿದ್ದೇನು?
Donald Trump
ಸುಷ್ಮಾ ಚಕ್ರೆ
|

Updated on: Apr 15, 2025 | 3:37 PM

Share

ವಾಷಿಂಗ್ಟನ್, ಏಪ್ರಿಲ್ 15: ಉಕ್ರೇನ್‌ (Ukraine War) ವಿರುದ್ಧ ಹೋರಾಡಲು ರಷ್ಯಾ 150ಕ್ಕೂ ಹೆಚ್ಚು ಚೀನೀ ಪ್ರಜೆಗಳನ್ನು ನೇಮಿಸಿಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ . ಈ ಬಗ್ಗೆ ಚೀನಾಕ್ಕೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಉಕ್ರೇನಿಯನ್ ಪಡೆಗಳು ಪೂರ್ವ ಉಕ್ರೇನ್‌ನಲ್ಲಿ ಇಬ್ಬರು ಚೀನೀ ಹೋರಾಟಗಾರರನ್ನು ಸೆರೆಹಿಡಿದು, ಅವರ ವೀಡಿಯೊಗಳು ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಪೋಸ್ಟ್ ಮಾಡಿದ ನಂತರ ಈ ಬಹಿರಂಗವಾಗಿದೆ. ಈ ಬಗ್ಗೆ “ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಗಮನ ಹರಿಸಬೇಕು” ಎಂದು ಝೆಲೆನ್ಸ್ಕಿ ಹೇಳಿದ್ದಾರೆ. “ಉಕ್ರೇನ್ ಪ್ರದೇಶದಲ್ಲಿ ಉಕ್ರೇನಿಯನ್ನರ ವಿರುದ್ಧ ಹೋರಾಡುತ್ತಿರುವ 155 ಚೀನೀ ನಾಗರಿಕರಿದ್ದಾರೆ.” ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.

ಚೀನಾ ಇದುವರೆಗೂ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅಧಿಕೃತವಾಗಿ ಎಲ್ಲೂ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ, ಚೀನಾ ಪ್ರಜೆಗಳು ರಷ್ಯಾದ ಸೇನೆಯಲ್ಲಿ ಇರುವುದು ಬಹಳ ಮುಖ್ಯ ಬೆಳವಣಿಗೆಯಾಗಿದೆ. ಆದರೆ, ಚೀನಾ ಉಕ್ರೇನ್ ಅಧ್ಯಕ್ಷರ ಆರೋಪವನ್ನು ತಳ್ಳಿಹಾಕಿದೆ. ಹಾಗೇ, ಚೀನಾವನ್ನು ಯುದ್ಧಕ್ಕೆ ಎಳೆಯಲಾಗುತ್ತಿದೆ ಎಂಬ ಆರೋಪವನ್ನು ರಷ್ಯಾ ಕೂಡ ತಿರಸ್ಕರಿಸಿತು.

ಇದನ್ನೂ ಓದಿ: ಮೋದಿ ಆಹ್ವಾನ ಸ್ವೀಕರಿಸಿದ ಪುಟಿನ್; ಶೀಘ್ರದಲ್ಲೇ ಭಾರತಕ್ಕೆ ರಷ್ಯಾ ಅಧ್ಯಕ್ಷ ಭೇಟಿ

ಇದನ್ನೂ ಓದಿ
Image
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
Image
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಟ್ರಂಪ್ ಹೇಳಿದ್ದೇನು?:

ಇದರ ನಡುವೆ ರಷ್ಯಾ-ಉಕ್ರೇನ್ ಯುದ್ಧವನ್ನು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ ಯುದ್ಧ ಎಂದು ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ. ಸಿಬಿಎಸ್‌ನ 60 ನಿಮಿಷಗಳ ಸಂದರ್ಶನದಲ್ಲಿ ಝೆಲೆನ್ಸ್ಕಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಉಕ್ರೇನ್‌ಗೆ ಭೇಟಿ ನೀಡುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಹೇಳಿಕೆ ನೀಡಿದ್ದಾರೆ.

“ದಯವಿಟ್ಟು, ಯಾವುದೇ ರೀತಿಯ ನಿರ್ಧಾರಗಳು, ಯಾವುದೇ ರೀತಿಯ ಮಾತುಕತೆಗಳ ಮೊದಲು ನಮ್ಮ ದೇಶದ ಜನರು, ಯೋಧರು, ಆಸ್ಪತ್ರೆಗಳು, ಚರ್ಚುಗಳು, ಸತ್ತ ಮಕ್ಕಳನ್ನು ನೋಡಲು ಬನ್ನಿ. ಇಲ್ಲಿನ ಪರಿಸ್ಥಿತಿ ಬಹಳ ಭೀಕರವಾಗಿದೆ ಯುದ್ಧದ ಭಯಾನಕತೆಗೆ ಉಕ್ರೇನ್ ನಲುಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದರು.

ಇದನ್ನೂ ಓದಿ: ಚೀನಾ ಬಿಟ್ಟು ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಬೈಡೆನ್ ಅವರ ಯುದ್ಧವೇ ವಿನಃ ನನ್ನದಲ್ಲ. ನಾನು ಇದೀಗ ಇಲ್ಲಿಗೆ ಬಂದಿದ್ದೇನೆ. ಹಿಂದಿನ ಅವಧಿಯಲ್ಲಿ 4 ವರ್ಷಗಳ ಕಾಲ ಯುದ್ಧ ಸಂಭವಿಸದಂತೆ ತಡೆಯುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಧ್ಯಕ್ಷ ಪುಟಿನ್ ಮತ್ತು ಉಳಿದವರೆಲ್ಲರೂ ಬೈಡೆನ್ ಅವರನ್ನು ಗೌರವಿಸುತ್ತಿದ್ದರು!” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ

“ಈ ಯುದ್ಧದೊಂದಿಗೆ ನನಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ ಸಾವು ಮತ್ತು ವಿನಾಶವನ್ನು ನಿಲ್ಲಿಸಲು ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. 2020ರ ಅಧ್ಯಕ್ಷೀಯ ಚುನಾವಣೆಯು ಅಕ್ರಮವಾಗಿಲ್ಲದಿದ್ದರೆ ಆ ಭಯಾನಕ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಜೋ ಬೈಡನ್ ಇಬ್ಬರಿಗೂ ಈ ಯುದ್ಧವನ್ನು ಪ್ರಾರಂಭವಾಗದಂತೆ ತಡೆಯಲು ಹಲವು ಮಾರ್ಗಗಳಿದ್ದವು. ಅದೆಲ್ಲ ಮುಗಿದ ಕತೆ. ಈಗ ನಾವು ಅದನ್ನು ನಿಲ್ಲಿಸಬೇಕು. ಈ ಯುದ್ಧ ತುಂಬಾ ದುಃಖಕರ ಸಂಗತಿ!” ಎಂದು ಟ್ರಂಪ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ