Gold Rate Today: ಬಂಗಾರದ ಬೆಲೆ ನಿನ್ನೆಗಿಂತಲೂ ಇಂದು ಹೆಚ್ಚು; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..
ಇನ್ನು ದೇಶದಲ್ಲಿ ಒಟ್ಟಾರೆ ನೋಡುವುದಾದರೆ ಇಂದು 10 ಗ್ರಾಂ. 22 ಕ್ಯಾರೆಟ್ ಚಿನ್ನದ ದರ 44,810 ರೂ. ಇದೆ. ಹಾಗೇ 100 ಗ್ರಾಂ.ಗೆ 4,48,100 ರೂ.ಆಗಿದೆ. 24 ಕ್ಯಾರೆಟ್ನ 10 ಗ್ರಾಂ. ಚಿನ್ನದ ದರ 45,810 ಆಗಿದ್ದು, ಈ ಬೆಲೆ ನಿನ್ನೆ 45,800 ರೂ. ಇತ್ತು.
ದೇಶದಲ್ಲಿ ಕೊರೊನಾ ಎರಡನೇ ಅಲೆ ಸಿಕ್ಕಾಪಟೆ ಹಾನಿಯನ್ನುಂಟು ಮಾಡುತ್ತಿದೆ. ಮತ್ತೆ ಒಂದೊಂದೇ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಲಾಕ್ಡೌನ್ ಮೊರೆ ಹೋಗುತ್ತಿವೆ. ಈ ಮಧ್ಯೆ ಚಿನ್ನದ ಬೆಲೆಯಲ್ಲೂ ಒಂದೇ ಸಮ ಏರಿಕೆಯಾಗುತ್ತಿದೆ. ಶನಿವಾರ (ಮೇ 8) ಕೂಡ ಬಂಗಾರದ ಬೆಲೆ ಹೆಚ್ಚಾಗಿದ್ದು 10 ಗ್ರಾಂ. 22 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 44,510 ರೂಪಾಯಿಯೇ ಏರಿದೆ. ನಿನ್ನೆ ಬೆಂಗಳೂರಿನಲ್ಲಿ 44,500 ರೂ. ಇತ್ತು. ಇಂದೀಗ 10 ರೂ.ಏರಿಕೆಯಾಗಿದೆ. ಹಾಗೇ ಬೆಂಗಳೂರಿನಲ್ಲಿ 100 ಗ್ರಾಂ. 22 ಕ್ಯಾರೆಟ್ ಚಿನ್ನದ ದರ ನಿನ್ನೆಗಿಂತ 100 ರೂ.ಏರಿಕೆಯಾಗಿದ್ದು 4,45,100 ರೂ. ಆಗಿದೆ. ಇನ್ನು ಬೆಳ್ಳಿ ದರ ನೋಡುವುದಾದರೆ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ 71.50 ರೂ. ಇದೆ. ಹಾಗೇ 10 ಗ್ರಾಂಗೆ 715ರೂ. ಇದ್ದು ನಿನ್ನೆಗಿಂತ 1 ರೂ.ಕಡಿಮೆಯಾಗಿದೆ. ಅಲ್ಲಿಗೆ 1 ಕೆಜಿ ಬೆಳ್ಳಿ ದರ 100 ರೂ.ಕಡಿಮೆಯಾಗಿದ್ದು, 71,500 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? ರಾಜ್ಯ ರಾಜಧಾನಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 10 ರೂ. ಹೆಚ್ಚಾಗಿದ್ದು, 10 ಗ್ರಾಂ.ಗೆ 48,560 ರೂ. ಇದೆ. ನಿನ್ನೆ 48,550 ರೂ. ಇತ್ತು. ಹಾಗೇ ಬೆಂಗಳೂರಿನಲ್ಲಿ 100 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆಗಿಂತ 100 ರೂ. ಹೆಚ್ಚಾಗಿದ್ದು, 4,85,600ಕ್ಕೆ ಏರಿಕೆ ಕಂಡಿದೆ.
ಏಪ್ರಿಲ್ ಮೊದಲವಾರದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತು. ಕೊನೇ ವಾರದಲ್ಲಿ ಒಂದೆರಡು ದಿನ ಇಳಿಕೆಯಾಗಿದ್ದರೂ ಇದೀಗ ಕೆಲವು ದಿನಗಳಿಂದ ಮಮ್ಮೆ ಬಂಗಾರದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೂ ಸಹ ಕಳೆದ ಬಾರಿ ಆಗಸ್ಟ್ನಲ್ಲಿ ಬಂಗಾರದ ಬೆಲೆ 56,000 ರೂ.ಗೆ ಏರಿಕೆಯಾಗಿತ್ತು. ಆ ದರಕ್ಕೆ ಹೋಲಿಸಿದರೆ, ಈಗ ಸುಮಾರು 9000 ರೂ.ಕಡಿಮೆಯೇ ಇದೆ.
ಇನ್ನು ದೇಶದಲ್ಲಿ ಒಟ್ಟಾರೆ ನೋಡುವುದಾದರೆ ಇಂದು 10 ಗ್ರಾಂ. 22 ಕ್ಯಾರೆಟ್ ಚಿನ್ನದ ದರ 44,810 ರೂ. ಇದೆ. ಹಾಗೇ 100 ಗ್ರಾಂ.ಗೆ 4,48,100 ರೂ.ಆಗಿದೆ. 24 ಕ್ಯಾರೆಟ್ನ 10 ಗ್ರಾಂ. ಚಿನ್ನದ ದರ 45,810 ಆಗಿದ್ದು, ಈ ಬೆಲೆ ನಿನ್ನೆ 45,800 ರೂ. ಇತ್ತು. 100 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ 4,58,100 ರೂಪಾಯಿ ಆಗಿದೆ. ಬೆಳ್ಳಿಯ ದರ ಚೆನ್ನೈ, ಹೈದರಾಬಾದ್, ಭುವನೇಶ್ವರ್ ಸೇರಿ ಕೆಲವು ನಗರಗಳಲ್ಲಿ 10 ಗ್ರಾಂ.ಗೆ 761 ರೂ. ಇರುವುದು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲೂ 10 ಗ್ರಾಂ.ಗೆ 715 ರೂಪಾಯಿಯೇ ಇದೆ.
ದೇಶದ ವಿವಿಧ ಮಹಾನಗರಗಳಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ: ನಗರ 22 ಕ್ಯಾರೆಟ್ 24 ಕ್ಯಾರೆಟ್ ಚೆನ್ನೈ 44,980 ರೂ. 49,070 ರೂ. ಮುಂಬೈ 44,810 ರೂ. 45,810 ರೂ. ದೆಹಲಿ 45,920 ರೂ. 49,960 ರೂ. ಕೋಲ್ಕತ್ತ 46,860 ರೂ. 49,650 ರೂ. ಹೈದರಾಬಾದ್ 44,510 ರೂ. 48,560 ರೂ. ಕೇರಳ 44,510 ರೂ. 48,560 ರೂ. ಪುಣೆ 44,810 ರೂ. 45,810 ರೂ. ಅಹ್ಮದಾಬಾದ್ 47,070 ರೂ. 49,070 ರೂ. ಲಖನೌ 45,920 ರೂ. 49,960 ರೂ.
Published On - 10:18 am, Sat, 8 May 21