Petrol Diesel Rate Today: ಭೋಪಾಲ್​ನಲ್ಲಿ 100ರ ಗಡಿ ದಾಟಿದ ಪೆಟ್ರೋಲ್​ ದರ; ಕರ್ನಾಟಕದಲ್ಲಿ ತೈಲ ಬೆಲೆ ಎಷ್ಟಿದೆ ತಿಳಿಯಿರಿ

Petrol Diesel Price Today: ಇಂದು ಬುಧವಾರ ಪೆಟ್ರೋಲ್​, ಡೀಸೆಲ್​ ದರದಲ್ಲಿ ಏರಿಕೆಯಾಗಿದೆ. ನಿಮ್ಮ ಊರಿನಲ್ಲಿ ತೈಲ ದರ ಎಷ್ಟಿದೆ ಎಂಬದ ಮಾಹಿತಿ ಇಲ್ಲಿದೆ ಪರಿಶೀಲಿಸಿ.

Petrol Diesel Rate Today: ಭೋಪಾಲ್​ನಲ್ಲಿ 100ರ ಗಡಿ ದಾಟಿದ ಪೆಟ್ರೋಲ್​ ದರ; ಕರ್ನಾಟಕದಲ್ಲಿ ತೈಲ ಬೆಲೆ ಎಷ್ಟಿದೆ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
|

Updated on:May 12, 2021 | 9:24 AM

ದೆಹಲಿ: ಸರ್ಕಾರಿ ತೈಲ ಕಂಪನಿಗಳು ಇಂದು ಬುಧವಾರ (ಮೇ12) ಪೆಟ್ರೋಲ್​, ಡೀಸೆಲ್​ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಲೀಟರ್​ ಪೆಟ್ರೋಲ್​ ದರ 22ರಿಂದ 25 ಪೈಸೆಗೆ ಏರಿದ್ದರೆ, ಪ್ರತಿ ಲೀಟರ್​ ಡೀಸೆಲ್​ ದರ 24 ರಿಂದ 27 ಪೈಸೆಗೆ ಏರಿಕೆಯಾಗಿದೆ. ದರ ಏರಿಕೆಯ ನಂತರದಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.05 ರೂ. ಆಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 82.61 ರೂ. ಆಗಿದೆ. ದರ ಹೆಚ್ಚಳದಿಂದ ಭೋಪಾಲ್​ನಲ್ಲಿ ಪೆಟ್ರೋಲ್​ ದರ 100 ರೂಪಾಯಿ ಗಡಿ ದಾಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 95.11 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 87.57 ರೂಪಾಯಿ ಆಗಿದೆ.

ಕಳೆದ ಶುಕ್ರವಾರ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.27 ರೂ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 81.73 ರೂ. ಇತ್ತು. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 97.61 ಇತ್ತು. ಮತ್ತು ಒಂದು ಲೀಟರ್​ ಡೀಸೆಲ್​ ದರ 88.82 ರೂ. ಇತ್ತು. ಆ ನಂತರ ನಿನ್ನೆ ಮಂಗಳವಾರ ಕೂಡಾ ತೈಲ ದರ ಏರಿಕೆಯಾಗಿದ್ದು. ಇಂದು ಬುಧವಾರವೂ ಬೆಲೆಯಲ್ಲಿ ಹೆಚ್ಚಳವಾಗಿದೆ.

ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಮಾಹಿತಿ ನಗರ         ಪೆಟ್ರೋಲ್​(ಪ್ರತಿ ಲೀಟರ್​ಗೆ)         ಡೀಸೆಲ್​(ಪ್ರತಿ ಲೀಟರ್​ಗೆ) ದೆಹಲಿ          92.05                                            82.61 ಮುಂಬೈ      98.35                                            89.75 ಕೋಲ್ಕತ್ತಾ   92.16                                            85.45 ಚೆನ್ನೈ          93.84                                            87.49

ಪಂಚ ರಾಜ್ಯಗಳ ಚುನಾವಣೆ ಎದುರಿಗಿದ್ದಾಗ ತೈಲ ಕಂಪನಿಗಳು ದರ ಹೆಚ್ಚಳ ಮಾಡಿರಲಿಲ್ಲ. ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿದೆ. ಕಳೆದ ವಾರದ ಮಂಗಳವಾರ ಸರ್ಕಾರಿ ತೈಲ ಕಂಪನಿಗಳು ಬೆಲೆ ಹೆಚ್ಚಿಸಲು ಪ್ರಾರಂಭಿಸಿದವು. ಹಾಗೆಯೇ ಮುಂದುವರೆಯುತ್ತಾ ಇಂದೂ ಕೂಡಾ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಳವಾಗಿದೆ.

ಇಂದಿನ ತೈಲ ದರ ಏರಿಕೆಯಿಂದಾಗಿ ಭೋಪಾಲ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಭೋಪಾಲ್​ನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 100.08 ರೂಪಾಯಿಗೆ ಏರಿಕೆಯಾಗಿದ್ದು ಗರಿಷ್ಠ ಮಟ್ಟ ತಲುಪಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 90.95 ರೂಪಾಯಿಗೆ ಹೆಚ್ಚಿಸಲಾಗಿದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

ಇದನ್ನೂ ಓದಿ: Petrol Diesel Rate Today: ದೆಹಲಿಯಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್, ಡೀಸೆಲ್ ಬೆಲೆ; ನಿಮ್ಮೂರಿನಲ್ಲಿ ತೈಲ ದರ ಎಷ್ಟಿದೆ?

Published On - 8:49 am, Wed, 12 May 21

ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ