INS Vikramaditya: ಕಾರವಾರದ ಬಂದರಿನಲ್ಲಿದ್ದ INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಅಲ್ಪ ಪ್ರಮಾಣದ ಬೆಂಕಿ

INS Vikramaditya ಯುದ್ಧ ನೌಕೆಯಲ್ಲಿ ಶನಿವಾರ ಬೆಳಗ್ಗೆ ಅಲ್ಪ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಸಂಭವಿಸಿದ ವೇಳೆಯಲ್ಲಿ ನೌಕೆಯು ಕಾರವಾರ ಬಂದರಿನಲ್ಲಿತ್ತು. ನೌಕೆಯಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

INS Vikramaditya: ಕಾರವಾರದ ಬಂದರಿನಲ್ಲಿದ್ದ INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಅಲ್ಪ ಪ್ರಮಾಣದ ಬೆಂಕಿ
INS ವಿಕ್ರಮಾದಿತ್ಯ (ಸಂಗ್ರಹ ಚಿತ್ರ)
Follow us
Srinivas Mata
|

Updated on:May 08, 2021 | 11:31 AM

ಭಾರತೀಯ ವಿಮಾನಗಳನ್ನು ಹೊತ್ತೊಯ್ಯುವ INS ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನೌಕಾಸೇನೆಯ ವಕ್ತಾರರು ಹೇಳಿದ್ದಾರೆ. ಬೆಂಕಿ ನಂದಿಸಲಾಗಿದ್ದು, ನೌಕೆಯಲ್ಲಿ ಇರುವ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ. ಯುದ್ಧನೌಕೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಇರುವ ಕಡೆ ಹೊಗೆ ಆಡುತ್ತಿದ್ದುದನ್ನು ಕರ್ತವ್ಯನಿರತರಾಗಿದ್ದ ಸಿಬ್ಬಂದಿಯು ಗಮನಿಸಿದ್ದಾರೆ ಎಂದು ತಿಳಿಸಲಾಗಿದೆ. ಬೆಂಕಿ ನಂದಿಸುವುದಕ್ಕಾಗಿ ನೌಕೆಯಲ್ಲಿನ ಕರ್ತವ್ಯನಿರತ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಹಾಕಿದ್ದಾರೆ. ಎಲ್ಲ ಸಿಬ್ಬಂದಿಯೂ ಸುರಕ್ಷಿತವಾಗಿದ್ದು, ಯಾವುದೇ ಪ್ರಮುಖ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ ಎಂಬ ಹೇಳಿಕೆ ನೀಡಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುವುದಕ್ಕೆ ಆದೇಶ ಮಾಡಲಾಗಿದೆ. ಈ ಘಟನೆ ಸಂಭವಿಸಿದ ಸಮಯದಲ್ಲಿ ಯುದ್ಧನೌಕೆಯು ಕರ್ನಾಟಕದ ಕಾರವಾರ ಬಂದರಿನಲ್ಲಿತ್ತು ಎಂದು ತಿಳಿಸಲಾಗಿದೆ.

INS ವಿಕ್ರಮಾದಿತ್ಯ ಎಂಬುದು 284 ಮೀಟರ್ ಉದ್ದದ್ದ ಹಾಗೂ 60 ಮೀಟರ್ ಅಗಲದ ನೌಕೆ. ಅಂದಾಜಿಗೆ ಸರಿಯಾಗಿ ಸಿಗುವಂತೆ ಹೇಳಬೇಕೆಂದರೆ, ಫುಟ್​ಬಾಲ್​ ಆಡುವಂಥ ಮೂರು ಮೈದಾನವನ್ನು ಒಟ್ಟುಗೂಡಿಸಿದರೆ ಅದೆಷ್ಟು ವಿಶಾಲ ಆಗುತ್ತದೋ ಅಷ್ಟು ವಿಶಾಲ ಆಗಿರುವಂಥ ನೌಕೆ ಇದು. ತಳಭಾಗದಿಂದ ಅದರ ಗರಿಷ್ಠ ಪ್ರಮಾಣದ ತುದಿಗೆ 20 ಅಂತಸ್ತು ಎತ್ತರದಲ್ಲಿದೆ. ಈ ನೌಕೆಯಲ್ಲಿ ಒಟ್ಟು 22 ಡೆಕ್​ಗಳಿದ್ದು, 1600ರಷ್ಟು ಸಿಬ್ಬಂದಿಯನ್ನು ಒಯ್ಯುತ್ತದೆ.

ಕೀವ್- ಕ್ಲಾಸ್ ವಿಮಾನ ಹೊತ್ತೊಯ್ಯುವ- ಮಾರ್ಪಾಟು ಮಾಡಲಾದ ಈ ಯುದ್ಧ ನೌಕೆಯನ್ನು ಭಾರತವು ರಷ್ಟಾದಿಂದ 2013ನೇ ಇಸವಿಯಲ್ಲಿ ಖರೀದಿ ಮಾಡಿದೆ. ಆ ನಂತರ ಅದಕ್ಕೆ ಭಾರತದ ಖ್ಯಾತ ಸಾಮ್ರಾಟ ವಿಕ್ರಮಾದಿತ್ಯನ ಹೆಸರನ್ನು ಇಡಲಾಯಿತು. ಇದು ಮೂಲತಃ ಬಾಕುನಲ್ಲಿ ನಿರ್ಮಿಸಲಾಯಿತು ಮತ್ತು 1987ರಲ್ಲಿ ಕಾರ್ಯಾರಂಭ ಮಾಡಿತು. ಈ ನೌಕೆಯು ಸೋವಿಯತ್ (ಸೋವಿಯತ್ ಒಕ್ಕೂಟವನ್ನು ವಿಸರ್ಜಿಸುವವರೆಗೂ) ಮತ್ತು ರಷ್ಯಾದ ನೌಕಾಪಡೆಯಿಂದ ಬಳಕೆ ನಿಲ್ಲಿಸುವ ತನಕ 1996ರವರೆಗೆ ಕಾರ್ಯ ನಿರ್ವಹಿಸಿತು. ಇದರ ಕಾರ್ಯ ನಿರ್ವಹಣೆ ತುಂಬಾ ದುಬಾರಿ.

ಇದನ್ನೂ ಓದಿ: Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

(Minor fire incident in INS Vikramaditya warship on Saturday morning at Karwar harbour)

Published On - 11:27 am, Sat, 8 May 21