ಕೋವಿಡ್​ ರೋಗಿಗಳಿಗೆ ಮಾತ್ರ ಇದು ಅನ್ವಯ; ಕೋರ್ಟ್ ​ಸೂಚನೆಯಂತೆ ಹಣ ವರ್ಗಾವಣೆ ತೆರಿಗೆ ನೀತಿಯಲ್ಲಿ ರಿಯಾಯ್ತಿ

ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ, ಚಿಕತ್ಸಾಲಯ, ನರ್ಸಿಂಗ್​ ಹೋಂ, ಕೋವಿಡ್​ ಕೇರ್​ ಸೆಂಟರ್​​ ಅಥವಾ ಅಂತಹುದೇ ಮತ್ಯಾವ ವ್ಯವಸ್ಥೆಯೇ ಆಗಲಿ ರೋಗಿಗಳಿಂದ ಪಡೆಯುವ 2 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ತೆರಿಗೆ ನೀತಿಯಲ್ಲಿ ರಿಯಾಯ್ತಿ ತಂದಿದೆ. Section 269 ST of the Income Tax Act,1961 ಅನುಸಾರ ರಿಯಾಯ್ತಿ ತಂದಿದೆ. ಆದರೆ ಇದು 2021 ಏಪ್ರಿಲ್​ 1 ರಿಂದ ಮೇ 31ರವರೆಗಿನ ಹಣ ವರ್ಗಾವಣೆಗೆ ಮಾತ್ರ ಅನ್ವಯವಾಗುತ್ತದೆ.

ಕೋವಿಡ್​ ರೋಗಿಗಳಿಗೆ ಮಾತ್ರ ಇದು ಅನ್ವಯ; ಕೋರ್ಟ್ ​ಸೂಚನೆಯಂತೆ ಹಣ ವರ್ಗಾವಣೆ ತೆರಿಗೆ ನೀತಿಯಲ್ಲಿ ರಿಯಾಯ್ತಿ
ಕೋರ್ಟ್ ​ಸೂಚನೆಯಂತೆ ಕೋವಿಡ್​ ರೋಗಿಗಳಿಗೆ ಮಾತ್ರ ಇದು ಅನ್ವಯ; ಹಣ ವರ್ಗಾವಣೆಯಲ್ಲಿ ತೆರಿಗೆ ರಿಯಾಯ್ತಿ
Follow us
ಸಾಧು ಶ್ರೀನಾಥ್​
|

Updated on:May 08, 2021 | 10:35 AM

ದೆಹಲಿ: ಕೊರೊನಾ ಕಷ್ಟ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ತುಂಬಾನೇ ದುಬಾರಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನಕ್ಕೆ ಅದು ಗಗನಕುಸುಮ ಆಗಿಬಿಟ್ಟಿದೆ. ಈ ಸಂದರ್ಭದಲ್ಲಿ ಹಣಕಾಸು ವ್ಯವಹಾರವೂ ಕಷ್ಟಕಷ್ಟವಾಗಿದೆ. ಈಗಿರುವ ಆದಾಯ ತೆರಿಗೆ ಕಾನೂನು ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿನ ನಗದು ವರ್ಗಾವಣೆಗೆ ಕಡಿವಾಣವಿದೆ. 2 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತ ವರ್ಗಾಯಿಸಲು ಸಕಲ ತೆರಿಗೆ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಸರಿಯಾಗಿ ಇದೇ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಮಧ್ಯೆ ಪ್ರವೇಶಿಸಿದ್ದು, ಹಣ ವರ್ಗಾವಣೆಗೆ ತೆರಿಗೆ ರಿಯಾಯಿತಿ ತರಬಹುದಾ ನೋಡಿ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೂಚಿಸಿತ್ತು. ಕೋರ್ಟ್ ​ಸೂಚನೆಯ ಮೇರೆಗೆ ಕೋವಿಡ್​ ರೋಗಿಗಳಿಗೆ ಮಾತ್ರ ಅನ್ವಯವಾಗುವಂತೆ ಹಣ ವರ್ಗಾವಣೆಯಲ್ಲಿ ರಿಯಾಯ್ತಿ ನೀಡಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀ ಮಂಡಳಿಯು (Central Board of Direct Taxes) ಶುಕ್ರವಾರ ಗೆಜೆಟ್​ ನೋಟಿಫಿಕೇಶನ್ ಹೊರಡಿಸಿದೆ.

ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ, ಚಿಕತ್ಸಾಲಯ, ನರ್ಸಿಂಗ್​ ಹೋಂ, ಕೋವಿಡ್​ ಕೇರ್​ ಸೆಂಟರ್​​ ಅಥವಾ ಅಂತಹುದೇ ಮತ್ಯಾವ ವ್ಯವಸ್ಥೆಯೇ ಆಗಲಿ ರೋಗಿಗಳಿಂದ ಪಡೆಯುವ 2 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ತೆರಿಗೆ ನೀತಿಯಲ್ಲಿ ರಿಯಾಯ್ತಿ ತಂದಿದೆ. Section 269 ST of the Income Tax Act,1961 ಅನುಸಾರ ರಿಯಾಯ್ತಿ ತಂದಿದೆ. ಆದರೆ ಇದು 2021 ಏಪ್ರಿಲ್​ 1 ರಿಂದ ಮೇ 31ರವರೆಗಿನ ಹಣ ವರ್ಗಾವಣೆಗೆ ಮಾತ್ರ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ನಡೆಯುವ ಹಣಕಾಸು ವರ್ಗಾವಣೆಗಾಗಿ ಪಾವತಿದಾರರ PAN ಅಥವಾ AADHAAR ಸಂಖ್ಯೆಯನ್ನು ತಪ್ಪದೆ ದಾಖಲಿಸಿಕೊಳ್ಳಬೇಕು ಎಂದೂ ಆದೇಶಿಸಿದೆ. ಇದರಿಂದ ಕೋವಿಡ್​ ರೋಗಿಗಳಿಗೆ ಸ್ವಲ್ಪಮಟ್ಟಿಗೆ ತೆರಿಗೆ ಗಜಿಬಿಜಿ ತಪ್ಪಿದ್ದರೆ ಆಸ್ಪತ್ರೆಗಳು ಸಹ ಸುಗಮ ವ್ಯವಹಾರ ನಿಟ್ಟಿನಲ್ಲಿ ನಿರಾಳಗೊಂಡಿವೆ.

ಈ ಬಗ್ಗೆ ಸ್ವತಃ ಆದಾಯ ತೆರಿಗೆ ಇಲಾಖೆಯೂ ಟ್ವೀಟ್​ ಮಾಡಿ, ಮಾಹಿತಿ ನೀಡಿದೆ:

Income tax provisions relaxed Allows Hospitals providing Covid treatment to patients to receive cash payments of Rs 2 lakh or more

ಈ ಬಗ್ಗೆ ಸ್ವತಃ ಆದಾಯ ತೆರಿಗೆ ಇಲಾಖೆಯೂ ಟ್ವೀಟ್​ ಮಾಡಿ, ಮಾಹಿತಿ ನೀಡಿದೆ:

Granting further relief in view of severe Covid pandemic, provisions of section 269ST of Income-tax Act,1961 relaxed by the Central Govt. Allows Hospitals/Medical facilities etc providing Covid treatment to patients to receive cash payments of Rs. 2 lakh or more, adding, Relaxation granted for the period 01.04.2021 to 31.05.2021, after obtaining PAN or AADHAAR of patient & the payer.

(Income tax provisions relaxed Allows Hospitals providing Covid treatment to patients to receive cash payments of Rs 2 lakh or more)

ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್​ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್​ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ

Published On - 10:30 am, Sat, 8 May 21