AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟಿನ್ ಜೊತೆಗಿನ ಫೋನ್ ಕಾಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಟ್ರಂಪ್ ಜೊತೆ ಉಕ್ರೇನ್‌ನ ಝೆಲೆನ್ಸ್ಕಿ ಮಾತುಕತೆ

ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2 ಗಂಟೆಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದರಲ್ಲಿ ಇಬ್ಬರೂ ನಾಯಕರು ಉಕ್ರೇನ್‌ನಲ್ಲಿ ಕದನ ವಿರಾಮದ ಬಗ್ಗೆ ಚರ್ಚಿಸಿದ್ದರು. ಅವರ ಮಾತುಕತೆಯ ನಂತರ, ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆ ನಡೆಸಲು ಯೋಜಿಸಿದ್ದಾರೆ.

ಪುಟಿನ್ ಜೊತೆಗಿನ ಫೋನ್ ಕಾಲ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಟ್ರಂಪ್ ಜೊತೆ ಉಕ್ರೇನ್‌ನ ಝೆಲೆನ್ಸ್ಕಿ ಮಾತುಕತೆ
Zelenskyy Trump
ಸುಷ್ಮಾ ಚಕ್ರೆ
|

Updated on: Mar 19, 2025 | 5:07 PM

Share

ವಾಷಿಂಗ್ಟನ್, (ಮಾರ್ಚ್ 19): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ನಾಯಕನೊಂದಿಗಿನ ಫೋನ್ ಕರೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಂದು ಟ್ರಂಪ್ ಅವರೊಂದಿಗೆ ಮಾತನಾಡಲು ಯೋಜಿಸಿದ್ದಾರೆ. ಫಿನ್ನಿಷ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಹೆಲ್ಸಿಂಕಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ, “ಇಂದು ನಾನು ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದಾರೆ. “ಈ ವೇಳೆ ನಾವು ಟ್ರಂಪ್ ಅವರೊಂದಿಗೆ ಮುಂದಿನ ಹಂತಗಳ ವಿವರಗಳನ್ನು ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.

ದೇಶಾದ್ಯಂತ ಡ್ರೋನ್ ದಾಳಿಗಳ ಸರಣಿಯ ನಂತರ ಇಂಧನದ ಮೂಲಸೌಕರ್ಯವನ್ನು ನಿಲ್ಲಿಸುವ ಪುಟಿನ್ ಅವರ ಒಪ್ಪಂದವು ವಾಸ್ತವಕ್ಕೆ ತುಂಬಾ ವಿರುದ್ಧವಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ತಾತ್ಕಾಲಿಕವಾಗಿ ಆಕ್ರಮಿಸಿಕೊಂಡಿರುವ ಉಕ್ರೇನಿಯನ್ ಪ್ರದೇಶಗಳನ್ನು ರಷ್ಯನ್ ಎಂದು ಗುರುತಿಸುವುದು ಕೆಂಪು ರೇಖೆಯಾಗಿದೆ. ನಾವು ಅದಕ್ಕೆ ಹೋಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪರಮಾಣು ಶಸ್ತ್ರಾಸ್ತ್ರ ಬಳಸದಂತೆ ಪುಟಿನ್ ಮನವೊಲಿಸಿದ ಪ್ರಧಾನಿ ಮೋದಿ; ಪೋಲೆಂಡ್ ಸಚಿವ

ಇದಕ್ಕೂ ಮೊದಲು ಟ್ರಂಪ್ ಅವರೊಂದಿಗಿನ ಮಾತುಕತೆಯಲ್ಲಿ, ಪುಟಿನ್ ಅವರನ್ನು “ಕೈವ್ ಮತ್ತು ಮಾಸ್ಕೋ ನಡುವಿನ ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯಲು ಕೈವ್‌ಗೆ ವಿದೇಶಿ ಮಿಲಿಟರಿ ನೆರವು ಮತ್ತು ಗುಪ್ತಚರವನ್ನು ಒದಗಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಪ್ರಮುಖ ಷರತ್ತು ಆಗಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಉಕ್ರೇನ್ ಕದನ ವಿರಾಮ ಒಪ್ಪಂದದ ಕುರಿತು ಡೊನಾಲ್ಡ್ ಟ್ರಂಪ್, ಪುಟಿನ್ ಮಾತುಕತೆ

ಶರಣಾಗತಿಯ ಸಂದರ್ಭದಲ್ಲಿ ಉಕ್ರೇನಿಯನ್ ಸಶಸ್ತ್ರ ಪಡೆಗಳ ಸೈನಿಕರು ರಷ್ಯಾದ ಕಾನೂನು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಬದುಕುತ್ತಾರೆ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾರೆ ಎಂದು ಪುಟಿನ್ ಭರವಸೆ ನೀಡಿದರು. ಉಕ್ರೇನಿಯನ್ ಸೈನಿಕರ ಜೀವಗಳನ್ನು ಉಳಿಸುವಂತೆ ಟ್ರಂಪ್ ರಷ್ಯಾದ ಅಧ್ಯಕ್ಷರನ್ನು ಒತ್ತಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ