Personal finance: ಸ್ಯಾಲರಿ ಓವರ್​ಡ್ರಾಫ್ಟ್ ಅಥವಾ ಕ್ರೆಡಿಟ್​ ಕಾರ್ಡ್ ಇವೆರಡರಲ್ಲಿ ಯಾವ ಸಾಲ ಉತ್ತಮ?

ಹಣಕಾಸಿನ ತುರ್ತು ಅಂದಾಗ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಅಂಥ ಸಾಲಗಳ ಪೈಕಿ ಸ್ಯಾಲರಿ ಓವರ್​ಡ್ರಾಫ್ಟ್ ಕೂಡ ಒಂದು. ಒಂದು ವೇಳೆ ಕ್ರೆಡಿಟ್ ಕಾರ್ಡ್ ಇದ್ದಲ್ಲಿ ಅದನ್ನು ಬಳಸಬಹುದಾ? ಈ ಎರಡರಲ್ಲಿ ಯಾವುದು ಬೆಸ್ಟ್ ಅನ್ನೋದಿಕ್ಕೆ ಇಲ್ಲಿದೆ ಉತ್ತರ.

Personal finance: ಸ್ಯಾಲರಿ ಓವರ್​ಡ್ರಾಫ್ಟ್ ಅಥವಾ ಕ್ರೆಡಿಟ್​ ಕಾರ್ಡ್ ಇವೆರಡರಲ್ಲಿ ಯಾವ ಸಾಲ ಉತ್ತಮ?
ಪ್ರಾತಿನಿಧಿಕ ಚಿತ್ರ
Follow us
|

Updated on: May 08, 2021 | 4:11 PM

ಸಾಮಾನ್ಯವಾಗಿ ತಿಂಗಳ ಕೊನೆಯಲ್ಲಿ ಹಣದ ಸಮಸ್ಯೆಗೆ ಗುರಿಯಾಗುವ ಯುವ ವೇತನದಾರರನ್ನೇ ಸಾಲ ನೀಡುವ ಸಂಸ್ಥೆಗಳು ಗುರಿಯಾಗಿ ಮಾಡಿಕೊಳ್ಳುತ್ತವೆ. ಆದರೆ ಹಲವು ಬ್ಯಾಂಕ್​ಗಳು ಒಂದೇ ರೀತಿಯ ಸಾಲವನ್ನು ನೀಡುತ್ತವೆ- ಅದೇ ಸ್ಯಾಲರಿ ಓವರ್​ಡ್ರಾಫ್ಟ್. ಸಾಲ ಸಿಗುತ್ತೆ ಅನ್ನೋದೇನೋ ನಿಜ. ಆದರೆ ಅದಕ್ಕೂ ಮುಂಚೆ ಗಮನಿಸಬೇಕಾದ ಅಂಶಗಳೇನು ಎಂಬ ಬಗ್ಗೆ ವಿಶ್ಲೇಷಕರು ಏನು ಹೇಳುತ್ತಾರೆ ಎಂದು ತಿಳಿಸಿಕೊಡುತ್ತದೆ ಈ ಲೇಖನ. ಪ್ರತಿ ಸಂದರ್ಭಕ್ಕೂ ಬ್ಯಾಂಕ್​ಗಳಿಂದ ಸಾಲ ಇದೆ. ತುಂಬ ಸುಲಭಕ್ಕೆ ಕೈಗೆ ಸಿಗುವ ಸಾಲಗಳಲ್ಲಿ ಸ್ಯಾಲರಿ ಓವರ್​ಡ್ರಾಫ್ಟ್​ ಕೂಡ ಒಂದು. ಅಲ್ಪಾವಧಿಯ ತುರ್ತು ಹಣದ ಅಗತ್ಯಗಳಿಗೆ ಈ ಸಾಲ ಪಡೆಯುವುದು ಸುಲಭ ಎಂಬ ಭಾವನೆ ಇದೆ. ಆದರೆ ಸ್ಯಾಲರಿ ಓವರ್​ಡ್ರಾಫ್ಟ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಆಗುತ್ತದೆ.

ಏನಿದು ಸ್ಯಾಲರಿ ಓವರ್​ಡ್ರಾಫ್ಟ್? ಸ್ಯಾಲರಿ ಖಾತೆಯ ಮೇಲೆ ಪಡೆಯಬಹುದಾದ ಸಾಲ ಸೌಲಭ್ಯ ಇದು. ತುಂಬ ಸರಳವಾಗಿ ಹೇಳಬೇಕೆಂದರೆ, ಸ್ಯಾಲರಿ ಓವರ್​ಡ್ರಾಫ್ಟ್ ಎಂಬುದು ಕ್ರೆಡಿಟ್ ಕಾರ್ಡ್ ಥರ ಕೆಲಸ ಮಾಡುತ್ತದೆ. ಆಯಾ ಖಾತೆದಾರರಿಗೆ ಯಾವ್ಯಾವ ಅನುಕೂಲ ಮಾಡಿಕೊಟ್ಟಿರುತ್ತಾರೋ ಅದರ ಆಧಾರದಲ್ಲಿ ನಿರ್ದಿಷ್ಟ ಮೊತ್ತವನ್ನು, ಸ್ಯಾಲರಿ ಖಾತೆಯಲ್ಲಿ ಇರುವ ಮೊತ್ತಕ್ಕಿಂತ ಹೆಚ್ಚಿನದನ್ನು ವಿಥ್ ಡ್ರಾ ಮಾಡಲು ಅವಕಾಶ ನೀಡಲಾಗುತ್ತದೆ.

ಪ್ರತಿ ಬ್ಯಾಂಕ್ ಕೂಡ ಅದರದೇ ಅರ್ಹತಾ ಮಾನದಂಡಗಳನ್ನು ಇರಿಸಿಕೊಂಡಿರುತ್ತವೆ. ಅದರ ಆಧಾರದಲ್ಲಿ ಓವರ್​ಡ್ರಾಫ್ಟ್​ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಬರುವ ನಿವ್ವಳ ವೇತನದ ಒಂದರಿಂದ ಮೂರು ಪಟ್ಟು ನೀಡಲಾಗುತ್ತದೆ. ಆದರೆ ಕೆಲವು ಬ್ಯಾಂಕ್​ಗಳು ಇದನ್ನು ವೇತನದ ಶೇ 80ರಿಂದ 90ರಷ್ಟಕ್ಕೆ ಮಿತಿಗೊಳಿಸಬಹುದು ಅಥವಾ ನಿರ್ದಿಷ್ಟವಾದ ಓವರ್​ಡ್ರಾಫ್ಟ್ ಮೊತ್ತ ನಿಗದಿ ಮಾಡಬಹುದು. ಈ ಎರಡರ ಪೈಕಿ ಯಾವುದು ಕಡಿಮೆಯೋ ಅಷ್ಟನ್ನು ಮಾತ್ರ ನೀಡುವ ಸಾಧ್ಯತೆಯೂ ಇದೆ.

ಉದಾಹರಣೆಗೆ, ಕೆಲವು ಬ್ಯಾಂಕ್​ಗಳು ಓವರ್​ಡ್ರಾಫ್ಟ್​ ಮೊತ್ತವನ್ನು 3ರಿಂದ 5 ಲಕ್ಷಕ್ಕೆ ಮಿತಿಗೊಳಿಸಬಹುದು. ಮತ್ತೂ ಕೆಲವು ಬ್ಯಾಂಕ್​ಗಳು ಗ್ರಾಹಕರು ಆದಾಯವನ್ನೇ ಗಣನೆಗೆ ತೆಗೆದುಕೊಳ್ಳದೆ 1ರಿಂದ 1.5 ಲಕ್ಷ ರೂಪಾಯಿಗೆ ಮಿತಿಗೊಳಿಸಬಹುದು. ಇನ್ನೂ ಕೆಲ ಬ್ಯಾಂಕ್​ಗಳಂತೂ 10ರಿಂದ 25 ಸಾವಿರ ರೂಪಾಯಿಯೊಳಗೇ ಓವರ್​ಡ್ರಾಫ್ಟ್ ಅನುಕೂಲ ನೀಡುತ್ತದೆ. ಆಯಾ ಬ್ಯಾಂಕ್​ಗಳ ನೀತಿಯನ್ನು ಅನುಸರಿಸಿ ಮೊತ್ತ ನಿರ್ಧಾರ ಆಗುತ್ತದೆ.

ಮರುಪಾವತಿ ಹೇಗೆ? ಇನ್ನು ಮರುಪಾವತಿ ವಿಚಾರಕ್ಕೆ ಬಂದರೆ, ಅದು ಕೂಡ ಬ್ಯಾಂಕ್​ನಿಂದ ಬ್ಯಾಂಕ್​ಗೆ ಬದಲಾಗುತ್ತದೆ. ಬಹುತೇಕ ಬ್ಯಾಂಕ್​ಗಳು ಆಟೋ ಡೆಬಿಟ್ ವ್ಯವಸ್ಥೆ ಹೊಂದಿವೆ. ಅಂದರೆ ಯಾವಾಗ ಖಾತೆಯಲ್ಲಿ ಅಗತ್ಯ ಪ್ರಮಾಣದ ಹಣ ಇದೆಯೋ ಆಗ ಮೊತ್ತವು ಡೆಬಿಟ್ ಆಗುತ್ತದೆ. ಆದರೆ ನೆನಪಿರಲಿ, ಸ್ಯಾಲರಿ ಓವರ್​ಡ್ರಾಫ್ಟ್ ಅನ್ನೋದು ಆಯ್ದ ಖಾತೆದಾರರಿಗೆ ಮಾತ್ರ ಸಿಗುತ್ತದೆ, ಅವರ ಅರ್ಹತೆ, ಕ್ರೆಡಿಟ್ ಹಿಸ್ಟರಿ ಮೇಲೆ ಆಧಾರಪಟ್ಟಿರುತ್ತದೆ. ಓವರ್​ಡ್ರಾಫ್ಟ್ ಬೇಕೆಂದರೆ ನೆಟ್​ ಬ್ಯಾಂಕಿಂಗ್ ಮೂಲಕ ಅಪ್ಲೈ ಮಾಡಬೇಕು. ಅದಕ್ಕೆ ಪ್ರೊಸೆಸಿಂಗ್ ಶುಲ್ಕ ಆಗುತ್ತದೆ. ಕೆಲವು ಸಂದರ್ಭಗಳಲ್ಲಿ ಆರಂಭದಲ್ಲೇ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಓವರ್​ಡ್ರಾ ಮಿತಿ ನೀಡಿದ ನಂತರ ಶುಲ್ಕ ಹಾಕಲಾಗುತ್ತದೆ. ಒಂದು ವರ್ಷದ ಆಚೆಗೆ ಸಾಲದ ಅವಧಿ ಮುಂದುವರಿಸಬೇಕು ಎಂದಾದಲ್ಲಿ ರಿನೀವಲ್ ಶುಲ್ಕ ಪಾವತಿಸಬೇಕಾಗುತ್ತದೆ.

ಗೊತ್ತಿರಲೇಬೇಕಾದ ಸಂಗತಿ ಏನೆಂದರೆ, ವೇತನದ ಮೇಲೆ ಓವರ್​ಡ್ರಾಫ್ಟ್ ದುಬಾರಿಯಾದದ್ದು. ಅದು ಸರಳ ಬಡ್ಡಿಯೇ ಇರಬಹುದು ಅಥವಾ ನಿತ್ಯದ ಇಳಿಕೆ ಬಾಕಿಯೇ ಆಗಿರಬಹುದು. ಸರಾಸರಿ ಬಡ್ಡಿ ದರವು ತಿಂಗಳಿಗೆ ಶೇ 1ರಿಂದ 3ರಷ್ಟಿರುತ್ತದೆ ಅಥವಾ ವರ್ಷಕ್ಕೆ ಶೇ 12ರಿಂದ 30ರಷ್ಟಾಗುತ್ತದೆ. ಯಾವ ಬ್ಯಾಂಕ್ ಅನ್ನೋದರ ಮೇಲೆ ನಿರ್ಧಾರ ಆಗುತ್ತದೆ. ಒಂದು ವೇಳೆ ಪಾವತಿಯನ್ನು ತಪ್ಪಿಸಿದರೆ ಇನ್ನೂ ದುಬಾರಿ ಆಗುತ್ತದೆ.

ಕ್ರೆಡಿಟ್​ ಕಾರ್ಡ್​ಗಳಾದರೆ ಎಕ್ಸ್​ಕ್ಲೂಸಿವ್ ಆಫರ್​ಗಳು ಅಥವಾ ರಿವಾರ್ಡ್ಸ್​ ಪಾಯಿಂಟ್​ಗಳು ಬರುತ್ತವೆ. ತಕ್ಷಣಕ್ಕೆ ನಗದು ಬೇಕು ಅಂತ ಇಲ್ಲದಿದ್ದಲ್ಲಿ ಕ್ರೆಡಿಟ್ ಕಾರ್ಡ್​ ಮೂಲಕ ನಿಮ್ಮ ಅಗತ್ಯವನ್ನು ಈಡೇರಿಸಿಕೊಳ್ಳಿ. ತುಂಬ ಕಡಿಮೆ ವೆಚ್ಚದಲ್ಲಿ ಉದ್ದೇಶ ಈಡೇರುತ್ತದೆ. ಇನ್ನು ಕ್ರೆಡಿಟ್​ ಕಾರ್ಡ್​ಗಳಾದರೆ ಬಡ್ಡಿ ರಹಿತವಾಗಿ ತಿಂಗಳಲ್ಲಿ ಒಂದಿಷ್ಟು ಸಮಯ ಸಿಗುತ್ತದೆ. ಆ ಕಾರಣಕ್ಕೆ ಸ್ಯಾಲರಿ ಓವರ್​ಡ್ರಾಫ್ಟ್​ಗಿಂತ ಕ್ರೆಡಿಟ್ ಕಾರ್ಡ್ ಉತ್ತಮ ಎನಿಸುತ್ತದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್‌ನಿಂದ 50ಕ್ಕೂ ಹೆಚ್ಚು ರೈತರಿಗೆ ನೋಟಿಸ್; ಕೊರೊನಾ ಸಂಕಷ್ಟದಲ್ಲೂ ಸಾಲ ಮರುಪಾವತಿಗೆ ಸೂಚನೆ

(Salary overdraft or credit card which one is best for emergency fund? Here is an analysis about how to fulfil personal finance need?)

ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ