Fee Financing: ಶಾಲೆ- ಕಾಲೇಜು ಫೀ ಕಟ್ಟಲು ಸಿಗುತ್ತದೆ ಸಾಲ ಸೌಲಭ್ಯ; ಕೆಲವು ಜೀರೋ ಕಾಸ್ಟ್ ಇಎಂಐ

ಇನ್ನೇನು ಹೊಸ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಫೀ ಕಟ್ಟಬೇಕಿದೆ. ಕೊರೊನಾ ಕಾರಣಕ್ಕೆ ಪೋಷಕರು ಸಮಸ್ಯೆಯಲ್ಲಿದ್ದಾರೆ. ಇಂಥ ಸನ್ನಿವೇಶದಲ್ಲಿ ಶುಲ್ಕ ಪಾವತಿಗೆ ಹಣಕಾಸು ಸೌಲಭ್ಯ ಒದಗಿಸುವ ಸಂಸ್ಥೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Fee Financing: ಶಾಲೆ- ಕಾಲೇಜು ಫೀ ಕಟ್ಟಲು ಸಿಗುತ್ತದೆ ಸಾಲ ಸೌಲಭ್ಯ; ಕೆಲವು ಜೀರೋ ಕಾಸ್ಟ್ ಇಎಂಐ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 12, 2021 | 12:29 PM

ಶಾಲೆ ಮತ್ತು ಕಾಲೇಜುಗಳು ಮತ್ತೆ ತೆರೆಯುತ್ತಿವೆ, ಮುಚ್ಚುತ್ತಿವೆ. ವಿದ್ಯಾರ್ಥಿಗಳ ಪೋಷಕರಿಗೆ ಈಗ ಕೊರೊನಾ ಬಿಕ್ಕಟ್ಟು ಒಂದು ಕಡೆಯಿಂದ ಸಮಸ್ಯೆಯಾದರೆ, ಶಾಲೆ ಅಥವಾ ಕಾಲೇಜಿಗೆ ಕಟ್ಟಬೇಕಾದ ಫೀ ಗಡುವಿನ ಆತಂಕ ಮತ್ತೊಂದು ಕಡೆ ಇದೆ. ಹೊಸ ಶೈಕ್ಷಣಿಕ ವರ್ಷ ಶುರುವಾಗುತ್ತಿದ್ದಂತೆ ಮಕ್ಕಳ ಜತೆಗೆ ಪೋಷಕರದೂ ಸಮಸ್ಯೆ ಶುರುವಾಗುತ್ತದೆ. ಇದೇ ಕ್ಷೇತ್ರದಲ್ಲಿ ಇರುವ ತಜ್ಙರು ಹೇಳುವ ಪ್ರಕಾರ, ಬಹುತೇಕ ಪೋಷಕರು ಇಎಂಐ (ಈಕ್ವೇಟೆಡ್ ಮಂತ್ಲಿ ಇನ್​ಸ್ಟಾಲ್​ಮೆಂಟ್) ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷದ ಶಾಲೆ ಶುಲ್ಕ ಪಾವತಿಸಲು ಕಳೆದ ವರ್ಷದಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಹಲವು ಹಣಕಾಸು ಸಂಸ್ಥೆಗಳು ಫೀ ಕಟ್ಟುವುದಕ್ಕೆ ಸಾಲ ಸೌಲಭ್ಯ ನೀಡುತ್ತಿವೆ. Financepeer, GrayQuest ಮುಂತಾದವು ಸಾಲ ನೀಡುತ್ತಿವೆ.

Financepeer ಸಿಇಒ ಮತ್ತು ಸ್ಥಾಪಕ ರೋಹಿತ್ ಗಜ್​ಭಿಯೆ ಮಾತನಾಡಿ, ಯಾರಿಗೆ ಹಣ ಕಟ್ಟುವುದಕ್ಕೆ ಆಗುವುದಿಲ್ಲವೋ ಈ ಪ್ಲಾಟ್​ಫಾರ್ಮ್​ಗಳು ಇಡೀ ವರ್ಷದ ಶಾಲೆಯ ಶುಲ್ಕವನ್ನು ಪೋಷಕರ ಪರವಾಗಿ ಪಾವತಿ ಮಾಡುತ್ತವೆ. ಆ ನಂತರ ಕಡಿಮೆ ವೆಚ್ಚದಲ್ಲಿ ಮರುಪಾವತಿ ಮಾಡಬಹುದು. ಇನ್ನು ಈ ಪ್ಲಾಟ್​ಫಾರ್ಮ್​ಗಳ ಪೈಕಿ ಇರುವ ಅತ್ಯುತ್ತಮ ಆಯ್ಕೆ ಏನೆಂದರೆ, ಜೀರೋ- ಕಾಸ್ಟ್ ಇಎಂಐ. ಪರಿಣತರು ಹೇಳುವಂತೆ, ಇದರಿಂದ ಪೋಷಕರ ಮೇಲಿನ ಹೊರೆ ಕಡಿಮೆ ಆಗುತ್ತದೆ. ಇಡೀ ವರ್ಷದ ಶುಲ್ಕ ಮೊದಲಿಗೇ ಪಾವತಿಯಾಗುತ್ತದೆ. ಇದರಿಂದಾಗಿ ಮಗುವಿನ ಶಿಕ್ಷಣಕ್ಕೆ ಸಮಸ್ಯೆ ಆಗಲ್ಲ.

ಹೇಗೆ ಕೆಲಸ ಮಾಡುತ್ತದೆ? ಈ ಪ್ಲಾಟ್​ಫಾರ್ಮ್​ಗಳು ಶಿಕ್ಷಣ ಸಂಸ್ಥೆಗಳ ಜತೆಗೆ ಪಾರ್ಟನರ್​ ಆಗಿರುತ್ತವೆ. ಉದಾಹರಣೆಗೆ Financepeerನಿಂದ 6000 ಶಿಕ್ಷಣ ಸಂಸ್ಥೆಗಳ ಜತೆಗೆ ಸಹಭಾಗಿತ್ವ ಇದೆ. ಫೀ ಹಣಕಾಸು ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಪೋಷಕರು ಹಣಕಾಸು ಸೌಲಭ್ಯ ಪಡೆಯಬಹುದು. ಹಣಕಾಸು ಸಮಸ್ಯೆ ಅನ್ನೋ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬೇಕಾದ ಪ್ರಮೇಯ ಇರುವುದಿಲ್ಲ. ಇನ್ನು ಇದಕ್ಕಾಗಿ ಅಲ್ಪ ಪ್ರಮಾಣದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ.

ಈ ಫೀ ಹಣಕಾಸು ಸೌಲಭ್ಯದಿಂದ ಪೋಷಕರಿಗೆ ಹೇಗೆ ಅನುಕೂಲ? ಈ ಕಂಪೆನಿಗಳು ಪೋಷಕರ ಪರವಾಗಿ ಪೂರ್ತಿ ವರ್ಷದ ಫೀ ಪಾವತಿಸುತ್ತವೆ. ಜೀರೋ ಕಾಸ್ಟ್ ಇಎಂಐ ಆಧಾರದಲ್ಲಿ ಹಣ ಮರುಪಾವತಿಸುವ ಅವಕಾಶ ಇದೆ. ಹಣಕಾಸು ವ್ಯವಸ್ಥೆಯು ಯಾವುದೇ ಪ್ರೊಸೆಸಿಂಗ್ ಶುಲ್ಕ ಅಥವಾ ಮಧ್ಯವರ್ತಿಗಳ ಶುಲ್ಕ ಇಲ್ಲದೆ ಒದಗಿಸಲಾಗುತ್ತದೆ. ಪೋಷಕರು ಆರರಿಂದ ಒಂಬತ್ತು ಕಂತುಗಳಲ್ಲಿ ಅದನ್ನು ಮರುಪಾವತಿಸಬಹುದು. ಆ ಕಾರಣಕ್ಕೆ ಪರಿಣತರು ಹೇಳುವುದೇನೆಂದರೆ, ಈ ಪ್ಲಾಟ್​ಫಾರ್ಮ್​ಗಳಿಂದ ಪೋಷಕರ ಹೊರೆ ಇಳಿಯುತ್ತದೆ. ಮನೆ ನಡೆಸುವುದಕ್ಕೆ ಆಗುವ ಖರ್ಚಿನ ಕಡೆಗೆ ಗಮನ ಹರಿಸಬಹುದು. ಒಂದು ವೇಳೆ ಅನಿರೀಕ್ಷಿತ ಅವಘಡಗಳು ಸಂಭವಿಸಿದಲ್ಲಿ ಮಕ್ಕಳ ಜೀವಿತಾವಧಿಯುದ್ದಕ್ಕೂ ಶಿಕ್ಷಣ ಶುಲ್ಕಕ್ಕೆ ಪೋಷಕರಿಗೆ ಇನ್ಷೂರೆನ್ಸ್ ರಕ್ಷಣೆ ಇರುತ್ತದೆ.

ಶೈಕ್ಷಣಿಕ ಸಾಲ ಅಥವಾ ಪರ್ಸನಲ್​ ಲೋನ್​ಗಿಂತ ಇದು ಹೇಗೆ ಭಿನ್ನ? ಶೈಕ್ಷಣಿಕ ಸಾಲಕ್ಕಿಂತ ಶುಲ್ಕ ಪಾವತಿಗೆ ಸಾಲ ಸೌಲಭ್ಯ ಒದಗಿಸುವುದು ಸ್ವಲ್ಪ ಭಿನ್ನ. ಶೈಕ್ಷಣಿಕ ಸಾಲದ ಮರುಪಾವತಿ ಶುರುವಾಗುವುದೇ ಶಿಕ್ಷಣ ಪೂರ್ತಿಯಾದ ನಂತರ. ಆದರೆ ಶುಲ್ಕ ಹಣಕಾಸು ಸೌಲಬ್ಯದಲ್ಲಿ ಮರುಪಾವತಿ ಶೈಕ್ಷಣಿಕ ವರ್ಷದಲ್ಲೇ ಆರಂಭವಾಗುತ್ತದೆ. ಶೈಕ್ಷಣಿಕ ಸಾಲ ಪಡೆಯುವುದು ಸಾಮಾನ್ಯವಾಗಿ ಉನ್ನತ ಶಿಕ್ಷಣಕ್ಕೆ. ಆದರೆ ಶುಲ್ಕ ಪಾವತಿಸಲು ಪಡೆಯುವ ಸಾಲ ಯಾವ ಹಂತದಲ್ಲಾದರೂ ಅನ್ವಯ ಆಗುತ್ತದೆ. ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಸಾಮಾನ್ಯವಾಗಿ ಶೈಕ್ಷಣಿಕ ಸಾಲ ಮರುಪಾವತಿ 60 ತಿಂಗಳ ಅವಧಿಯದ್ದಾಗಿರುತ್ತದೆ. ಆದರೆ ಶುಲ್ಕ ಹಣಕಾಸು ಸೌಲ್ಯಭ್ಯವು 6ರಿಂದ 12 ಇಎಂಐಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: Personal finance: ಸ್ಯಾಲರಿ ಓವರ್​ಡ್ರಾಫ್ಟ್ ಅಥವಾ ಕ್ರೆಡಿಟ್​ ಕಾರ್ಡ್ ಇವೆರಡರಲ್ಲಿ ಯಾವ ಸಾಲ ಉತ್ತಮ?

ಇದನ್ನೂ ಓದಿ: Education loan: ವಿದೇಶ ವ್ಯಾಸಂಗಕ್ಕೆ ಕಡಿಮೆ ಬಡ್ಡಿ ದರದ ಶೈಕ್ಷಣಿಕ ಸಾಲ ನೀಡುವ ಸಾರ್ವಜನಿಕ ಬ್ಯಾಂಕ್​ಗಳಿವು

(Financial institutions provide finance for school and college fee with zero cost EMI)

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು