Education loan: ವಿದೇಶ ವ್ಯಾಸಂಗಕ್ಕೆ ಕಡಿಮೆ ಬಡ್ಡಿ ದರದ ಶೈಕ್ಷಣಿಕ ಸಾಲ ನೀಡುವ ಸಾರ್ವಜನಿಕ ಬ್ಯಾಂಕ್ಗಳಿವು
ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ನೀಡುವ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಪಟ್ಟಿ ಇಲ್ಲಿದೆ.
ನವದೆಹಲಿ: ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಕನಸು ಹೊತ್ತುಕೊಂಡಿರುವವರಿಗಾಗಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಂದ (PSB’s) ಅತ್ಯುತ್ತಮ ದರದಲ್ಲಿ ಶೈಕ್ಷಣಿಕ ಸಾಲವನ್ನು ಒದಗಿಸುತ್ತಿದೆ. ಆದರೆ ಅವುಗಳಲ್ಲಿ ಗರಿಷ್ಠ ಸಾಲದ ಮಿತಿ ಇದೆ. ಉದಾಹರಣೆಗೆ ಬ್ಯಾಂಕ್ ಆಫ್ ಇಂಡಿಯಾದಿಂದ ಶೇಕಡಾ 7.55ರಿಂದ ಶೇ 9.35ರ ಮಧ್ಯದ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲವನ್ನು ಒದಗಿಸಲಾಗುತ್ತದೆ. ಆದರೆ ಗರಿಷ್ಠ 20 ಲಕ್ಷ ರೂಪಾಯಿ ಮಾತ್ರ ಸಾಲ ನೀಡಲಾಗುತ್ತದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಚಾರಕ್ಕೆ ಬಂದರೆ, ಶೇಕಡಾ 8.8ರಿಂದ ಶೇ 9.3ರ ಮಧ್ಯೆ ಸಾಲ ನೀಡಲಾಗುತ್ತದೆ. ನಿರ್ದಿಷ್ಟವಾದ ಕೋರ್ಸ್ಗಳಿಗೆ 1.5 ಕೋಟಿ ತನಕ ಸಾಲವನ್ನು ಪಡೆಯಬಹುದು.
ಒಂದು ವೇಳೆ ಸಾಲದ ಮೊತ್ತವು 4 ಲಕ್ಷ ರೂಪಾಯಿಯನ್ನು ದಾಟಿದಲ್ಲಿ ಬಹಳಷ್ಟು ಬ್ಯಾಂಕ್ಗಳು ಭದ್ರತೆ ಒದಗಿಸುವಂತೆ ಕೇಳುತ್ತವೆ. ಅಂದರೆ ಮನೆ ಮೊದಲಾದವುಗಳನ್ನು ಅಡಮಾನವಾಗಿ ಇಡಬೇಕಾಗುತ್ತದೆ. ಆದರೆ ಸಾರ್ವಜನಿಕ ಬ್ಯಾಂಕ್ಗಳಲ್ಲಿನ ಅತಿ ದೊಡ್ಡ ಸವಾಲು ಏನೆಂದರೆ, ಪ್ರೊಸೆಸಿಂಗ್ಗೆ ತೆಗೆದುಕೊಳ್ಳುವ ಅವಧಿ. ತುಂಬ ಬೇಗ ಸಾಲ ಪಡೆಯುವ ಪ್ರಕ್ರಿಯೆ ಶುರು ಮಾಡಿದರೆ ಉತ್ತಮ. ನಿಮ್ಮ ಬಳಿ ಎಲ್ಲ ದಾಖಲಾತಿಗಳು ಇದ್ದ ಹೊರತಾಗಿಯೂ ಸಾಲ ಮಂಜೂರಾತಿಗೆ 3 ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಸಾಲ ಮಂಜೂರಾತಿಯಲ್ಲಿ ಹಲವು ಪ್ರಕ್ರಿಯೆಗಳಿವೆ. ಅದರಲ್ಲೂ ಏನನ್ನಾದರೂ ಅಡಮಾನ ಅಥವಾ ಖಾತ್ರಿಯಾಗಿ ಪಡೆದು, ಸಾಲ ನೀಡುವಾಗ ಪ್ರಕ್ರಿಯೆಗಳು ಸುದೀರ್ಘವಾಗಿ ಇರುತ್ತವೆ.
ಯಾವ ಕೋರ್ಸ್, ಕಾಲೇಜು ಮತ್ತು ವಿಶ್ವವಿದ್ಯಾಲಯ ಎಂಬುದರ ಕಡೆಗೆ ಸಾರ್ವಜನಿಕ ಬ್ಯಾಂಕ್ಗಳು ಹೆಚ್ಚಿನ ಗಮನ ನೀಡುತ್ತವೆ. 4 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತದ ಖಾತ್ರಿ- ಅಡಮಾನ ಸಹಿತವಾದ ಸಾಲಕ್ಕೆ ಈ ಮಾನದಂಡಗಳು ಮುಖ್ಯವಾಗುತ್ತವೆ. ಜರ್ಮನಿಯಲ್ಲಿ ಕೋರ್ಸ್ ಮಾಡುವುದಕ್ಕಿಂತ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವವರಿಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಇನ್ನು ಈ ಲೇಖನದಲ್ಲಿ ಯಾವ ಬ್ಯಾಂಕ್ನಲ್ಲಿ ಎಜುಕೇಷನ್ ಲೋನ್ ಮೇಲೆ ಬಡ್ಡಿ ಎಷ್ಟಿದೆ ಹಾಗೂ ಗರಿಷ್ಠ ಸಾಲ ಎಷ್ಟು ನೀಡುತ್ತಾರೆ ಎಂಬ ಮಾಹಿತಿ ಇಲ್ಲಿದೆ. ಪ್ರೊಸೆಸಿಂಗ್ ಶುಲ್ಕ ಎಷ್ಟು ಮತ್ತು ಮಾರ್ಜಿನ್ ಎಷ್ಟು ಇರಬೇಕು ಎಂಬ ಬಗ್ಗೆ ಆಯಾ ಬ್ಯಾಂಕ್ನಲ್ಲಿ ಮಾಹಿತಿ ಪಡೆಯಿರಿ. ಏಪ್ರಿಲ್ 23, 2021ಕ್ಕೆ ಅನ್ವಯ ಆಗುವಂತೆ ವಿವರಗಳು ಹೀಗಿವೆ:
1) ಬ್ಯಾಂಕ್ ಆಫ್ ಇಂಡಿಯಾ: ಶೇ 7.55- 9.35, 20 ಲಕ್ಷ ರೂ. ತನಕ 2) ಬ್ಯಾಂಕ್ ಆಫ್ ಬರೋಡ: ಶೇ 7.75- 8.90, 80 ಲಕ್ಷ ರೂ. ತನಕ 3) ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ 8.60- 9.10, ಯಾವುದೇ ಸಾಲ ಮಿತಿ ಇಲ್ಲ 4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.80- 9.30*, 1.5 ಕೋಟಿ ರೂ. ತನಕ 5) ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ 8.80- 9.55, ಯಾವುದೇ ಸಾಲ ಮಿತಿ ಇಲ್ಲ 6)ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.80- 10.05, 30 ಲಕ್ಷ ರೂ. ತನಕ 9) ಫೆಡರಲ್ ಬ್ಯಾಂಕ್: ಶೇ 10.05 ಮೇಲ್ಪಟ್ಟು, 20 ಲಕ್ಷ ರೂ. ತನಕ 10) ಎಚ್ಡಿಎಫ್ಸಿ ಕ್ರೆಡಿಲಾ: ಶೇ 12.05+ ಸ್ಪ್ರೆಡ್, 1 ಲಕ್ಷ ರೂ. ಮೇಲ್ಪಟ್ಟು 11) ಅವನ್ಸೆ: ಶೇ 12.65+ ಸ್ಪ್ರೆಡ್, 1 ಲಕ್ಷ ರೂ. ಮೇಲ್ಪಟ್ಟು 12) ಆಕ್ಸಿಸ್ ಬ್ಯಾಂಕ್: ಶೇ 13.70- 15.20, 50,000 ರೂ.ದಿಂದ 75 ಲಕ್ಷ ರೂ.
ಎಸ್ಬಿಐ Rinn Raksha ಅಥವಾ ಇನ್ಯಾವುದೇ ಪ್ರಸ್ತುತ ಪಾಲಿಸಿ ಬ್ಯಾಂಕ್ನಲ್ಲಿ ಪಡೆದರೆ ವಿದ್ಯಾರ್ಥಿಗಳಿಗೆ ಶೇ 0.50 ವಿನಾಯಿತಿ.
ಇದನ್ನೂ ಓದಿ: Bank fixed deposits: ಹಿರಿಯ ನಾಗರಿಕರ ವಿಶೇಷ ಫಿಕ್ಸೆಡ್ ಡೆಪಾಸಿಟ್ಸ್ಗಳ ಬಡ್ಡಿ ದರ ಜೂನ್ 30ರ ತನಕ ವಿಸ್ತರಣೆ
(Public Sector Banks (PSB’s) which cheaper interest rate loan for foreign education)