ಕೋವಿಡ್- 19 ಸಾವು ಸಂಭವಿಸಿದಲ್ಲಿ ಕ್ಲೇಮ್ ಮಾಡಬಹುದಾದ ಪ್ರಮುಖ ಇನ್ಷೂರೆನ್ಸ್ಗಳಿವು
ಕೊರೊನಾ ಸಂದರ್ಭದಲ್ಲಿ ಸಾವು- ನೋವು ಸಂಭವಿಸುತ್ತಿದೆ. ಇಂಥ ಸನ್ನಿವೇಶಕ್ಕೆ ಇನ್ಷೂರೆನ್ಸ್ ಸ್ಕೀಮ್ಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಪೈಕಿ ಕೆಲವಕ್ಕೆ ಪ್ರೀಮಿಯಂ ಪಾವತಿಸಬೇಕು ಹಾಗೂ ಕೆಲವಕ್ಕೆ ಅಗತ್ಯ ಇಲ್ಲ.
ಕೋವಿಡ್- 19 ಬಿಕ್ಕಟ್ಟು ಶತಮಾನದಲ್ಲಿ ಒಮ್ಮೆ ಬರಬಹುದಾದ ಸಂಕಷ್ಟ. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಎರಗಿದ ಅನಾಹುತಕ್ಕೆ ಸಿದ್ಧವೇ ಆಗಿರಲಿಲ್ಲ. ಹಲವರು ಉಸಿರು ಚೆಲ್ಲಿದರು. ವೈಯಕ್ತಿಕವಾಗಿ ಸ್ನೇಹಿತರು, ಸಂಬಂಧಿಕರನ್ನು ಕಳೆದುಕೊಂಡಾಗ ಆಗುವ ನಷ್ಟವನ್ನು ಭರಿಸುವುದು ಕಷ್ಟ. ಆದರೆ ಅವರ ಅನುಪಸ್ಥಿತಿಯಲ್ಲಿ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಗುರಿ ಆಗಬಾರದು. ಒಂದು ವೇಳೆ ಈ ಲೇಖನದಲ್ಲಿ ತಿಳಿಸಲಿರುವ ಇನ್ಷೂರೆನ್ಸ್ ಯೋಜನೆಗಳ ಪೈಕಿ ಯಾವುದನ್ನಾದರೂ ಆರಿಸಿಕೊಂಡಿದ್ದಲ್ಲಿ ಅವರ ಉತ್ತರಾಧಿಕಾರಿಗಳು ಅಥವಾ ನಾಮಿನಿಗಳಿಗೆ ಹಣಕಾಸು ನೆರವು ಸಿಕ್ಕಂತಾಗಿರುತ್ತದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಏನು ಮಾಡಬಹುದು ಅಥವಾ ನಮಗೆ ಗೊತ್ತಿಲ್ಲದೆಯೇ ಯಾವ ಇನ್ಷೂರೆನ್ಸ್ ಕವರ್ ನಮಗೆ ಆಗುತ್ತದೆ ಎಂಬ ವಿವರಗಳು ಇಲ್ಲಿವೆ.
1. ಇಪಿಎಫ್ನ ಇಡಿಎಲ್ಐ ಕ್ಲೇಮ್ EDLI ಯೋಜನೆ ಅಡಿಯಲ್ಲಿ 7 ಲಕ್ಷ ಇನ್ಷೂರೆನ್ಸ್ ದೊರೆಯುತ್ತದೆ. ಈ ಹಿಂದೆ ಮೊತ್ತ 6 ಲಕ್ಷ ಇತ್ತು. ಆದರೆ ಈಗ 7 ಲಕ್ಷಕ್ಕೆ ವಿಸ್ತರಣೆ ಆಗಿದೆ. ತುಂಬ ಮುಖ್ಯವಾಗಿ ಪಿಎಫ್ ಚಂದಾದಾರರು ಯಾವುದೇ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ. ಫೆಬ್ರವರಿ 14, 2020ರ ನಂತರ ಕನಿಷ್ಠ ಸಮ್ ಅಶ್ಯೂರ್ಡ್ 2.5 ಲಕ್ಷ ರೂಪಾಯಿದೆ. ಏಪ್ರಿಲ್ 29, 2021ರಿಂದ ಅನ್ವಯ ಆಗುವಂತೆ ಗರಿಷ್ಠ 7 ಲಕ್ಷ ರೂಪಾಯಿ ಇದೆ. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಫಾರ್ಮ್ V IF ಭರ್ತಿ ಮಾಡಿ, ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು. ಮೃತ ವ್ಯಕ್ತಿಯು ಅದಕ್ಕೂ ಮೊದಲು 12 ತಿಂಗಳು ಯಾವ ಸಂಸ್ಥೆಯಲ್ಲಿ ಸೇವೆ ಮಾಡಿದ್ದರೋ ಅಲ್ಲಿ ಕ್ಲೇಮ್ ಮಾಡಬೇಕು.
2) ಟರ್ಮ್ ಇನ್ಷೂರೆನ್ಸ್ ಮತ್ತು ಇತರ ಜೀವ ವಿಮಾ ಪಾಲಿಸಿಗಳು ಒಂದು ವೇಳೆ ಹೆಲ್ತ್ ಅಥವಾ ಟರ್ಮ್ ಇನ್ಷೂರೆನ್ಸ್ ಅಥವಾ ಬೇರೆ ಯಾವುದೇ ಇನ್ಷೂರೆನ್ಸ್ ಪ್ಲಾನ್ ಮಾಡಿದ್ದಲ್ಲಿ ಆಗ ಕೆಲವು ದಾಖಲಾತಿಗಳನ್ನು ಸಲ್ಲಿಸಿ, ಜೀವ ವಿಮೆ ಕ್ಲೇಮ್ ಮಾಡಬಹುದು.
ಭಾರತದಲ್ಲಿ ಅಗತ್ಯವಾಗುವ ದಾಖಲಾತಿಗಳು ಹೀಗಿವೆ: ಡೆತ್ ಸರ್ಟಿಫಿಕೇಟ್, ಪಾಲಿಸಿ ದಾಖಲಾತಿ, ಸಲ್ಲಿಕೆಯಾದ ಕ್ಲೇಮ್ ಫಾರ್ಮ್, ಒಂದು ವೇಳೆ ಪಾಲಿಸಿಗೆ ನಾಮಿನಿ ಇಲ್ಲದಿದ್ದಲ್ಲಿ ಅದು ಯಾರಿಗೆ ಸೇರಬೇಕು ಎಂಬುದಕ್ಕೆ ಸಂಬಂಧಿಸಿದ ಸಾಕ್ಷಿ, ಡಿಸ್ಚಾರ್ಜ್ ಫಾರ್ಮ್ ಅನುಷ್ಠಾನ ಮತ್ತು ಸಾಕ್ಷಿ. ಇದರ ಜತೆಗೆ ಆಸ್ಪತ್ರೆಯ ಪ್ರಮಾಣಪತ್ರ, ಉದ್ಯೋಗದಾತರ ಪ್ರಮಾಣಪತ್ರ, ಪೊಲೀಸ್ ವರದಿ, ವೈದ್ಯಕೀಯ ಅಟೆಂಡೆಂಟ್ ಪ್ರಮಾಣ ಪತ್ರ ಕೇಳಲಾಗುತ್ತದೆ.
3) ಆರೋಗ್ಯ ವಿಮೆ ಕ್ಲೇಮ್ ಎಂಪ್ಲಾಯಿ ಗ್ರೂಪ್ ಹೆಲ್ತ್ ಅಥಚಾ ವೈಯಕ್ತಿಕವಾದ ಕವರ್ ಯಾವುದಾದರೂ ಆಗಿರಬಹುದು. ಕೋವಿಡ್- 19 ಎಂಬ ಕಾರಣಕ್ಕೆ ಸಂಬಂಧಿಕರೋ ಸ್ನೇಹಿತರೋ ಆಸ್ಪತ್ರೆಗೆ ಸೇರಿದರೆ ಅವರಿಗೆ ಉದ್ಯೋಗ ಮಾಡುವ ಸಂಸ್ಥೆಯಲ್ಲೇ ಇನ್ಷೂರೆನ್ಸ್ ಇದೆಯಾ ಎಂಬುದನ್ನು ಗಮನಿಸಿ. ಇನ್ನು ಅದು ನೆಟ್ವರ್ಕ್ ಆಸ್ಪತ್ರೆಯೋ ಅಲ್ಲವೋ ಎಂಬುದನ್ನು ಇನ್ಷೂರೆನ್ಸ್ ಕಂಪೆನಿಗೆ ಫೋನ್ ಮಾಡಿ ತಿಳಿದುಕೊಳ್ಳಿ. ಆ ನಂತರ ಆಸ್ಪತ್ರೆಯವರಿಗೆ ಮಾಹಿತಿ ನೀಡಿ. ನೆಟ್ವರ್ಕ್ ಆಸ್ಪತ್ರೆಯೇ ಆಗಿದ್ದ್ಲಲ್ಲಿ ಕ್ಯಾಶ್ಲೆಸ್ (ನಗದುರಹಿತ) ಚಿಕಿತ್ಸೆ ಸಿಗುತ್ತದೆ. ಇಲ್ಲದಿದ್ದಲ್ಲಿ ಚಿಕಿತ್ಸೆ ನಂತರ ರೀಎಂಬರ್ಸ್ಮೆಂಟ್ ಮಾಡಿಸಿಕೊಳ್ಳಬೇಕು.
ಭಾರತದಲ್ಲಿ ಆರೋಗ್ಯ ವಿಮೆ ಕ್ಲೇಮ್ ಮಾಡುವುದಕ್ಕೆ ಬೇಕಾಗುವ ದಾಖಲಾತಿಗಳು: ಎಂಪ್ಲಾಯಿ ಐಡಿ, ಕಂಪೆನಿ ಮಾಹಿತಿ, ಯಾರು ಕ್ಲೇಮ್ ಮಾಡುತ್ತಾರೋ ಅವರಿಗೂ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೂ ಇರುವ ಸಂಬಂಧ, ಭರ್ತಿ ಮಾಡಿದ ಕ್ಲೇಮ್ ಫಾರ್ಮ್, ಮೆಡಿಕಲ್ ದಾಖಲಾತಿಗಳು- ಪರೀಕ್ಷೆ, ಡಯಾಗ್ನೋಸ್ಟಿಕ್ ರಿಪೋರ್ಟ್, ಎಮರ್ಜೆನ್ಸಿ ರಿಪೋರ್ಟ್ಸ್ ಮುಂತಾದವು, ಡಾಕ್ಟರ್ ಪ್ರಿಸ್ಕ್ರಿಪ್ಷನ್, ಡಿಸ್ಚಾರ್ಜ್ ಸಮ್ಮರಿ, ಸಂಪೂರ್ಣ ಐಟಮ್ ಪ್ರಕಾರ ಬಿಲ್.
4) ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನಾ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಆರಂಭವಾದ ವರ್ಷ ಮೇ 9, 2015. ಇದು ಟರ್ಮ್ ಇನ್ಷೂರೆನ್ಸ್ ಆಗಿದ್ದು, 2 ಲಕ್ಷ ರೂಪಾಯಿ ಮೊತ್ತ ಕವರ್ ಆಗುತ್ತದೆ. ಒಂದು ವರ್ಷದ ಟರ್ಮ್ ಆದ ಇದರ ಶುರು ಮತ್ತು ಕೊನೆಯ ದಿನಾಂಕವು ಪ್ರತಿ ವರ್ಷದ ಜೂನ್ 1ರಿಂದ ಮೇ 31. ಪ್ರೀಮಿಯಂ ಮೊತ್ತ ವರ್ಷಕ್ಕೆ 330 ರೂಪಾಯಿ. ಜೀವ ವಿಮಾ ನಿಗಮ ಸೇರಿದಂತೆ ಇತರ ಇನ್ಷೂರೆನ್ಸ್ ಕಂಪೆನಿಗಳ ಬಳಿ ಈ ಯೋಜನೆ ದೊರೆಯುತ್ತದೆ. ನೋಂದಣಿ ಆದ 45 ದಿನಗಳ ನಂತರವಷ್ಟೇ ಕ್ಲೇಮ್ ಮಾಡಲು ಸಾಧ್ಯ.
ಅರ್ಜಿಯನ್ನು ಭರ್ತಿ ಮಾಡಿ, ಡೆತ್ ಸರ್ಟಿಫಿಕೇಟ್, ಕ್ಯಾನ್ಸಲ್ ಚೆಕ್ ಮತ್ತಿತರ ಅಗತ್ಯ ದಾಖಲಾತಿಗಳನ್ನು ಹಾಕಿ, ಕ್ಲೇಮ್ ಮಾಡಬಹುದು. ಬ್ಯಾಂಕ್ಗಳು ಅದನ್ನು ಸಂಬಂಧಪಟ್ಟ ಇನ್ಷೂರೆನ್ಸ್ ಕಂಪೆನಿಗಳಿ 30 ದಿನಗಳ ಒಳಗಾಗಿ ಫಾರ್ವರ್ಡ್ ಮಾಡುತ್ತವೆ.
ಈಗ ಪಾಲಿಸಿಯನ್ನು ಖರೀದಿ ಮಾಡಬಹುದಾ? 1) ವರ್ಷದ ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ಖರೀದಿಸಬಹುದು. ಪ್ರೀಮಿಯಂ ಅನ್ನು ಪ್ರೋರೇಟಾ ಆಧಾರದಲ್ಲಿ ಪಾವತಿಸಲಾಗುತ್ತದೆ. ಈ ಫೀಚರ್ ಅನ್ನು 2018-19ರ ಪಾಲಿಸಿ ವರ್ಷದಿಂದ ತರಲಾಗಿದೆ. ಆದರೆ ನೋಂದಣಿಯನ್ನು ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ವಾರ್ಷಿಕ ಪ್ರೀಮಿಯಂ 330 ರೂಪಾಯಿ ಪಾವತಿಸಿ, ಆಗಬೇಕು.
2) ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್- 3 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ; ಅದು 258 ಪಾವತಿಸಬೇಕು
3) ಡಿಸೆಂಬರ್, ಜನವರಿ ಮತ್ತು ಫೆಬ್ರವರಿ – 2 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ; ರೂ. 172 ಪಾವತಿಸಬೇಕು
4) ಮಾರ್ಚ್, ಏಪ್ರಿಲ್ ಮತ್ತು ಮೇ – 1 ತ್ರೈಮಾಸಿಕದ ಪ್ರೀಮಿಯಂ 86 ರೂಪಾಯಿ ಪಾವತಿಸಬೇಕು.
ಇದನ್ನೂ ಓದಿ: LIC Jeevan Saathi: ಗಂಡ- ಹೆಂಡತಿಗೆ ಇನ್ಷೂರೆನ್ಸ್ ಪಾಲಿಸಿ; ದಿನಕ್ಕೆ 120ರಂತೆ ಪಾವತಿಸಿ, 27 ಲಕ್ಷ ಉಳಿಸಿ
(Here are the various health, life and term insurance in case of Covid 19 emergency)