Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ 1971ರ ಡಿಸೆಂಬರ್​ 4ರಂದು ದಾಳಿ ನಡೆಸಿತ್ತು.

Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು
ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 04, 2020 | 12:12 PM

ಬಾಂಗ್ಲಾ ವಿಮೋಚನಾ ಯುದ್ಧವೆಂದೇ 1971ರ ಭಾರತ-ಪಾಕ್ ಸಂಘರ್ಷವು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಯುದ್ಧದ ಆರಂಭದ ದಿನಗಳು ನಿಮಗೆ ನೆನಪಿರಬಹುದು. ಡಿಸೆಂಬರ್ 3ರಂದು ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ಅಚಾನಕ್ ದಾಳಿ ನಡೆಸಿದ್ದವು. ಇದಕ್ಕೆ ಉತ್ತರ ನೀಡಲೆಂದು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ಡಿಸೆಂಬರ್​ 4ರಂದು ದಾಳಿ ನಡೆಸಿತು.

ಕಮಾಂಡರ್​ ಬಬ್ರು ಭಾನ್ ಯಾದವ್ ನೇತೃತ್ವದಲ್ಲಿ ಗುಜರಾತ್​ನ ಓಖಾ ಬಂದರಿನಿಂದ ಹೊರಟ ಮೂರು ಯುದ್ಧನೌಕೆಗಳು ಕರಾಚಿ ಬಂದರಿನ ಮೇಲೆ ದಿಗ್ಬಂಧನ ಹೇರುವಲ್ಲಿ ಯಶಸ್ವಿಯಾದವು. ಮಾತ್ರವಲ್ಲ, ಪಾಕಿಸ್ತಾನದ ಹಡಗುಗಳನ್ನು ಮುಳುಗಿಸಿದವು. ಪಾಕಿಸ್ತಾನದ ಯುದ್ಧನೌಕೆಗಳಾದ ಖೈಬರ್, ಮುಹಫಿಜ್ ಮತ್ತು ಎಂವ ವೀನಸ್ ಚಾಲೆಂಜರ್​ಗಳು ಸಮುದ್ರದ ತಳ ಸೇರಿದವು. ಬಂದರಿನಲ್ಲಿದ್ದ ತೈಲ ದಾಸ್ತಾನು ನಾಶಪಡಿಸಲಾಯಿತು. ಪಾಕ್ ನೌಕಾಪಡೆಯ ನೂರಾರು ಯೋಧರು ಹತರಾದರು.

‘ಆಪರೇಷನ್ ಟ್ರಿಡೆಂಟ್’ ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಾರತದ ಪಾಳಯದಲ್ಲಿ ಯಾವುದೇ ಜೀವನಷ್ಟವಾಗಲಿಲ್ಲ. ಯುದ್ಧೋಪಕರಣಗಳಿಗೂ ಹಾನಿಯಾಗಲಿಲ್ಲ ಎನ್ನುವುದು ಉಲ್ಲೇಖನೀಯ ಅಂಶ.

ಭಾರತೀಯ ನೌಕಾಪಡೆ ನಡೆಸಿದ ಈ ಯಶಸ್ವಿ ದಾಳಿಯ ನೆನಪಿನಲ್ಲಿ ಪ್ರತಿವರ್ಷ ಡಿಸೆಂಬರ್​ ತಿಂಗಳ ಮೊದಲ ಶುಕ್ರವಾರವನ್ನು ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತದೆ. ಮುಂಬೈನ ಗೇಟ್​ವೇ ಆಫ್​ ಇಂಡಿಯಾದಲ್ಲಿ ನೌಕಾಪಡೆಯು ಬೀಟಿಂಗ್ ರಿಟ್ರೀಟ್​ ನೀಡುತ್ತದೆ. ದೇಶ ರಕ್ಷಣೆಗೆಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವ ನೌಕಾಪಡೆಯ ಯೋಧರ ಸಮರ್ಪಣಾ ಮನೋಭಾವ, ತ್ಯಾಗ ಮತ್ತು ಬಲಿದಾನವನ್ನು ಈ ದಿನ ನೆನೆಯಲಾಗುತ್ತದೆ.

ಇದನ್ನೂ ಓದಿ: ನೌಕಾಪಡೆಯಲ್ಲಿ ನಾರಿ ಶಕ್ತಿಯ ಪತಾಕೆ: ಯುದ್ಧನೌಕೆಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜನೆ

ನೌಕಾಪಡೆ ದಿನ 2020ರ ಘೋಷವಾಕ್ಯವೇನು? ‘ಯುದ್ಧ ಸನ್ನದ್ಧ, ವಿಶ್ವಾಸಾರ್ಹ ಮತ್ತು ಸಹಬಾಳ್ವೆ’ (Indian Navy Combat Ready, Credible and Cohesive) ಎನ್ನುವುದು ಈ ವರ್ಷದ ಘೋಷವಾಕ್ಯ. ನೌಕಾಪಡೆ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಕರಮ್​ಬೀರ್ ಸಿಂಗ್ ಭಾರತೀಯ ನೌಕಾಪಡೆಯು ಕೋವಿಡ್-19 ಸಂಕಷ್ಟ ಮತ್ತು ಚೀನಾದಿಂದ ಎದುರಾಗಿಸುವ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

ನೌಕಾಪಡೆ ಸಿಬ್ಬಂದಿ, ನೌಕೆಗಳ ಸಂಖ್ಯೆಯೆಷ್ಟು? ಜೂನ್ 2019ರ ಮಾಹಿತಿ ಪ್ರಕಾರ ಭಾರತೀಯ ನೌಕಾಪಡೆಯಲ್ಲಿ 67,252 ಸಕ್ರಿಯ ಮತ್ತು 55,000 ಮೀಸಲು ಸಿಬ್ಬಂದಿ ಇದ್ದಾರೆ. 150 ಹಡಗು-ಸಬ್​ಮರೀನ್​ಗಳು, 300 ವಿಮಾನಗಳಿವೆ.

ಇದನ್ನೂ ಓದಿ: ಗಲ್ವಾನ್​ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆಯ ಯೋಧರು

ಭಾರತಕ್ಕೆ ನೌಕಾಪಡೆಯ ಪ್ರಾಮುಖ್ಯತೆ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಭಾರತ ಉಪಖಂಡದ ರಕ್ಷಣೆಯಲ್ಲಿ ನೌಕಾಪಡೆಯ ಪಾತ್ರ ಹಿರಿದು. ಗಾಲ್ವಾನ್ ಸಂಘರ್ಷದ ನಂತರ ಹಿಂದೂ ಮಹಾಸಾಗರದಲ್ಲಿ ಚೀನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ನೌಕಾಪಡೆ ಹೆಚ್ಚು ಗಮನ ಹರಿಸಿತು. ಚೀನಾ ಸರ್ಕಾರ ಸಂಧಾನದಲ್ಲಿ ಭಾರತದ ಷರತ್ತುಗಳನ್ನು ಪರಿಗಣಿಸುವಂತೆ ಮಾಡುವಲ್ಲಿ ಈ ತಂತ್ರದ ಫಲವೂ ಇದೆ. ಚೀನಾದ ತೈಲ ಸರಬರಾಜಿಗೆ ಅತಿಮುಖ್ಯ ಜಲಮಾರ್ಗವಾದ ಹಿಂದೂ ಮಹಾಸಾಗರ ಮತ್ತು ಮಲಕ್ಕಾ ಜಲಸಂಧಿಯಲ್ಲಿ ತನಗೆ ಪಾರಮ್ಯವಿದೆ ಎಂಬ ಸಂದೇಶವನ್ನು ಹಲವು ಬಾರಿ ಭಾರತೀಯ ನೌಕಾಪಡೆ ನೀಡಿತ್ತು.

ರಕ್ಷಣಾ ಕಾರ್ಯಾಚರಣೆಯಲ್ಲಿಯೂ ಭಾರತೀಯ ನೌಕಾಪಡೆ ಸಕ್ರಿಯಪಾತ್ರ ನಿರ್ವಹಿಸುತ್ತಿದೆ. ಕೋವಿಡ್-19 ಬಿಗಡಾಯಿಸಿದ ಸಂದರ್ಭದಲ್ಲಿ ಹಲವು ದೇಶಗಳಿಂದ ಭಾರತೀಯರನ್ನು ಕರೆತರಲು ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆ ನಡೆಸಿತ್ತು. ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಕೋಪಗಳಲ್ಲಿಯೂ ನೌಕಾಪಡೆ ಜನರ ರಕ್ಷಣೆಗೆ ಧಾವಿಸುತ್ತಿದೆ.

ಇದನ್ನೂ ಓದಿ: ಜಲಮಾರ್ಗದಿಂದ ನುಸುಳಲು ಪಾಕ್ ಯತ್ನ; ನೌಕಾಪಡೆ ಹೈಅಲರ್ಟ್

ನೌಕಾಪಡೆ ಸಿಬ್ಬಂದಿಗೆ ಶುಭ ಕೋರಿದ ಮೋದಿ

ನೌಕಾಪಡೆ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೌಕಾಪಡೆ ಸಿಬ್ಬಂದಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

‘ನೌಕಾಪಡೆಯ ಎಲ್ಲ ಸಿಬ್ಬಂದಿ, ಅವರ ಕುಟುಂಬಗಳಿಗೆ ಈ ದಿನದಂದು ಶುಭ ಕೋರುತ್ತೇನೆ. ದೇಶದ ಸಾಗರ ಗಡಿಗಳನ್ನು ನೌಕಾಪಡೆ ನಿರ್ಭಯವಾಗಿ ರಕ್ಷಿಸುತ್ತಿದೆ. ಅಗತ್ಯಬಿದ್ದಾಗ ಮಾನವೀಯ ನೆಲೆಗಟ್ಟಿನಲ್ಲಿ ನೆರವಾಗುತ್ತಿದೆ. ಶತಮಾನಗಳಿಂದಲೂ ಚಾಲ್ತಿಯಲ್ಲಿರುವ ನೌಕಾಪಡೆಯ ಶ್ರೀಮಂತ ಪರಂಪರೆಯನ್ನು ನಾವು ಸ್ಮರಿಸುತ್ತೇವೆ’ ಎಂದು ಮೋದಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ