AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕಾಂಶಯುಕ್ತ ಆಹಾರ ಜತೆಗೆ ನೀರಿನ ಪ್ರೋಟೀನ್ ಕೂಡ ಅಗತ್ಯ ಯಾಕೆ? ಇಲ್ಲಿದೆ ತಜ್ಞರ ಸಲಹೆ

ಪ್ರೊಟೀನ್ ಆಹಾರವು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಏಕೆಂದರೆ ದೇಹವು ಯೂರಿಯಾದಂತಹ ಹೆಚ್ಚಿನ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ಹೊರ ಹಾಕುತ್ತದೆ. ಇದು ಮೂತ್ರಪಿಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ಸಮರ್ಪಕವಾಗಿ ಹೈಡ್ರೇಟ್ ಮಾಡುವುದು ಹೆಚ್ಚು ಮುಖ್ಯವಾಗುತ್ತದೆ. ಇದರ ಜತೆಗೆ ನೀರು ಸೇವನೆ ಮಾಡಿದ್ರು ನಿಮ್ಮ ದೇಹಕ್ಕೆ ಹೆಚ್ಚಿನ ಪ್ರೋಟೀನ್ ನೀಡುತ್ತದೆ. ಈ ನೀರಿನ ಪ್ರೋಟೀನ್​​ನಿಂದ ಯಾವೆಲ್ಲ ಲಾಭಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಪೋಷಕಾಂಶಯುಕ್ತ ಆಹಾರ ಜತೆಗೆ ನೀರಿನ ಪ್ರೋಟೀನ್ ಕೂಡ ಅಗತ್ಯ ಯಾಕೆ? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 01, 2025 | 5:58 PM

Share

ನೀರು ನಮ್ಮ ದೇಹಕ್ಕೆ ತುಂಬಾ ಮುಖ್ಯವಾಗಿರುವುದು, ನೀರಿಲ್ಲದೆ ಯಾವುದು ನಡೆಯುವುದಿಲ್ಲ. ನೀರು ನಮ್ಮ ಉಳಿವಿಗೆ ಅತ್ಯಗತ್ಯ ಕೂಡ ಹೌದು. ಇದು ನಮ್ಮನ್ನು ಹೈಡ್ರೀಕರಿಸುತ್ತದೆ, ನಮ್ಮ ದೈಹಿಕ ಕಾರ್ಯಗಳನ್ನು ಬೆಂಬಲಿಸುತ್ತದೆ. ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ದಿನವಿಡೀ ಸಾಕಷ್ಟು ನೀರು ಕುಡಿದರು, ಅದು ನಮ್ಮ ದೇಹದಲ್ಲಿ ಹೇಗೆಲ್ಲ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತದೆ. ಪೌಷ್ಟಿಕತಜ್ಞ ಅಮಿತಾ ಗಾದ್ರೆ ಅವರು ಈ ಬಗ್ಗೆ ಏನ್ ಹೇಳಿದ್ದಾರೆ ನೋಡಿ. ನೀವು ಹೆಚ್ಚು ಪ್ರೋಟೀನ್ ತಿನ್ನುವಾಗ ಹೈಡ್ರೀಕರಿಸಿರುವುದು ಏಕೆ ಹೆಚ್ಚು ಮುಖ್ಯ ಎಂಬ ಬಗ್ಗೆ ಅವರು ಹೇಳಿದ್ದಾರೆ. ಪ್ರೋಟೀನ್ ಸೇವನೆಯನ್ನು ಹೆಚ್ಚಿಸುತ್ತಿದ್ದರೆ, ನೀವು ಹೆಚ್ಚು ನೀರು ಕುಡಿಯಬೇಕೇ? ಇದಕ್ಕೆ ಅಮಿತಾ ಗಾದ್ರೆ ಅವರ ಉತ್ತರ ಹೌದು.

ಹೆಚ್ಚಿನ ಪ್ರೊಟೀನ್ ಆಹಾರವು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಏಕೆಂದರೆ ದೇಹವು ಯೂರಿಯಾದಂತಹ ಹೆಚ್ಚಿನ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ಹೊರ ಹಾಕುತ್ತದೆ. ಇದು ಮೂತ್ರಪಿಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ಸಮರ್ಪಕವಾಗಿ ಹೈಡ್ರೇಟ್ ಮಾಡುವುದು ಹೆಚ್ಚು ಮುಖ್ಯವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗೂ ಉತ್ತಮ. ಊಟದಲ್ಲಿ 25 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ಸೇವಿಸಿದರೆ, ನಿಮ್ಮ ದೇಹವು ಅದನ್ನು ಒಮ್ಮೆ ಜೀರ್ಣಿಸಿಕೊಳ್ಳಲು ಹೆಣಗಾಡಬಹುದು. ಪ್ರೋಟೀನ್ ಸೇವನೆಯನ್ನು ಕ್ರಮೇಣ ಹೆಚ್ಚಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಮಯವನ್ನು ನೀಡುತ್ತೀರಿ. ಆಗಾ ನಿಮ್ಮ ಜೀರ್ಣಾಂಗ ನೀರಿನ ಸೇವನೆ ಹೆಚ್ಚಿಸುವ ಅಗತ್ಯವಿದೆ ಎಂದರ್ಥ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಣತ್ವಚೆಯಿಂದ ಮೇಕಪ್ ಪರ್ಫೆಕ್ಟ್ ಆಗಿ ಬರ್ತಿಲ್ವಾ? ಹಾಗಾದ್ರೆ ಫೌಂಡೇಶನ್ ಹೀಗೆ ಹಚ್ಚಿಸಿ

ಹೆಚ್ಚಿನ ಪ್ರೋಟೀನ್ ಆಹಾರ ನೀಡಿದರೆ, ಅದರಷ್ಟೇ ನೀರು ಕೂಡ ನೀಡುತ್ತದೆ. ಸ್ನಾಯುಗಳ ಬೆಳವಣಿಗೆಯನ್ನು ಉತ್ತೇಜಿಸಲು ಹೈಡ್ರೀಕರಿಸಿರುವುದು ಅತ್ಯಗತ್ಯ. ನಿರ್ಜಲೀಕರಣವು ಸ್ನಾಯು ಸೆಳೆತ, ಆಯಾಸಕ್ಕೆ ಕಾರಣವಾಗಬಹುದು ಮತ್ತು ಸ್ನಾಯು ಪ್ರೋಟೀನ್ಗೂ ಅಡ್ಡಿಯಾಗಬಹುದು. ಆದ್ದರಿಂದ ನಿಮ್ಮ ಆಹಾರದ ಜತೆಗೆ ನೀರಿನ ಸೇವನೆ ಕೂಡ ಮುಖ್ಯವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ