Health Tips: ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ?

ಪ್ರತಿಯೊಂದು ಹಣ್ಣಿನಿಂದಲೂ ಕೂಡಾ ವಿವಿಧ ತೆರೆನಾದ ಪೋಷಕಾಂಶವನ್ನು ಪಡೆಯಬಹುದು. ಆರೋಗ್ಯ ಸದೃಢತೆಗೆ ಯಾವ ಹಣ್ಣು ತಿಂದರೆ ಉತ್ತಮ ಎಂಬುದರ ಕುರಿತಾಗಿ ನಾವು ಹೇಳುತ್ತಿದ್ದೇವೆ.

Health Tips: ಉತ್ತಮ ಆರೋಗ್ಯಕ್ಕೆ ಯಾವ ಯಾವ ಹಣ್ಣು ಪೂರಕ?
ಹಣ್ಣುಗಳು
Follow us
|

Updated on:May 11, 2021 | 2:45 PM

ಉತ್ತಮ ಆರೋಗ್ಯ ಪಡೆದುಕೊಳ್ಳಲು ಹಣ್ಣುಗಳು ಮಹತ್ವದ ಪಾತ್ರವಸುಹಿತ್ತದೆ. ಬಹಳ ರುಚಿಕರವಾದ ಹಣ್ಣುಗಳನ್ನು ಸೇವಿಸುತ್ತಾ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಹೋಗಬಹುದು. ಸುಮಾರು 2,000 ಬಗೆಯ ಹಣ್ಣುಗಳನ್ನು ನಾವು ನೋಡಬಹುದು. ಅದರಲ್ಲಿ ಯಾವುದು ಹೆಚ್ಚು ಪೌಷ್ಠಿಕಾಂಶಯುಕ್ತವಾಗಿದೆ ಎಂಬ ಗೊಂದಲ ಸೃಷ್ಟಿಯಾಗುವುದು ಸಹಜ. ಹಾಗಾಗಿ ಆರೋಗ್ಯ ಸದೃಢತೆಗೆ ಯಾವ ಹಣ್ಣು ತಿಂದರೆ ಉತ್ತಮ ಎಂಬುದರ ಕುರಿತಾಗಿ ನಾವು ಹೇಳುತ್ತಿದ್ದೇವೆ.

ಪ್ರತಿಯೊಂದು ಹಣ್ಣಿನಿಂದಲೂ ಕೂಡಾ ವಿವಿಧ ತೆರೆನಾದ ಪೋಷಕಾಂಶವನ್ನು ಪಡೆಯಬಹುದು. ಹಾಗಾಗಿ ವಿವಿಧ ಬಣ್ಣ ಹೊಂದಿರುವ ಹಣ್ಣುಗಳನ್ನು ಸೇವಿಸುವುದು ಮುಖ್ಯ. ಏಕೆಂದರೆ ನಾನಾ ತರಹದ ಬಣ್ಣ ಹೊಂದಿರುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕರ ಪೋಷಕಾಂಶವನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶಯುಕ್ತ ಹಣ್ಣುಗಳು ಇಲ್ಲಿವೆ 1. ಸೇಬು ಜನರಿಗೆ ಹೆಚ್ಚು ಇಷ್ಟವಾಗುವ ಮತ್ತು ರುಚಿಕರವಾದ ಹಣ್ಣುಗಳಲ್ಲಿ ಸೇಬು ಕೂಡಾ ಒಂದು. ಪೆಕ್ಟಿನ್​ ಮತ್ತು ಫೈಬರ್​ನಿಂದ(ನಾರಿನಂಶ) ಸೇಬುಹಣ್ಣು ರಚನೆಯಾಗಿದೆ. ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಜೊತೆಗೆ ಉತ್ತಮ ಜೀರ್ಣಕ್ರಿಯೆ ಹೊಂದಲು ಸೇಬು ಸಹಾಯಕಾರಿ. ಕರುಳು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದೊಂದೇ ಅಲ್ಲದೆ, ವಿಟಮಿನ್​ ಸಿ ಗುಣವನ್ನು ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚು ಸೇಬು ಹಣ್ಣಿನಲ್ಲಿ ಕಂಡು ಬರುವುದರಿಂದಾಗಿ ಹೃದಯ ರೋಗ, ಪಾರ್ಶ್ವವಾಯು, ಕ್ಯಾನ್ಸರ್​, ಅಧಿಕ ತೂಕ, ಬೊಜ್ಜು ಮತ್ತು ನರದೌರ್ಬಲ್ಯದಂತಹ ಸಮಸ್ಯೆಗಳ ಅಪಾಯವನ್ನು ತಡೆಯಬಹುದು.

2. ಬೆರಿ ಹಣ್ಣು ಬೆರಿ ಹಣ್ಣುಗಳು ನೀಲಿ-ನೇರಳೆ ಬಣ್ಣದಿಂದ ಕೂಡಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಹಾನಿ ಉಂಟು ಮಾಡುವ ಜೀವಕಣಗಳ ವಿರುದ್ಧ ಹೋರಾಡುತ್ತದೆ. ಹೃದಯರೋಗ, ಅಧಿಕ ತೂಕ, ಬೊಜ್ಜು, ರಕ್ತದೊತ್ತಡದಂತಹ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಈ ಹಣ್ಣನ್ನು ಬಳಸಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ಪ್ರಕಾರ ದಿನಕ್ಕೆ 17 ಗ್ರಾಂ ಆಂಥೋಸಯಾನಿನ್​ ಭರಿತ ಹಣ್ಣುಗಳ ಸೇವನೆಯಿಂದ ಮಧುಮೇಹದಂತಹ ಕಾಯಿಲೆಯ ಅಪಾಯದಲ್ಲಿ ಶೇ.5ರಷ್ಟು ಇಳಿಕೆ ಕಂಡು ಬಂದಿದೆ. ಹೆಚ್ಚಾಗಿ ಚೆರ್ರಿ, ಬ್ಲ್ಯಾಕ್​ಬೆರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್​ ಅಧಿಕವಾಗಿರುವುದನ್ನು ಕಾಣಬಹುದು.

3. ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಹೆಚ್ಚು ಪೊಟ್ಯಾಶಿಯಂ ಅಂಶವಿರುತ್ತದೆ. ವಿಟಮಿನ್​ ಬಿ6 ಶೇ.27, ವಿಟಮಿನ್​ ಸಿ ಶೇ.12 ಹಾಗೂ ಶೇ. 8ರಷ್ಟು ಮೆಗ್ನೇಶಿಯಂ ಅಂಶವನ್ನು ಬಾಳೆಹಣ್ಣು ಸೇವನೆಯಿಂದ ಪಡೆಯಬಹುದು. ಆದರೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವನೆಯಿಂದ ದೇಹದಲ್ಲಿನ ಖನಿಜಗಳ ಸಮತೋಲನವನ್ನು ಏರುಪೇರು ಮಾಡುತ್ತದೆ.

ಏತನ್ಮಧ್ಯೆ, ಜೀರ್ಣಕ್ರಿಯೆ ಸಲಿಲವಾಗಿ ಆಗುವಂತೆ ಬಾಳೆಹಣ್ಣನ್ನು ಹೆಚ್ಚು ಸೇವಿಸುತ್ತಾರೆ. ರಕ್ತದಲ್ಲಿನ ಸಕ್ಕರೆ ಅಂಶದ ನಿಯಂತ್ರಣ ಸೇರಿದಂತೆ ಬಾಳೆಹಣ್ಣು ಸೇವನಿಯಿಂದ ಅನೇಕ ಪ್ರಯೋಜನಗಳಿವೆ.

4. ಕಿತ್ತಳೆ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್​ ಸಿ ಅಂಶ ಹೆಚ್ಚಾಗಿರುತ್ತದೆ. ಹಾಗೂ ಥಯಾಮಿನ್​(ಮಿಟಮಿನ್​ ಬಿ1), ಫೈಬರ್​ ಅಂಶ, ಪೊಟ್ಯಾಶಿಯಂ ಅಂಶವನ್ನು ಹೊಂದಿರುತ್ತದೆ. ಒಂದು ಇಡೀ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಉರಿಯೂತ, ರಕ್ತದೊತ್ತಡ, ಕೊಲೆಸ್ಟ್ರಾಲ್​ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಕಿತ್ತಳೆ ರಸದಿಂದ ಶೇ. 100ರಷ್ಟು ನಿರೋಧಕ ಶಕ್ತಿಯನ್ನು ಮತ್ತು ಪೋಷಕಕಾಂಶವನ್ನು ಒದಗಿಸುವುದಾದರೂ, ಹಣ್ಣಿನಲ್ಲಿ ನಾರಿನ ಅಂಶ ಇರುವುದಿಲ್ಲ. ಒಂದು ಇಡೀ ಹಣ್ಣನ್ನು ತಿನ್ನಲು ಪ್ರಯತ್ನಿಸಿ ಮತ್ತು ಕಿತ್ತಳೆ ರಸವನ್ನು ಸೇವಿಸುವುದಾದರೆ 1 ಕಪ್​ (235 ಎಂಎಲ್​)ನಷ್ಟಿರಲಿ.

5. ಡ್ರ್ಯಾಗನ್ ಫ್ರೂಟ್ ಪಿಯಾಟ ಎಂದು ಕರೆಯಲ್ಪಡುವ ಡ್ರ್ಯಾಗನ್​ ಹಣ್ಣಿನಲ್ಲಿ ಫೈಬರ್​, ಕಬ್ಬಿಣ, ಮೆಗ್ನೀಶಿಯಂ ಮತ್ತು ವಿಟಮಿನ್​ ಸಿ ಮತ್ತು ಇ ಅಂಶಗಳಿರುತ್ತದೆ. ಆಗ್ನೆಯ ಏಷ್ಯಾದ ಜನರು ಡ್ರ್ಯಾಗನ್ ಫ್ರೂಟ್​ನಿಂದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು ಎಂದು ಪರಿಗಣಿಸಿದ್ದಾರೆ. ಇತ್ತೀಚೆಗೆ ಈ ಹಣ್ಣು ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ.

6. ಮಾವು ಹಣ್ಣುಗಳ ರಾಜ ಎಂದೇ ಹರೆಯಲ್ಪಡುವ ಮಾವಿನ ಹಣ್ಣು ಅರೋಗ್ಯಕ್ಕೆ ಉತ್ತಮ. ಪೊಟ್ಯೋಶಿಯಂ, ಫೈಬರ್​ ಮತ್ತು ವಿಟಮಿನ್​ ಎ, ಸಿ, ಬಿ6 ಮತ್ತು ಕೆ ಅಂಶಗಳನ್ನು ಹೊಂದಿರುತ್ತದೆ. ಉರಿಯೂತ ಸಮಸ್ಯೆಗೆ ಉತ್ತಮ ಪರಿಹಾರವಾಗಿಯೂ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾವಿನ ಹಣ್ಣನ್ನು ಸೇವಿಸಬಹುದು. ಡಯಾಬಿಟಿಸ್​, ಹೃದಯ ಸಂಬಂಧಿತ ಸಮಸ್ಯೆಗಳು, ಹಾಗೂ ಕ್ಯಾನ್ಸರ್​ನಂತಹ ರೋಗ ಬಾರದಿರಲು ಮಾವಿನ ಹಣ್ಣಿನ ಸೇವನೆ ಪ್ರಯೋಜನಕಾರಿಯಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾವಿನ ಹಣ್ಣು ಫೈಬರ್​ ಅಂಶವನ್ನು ಹೊಂದಿರುತ್ತದೆ. ಇದು ಕರುಳಿಗೆ ಹೆಚ್ಚು ಉಪಯೋಗಕಾರಿ. ಹಾಗೂ ಜೀರ್ಣಕ್ರಿಯೆ ಸರಾಗವಾಗಲು ಹಣ್ಣು ಸೇವಿಸುವುದು ಉತ್ತಮ.

7. ಆವಕಾಡೊ ಉಳಿದ ಹಣ್ಣುಗಳಿಗಿಂತ ಈ ಹಣ್ಣು ಭಿನ್ನವಾಗಿದೆ. ಹೆಚ್ಚಾಗಿ ಒಲಿಕ್​ ಆಮ್ಲದಿಂದ ಕೂಡಿರುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡಲು ಉತ್ತಮ ಹಣ್ಣೆಂದರೆ ಆವಕಾಡೊ ಹಣ್ಣು. ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಫೈಬರ್​, ವಿಟಮಿನ್​ ಬಿ6, ವಿಟಮಿನ್​ ಇ ಮತ್ತು ಕೆ ಅಂಶವನ್ನು ಹೊಂದಿರುತ್ತದೆ. ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಹಣ್ಣನ್ನು ಸೇವಿಸುವುದು ಉತ್ತಮ. 2020ರಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ 5 ವಾರಗಳವರೆಗೆ ಸತತವಾಗಿ ಈ ಹಣ್ಣನ್ನು ಸೇವಿಸಿದ ಬಳಿಕ ರಕ್ತದ ಉತ್ಪತ್ತಿಯ ಹೆಚ್ಚಳವನ್ನು ಕಂಡುಹಿಡಿಯಲಾಗಿದೆ. ಈ ಹಣ್ಣು ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ ಹಾಗಾಗಿ ಉತ್ತಮ ತೂಕ ಪಡೆಯಲು ಈ ಹಣ್ಣನ್ನು ಹೆಚ್ಚು ಸೇವಿಸುವುದು ಉತ್ತಮ. ದೇಹಕ್ಕೆ ನಾರಿನ ಅಂಶ ಮತ್ತು ಕೊಬ್ಬಿನಾಂಶವನ್ನು ಪಡೆಯಲು ಈ ಹಣ್ಣನ್ನು ಸೇವಿಸುವಂತೆ ಸಂಶೋಧಕರು ತಿಳಿಸಿದ್ದಾರೆ.

8. ಲಿಚಿ ಲಿಚಿ ಹಣ್ಣನ್ನು ಚೀನೀ ಚೆರ್ರಿ ಹಣ್ಣು ಎಂದೂ ಕರೆಯುತ್ತಾರೆ. ವಿಟಮಿನ್​ ಸಿ, ಪೊಟ್ಯಾಶಿಯಂ ಮತ್ತು ಫೈಬರ್​ ಅಂಶವನ್ನು ಈ ಹಣ್ಣಿನ ಸೇವನೆಯಿಂದ ಪಡೆಯಬಹುದು. ಗ್ಯಾಲಿಕ್​ ಆಮ್ಲ, ಕ್ಲೋರೋಜೆನಿಕ್​ ಆಮ್ಲ, ಕ್ಯಾಟೆಚಿನ್ಸ್​, ಕೆಫೀಕ್​ ಆಮ್ಲಗಳನ್ನು ಹೊಂದಿರುತ್ತದೆ.

9. ಅನಾನಸ್​ ಅನಾನಸ್​ ಜನಪ್ರಿಯ ಮತ್ತು ಉಷ್ಣವಲಯದಲ್ಲಿ ಹೆಚ್ಚು ಕಂಡುಬರುವ ಹಣ್ಣುಗಳಲ್ಲಿ ಒಂದಾಗಿದೆ. ವಿಟಮಿನ್​ ಸಿ ಅಂಶವನ್ನು ಅನಾನಸ್​ ಹೊಂದಿರುತ್ತದೆ. ಚಯಾಪಚಯ ಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ ಹಣ್ಣು ಹೆಚ್ಚು ಉಪಯೋಗಕಾರಿ.

10. ಸ್ಟ್ರಾಬೆರಿ ಸ್ಟ್ರಾಬೆರಿ ಅನೇಕರಿಗೆ ನೆಚ್ಚಿನ ಹಣ್ಣು. ತಿನ್ನಲು ರುಚಿಕರ ಮತ್ತು ಆರೋಗ್ಯಕ್ಕೆ ಪೌಷ್ಠಿಕಾಂಶವನ್ನು ಒದಗಿಸುವ ಹಣ್ಣು ಸ್ಟ್ರಾಬೆರಿ. ಮಿಟಮಿನ್​ ಸಿ ಮತ್ತು ಮತ್ತು ಮ್ಯಾಂಗನೀಸ್​ ಹೊಂದಿರುವ ಈ ಹಣ್ಣು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಲು ಸಹಾಯಕಾರಿಯಾಗಿದೆ.

ಇಷ್ಟೇ ಅಲ್ಲದೇ ಕಲ್ಲಂಗಡಿ, ಕಿವಿ, ಪೀಚ್​, ಪೇರಲೆ, ದ್ರಾಕ್ಷಿಹಣ್ಣು, ದಾಳಿಂಬೆ ಹಣ್ಣುಗಳಿಂದ ಆರೋಗ್ಯ ಸದೃಢತೆಗೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿ. ಅನೇಕ ರುಚಿಕರವಾದ ಮತ್ತು ಪೌಷ್ಠಿಕ ಹಣ್ಣುಗಳನ್ನು ಸೇವಿಸುವುದರ ಮೂಲಕ ಬಲಿಷ್ಠ ಆರೋಗ್ಯ ನಿಮ್ಮದಾಗಿರಲಿ. ಆರೋಗ್ಯದ ಹೆಚ್ಚಿನ ಲಾಭಕ್ಕಾಗಿ ಹಣ್ಣುಗಳನ್ನು ತಿನ್ನಲು ಮರೆಯದಿರಿ.

ಇದನ್ನೂ ಓದಿ: ಹಾವೇರಿ: ಹೊಟ್ಟೆ ಪಾಡಿಗೆ ಮಾವಿನ ಹಣ್ಣು ವ್ಯಾಪಾರ, ಉದ್ಯೋಗ ಖಾತ್ರಿಯತ್ತ ಮುಖ ಮಾಡಿದ ಅತಿಥಿ ಉಪನ್ಯಾಸಕರು

Published On - 2:43 pm, Tue, 11 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ