AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

OYO ಸಿಬ್ಬಂದಿಗೆ ವಾರದಲ್ಲಿ 4 ದಿನ ಕೆಲಸ, ಬೇಕೆಂದಾಗ ಬೇಕಾದಷ್ಟು ಸಂಬಳ ಸಹಿತ ರಜಾ ಘೋಷಣೆ

OYO ಕಂಪೆನಿ ಸಿಬ್ಬಂದಿಗೆ ವಾರದಲ್ಲಿ ನಾಲ್ಕು ದಿನದ ಕೆಲಸ, ಬೇಕೆಂದಾಗ ಬೇಕಾದಷ್ಟು ದಿನ ಸಂಬಳ ಸಹಿತ ರಜಾ ತೆಗೆದುಕೊಳ್ಳಬಹುದು ಎಂದು ಘೋಷಣೆ ಮಾಡಲಾಗಿದೆ.

OYO ಸಿಬ್ಬಂದಿಗೆ ವಾರದಲ್ಲಿ 4 ದಿನ ಕೆಲಸ, ಬೇಕೆಂದಾಗ ಬೇಕಾದಷ್ಟು ಸಂಬಳ ಸಹಿತ ರಜಾ ಘೋಷಣೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 12, 2021 | 9:15 PM

Share

ಹಾಸ್ಪಿಟಾಲಿಟಿ (ಆತಿಥ್ಯ) ಕಂಪೆನಿಯಾದ ಓಯೋ ಬುಧವಾರದಂದು ತನ್ನ ಸಿಬ್ಬಂದಿಗಾಗಿ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಸಿಬ್ಬಂದಿಯ ಒತ್ತಡವನ್ನು ಕಡಿಮೆ ಮಾಡಬೇಕು ಎಂಬ ಗುರಿಯೊಂದಿಗೆ ಈ ಕ್ರಮಗಳನ್ನು ಘೋಷಿಸಲಾಗಿದೆ. ಸ್ಟಾರ್ಟ್​ ಅಪ್ ಕಂಪೆನಿಯಾದ ಓಯೋದಿಂದ ವಾರಕ್ಕೆ ನಾಲ್ಕು ದಿನ ಕೆಲಸ ಮತ್ತು ಬೇಕೆನಿಸಿದಾಗ ಅನಿರ್ದಿಷ್ಟಾವಧಿಯ ಸಂಬಳಸಹಿತ ರಜಾವನ್ನು ನೀಡುವುದಕ್ಕೆ ನಿರ್ಧರಿಸಲಾಗಿದೆ. OYO ಸಿಇಒ ರಿತೇಶ್ ಅಗರ್​ವಾಲ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿರುವಂತೆ, ಇಂದಿನಿಂದ ಆರಂಭವಾಗಿ ನಾವು ವಾರದಲ್ಲಿ ನಾಲ್ಕು ದಿನ ಕೆಲಸವನ್ನು ಜಾರಿಗೆ ತರುತ್ತಿದ್ದೇವೆ. ಆದರೆ ಇದನ್ನು ಸ್ವಲ್ಪ ಭಿನ್ನವಾಗಿ ಜಾರಿಗೆ ತರುತ್ತೇವೆ. ಬುಧವಾರವನ್ನು ರಜಾ ಎಂದು ತಂದು, ವಾರದ ಮಧ್ಯ ಭಾಗದಲ್ಲಿ ನಿರಾಳವಾಗುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ.

ಇದೇ ವೇಳೆ, No Questions Asked Flexible Infinite Paid Leaves- ಯಾವುದೇ ಪ್ರಶ್ನೆ ಕೇಳದೆ ಆರಾಮದಾಯಕ ಅನಿರ್ದಿಷ್ಟಾವಧಿ ಸಂಬಳಸಹಿತ ರಜಾವನ್ನು ಜಾರಿಗೆ ತರಲಿದ್ದೇವೆ ಎಂದು ಕೂಡ ಹೇಳಿದ್ದಾರೆ. ಕೊರೊನಾ ವೈರಸ್ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಮುಂದುವರಿಸಿದೆ. ಒಂದು ವಿಷಯ ಬಹಳ ಮುಖ್ಯ ಏನೆಂದರೆ, ನಮಗೆ ಹಾಗೂ ನಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದಿದ್ದಾರೆ. ಯಾವಾಗ ರಜಾ ಬೇಕು ಆಗ ತೆಗೆದುಕೊಳ್ಳಿ ಎಂದು ಓಯೋದಿಂದ ಸಿಬ್ಬಂದಿಗೆ ಹೇಳಲಾಗಿದೆ. ಅದನ್ನು ದಾಖಲಿಸಬೇಕು ಅಂತೇನಿಲ್ಲ. ನಿಮ್ಮ ಮ್ಯಾನೇಜರ್​ಗೆ ತಿಳಿಸಿ, ಕಾರಣ ಬೇಕಾಗಿಲ್ಲ, ಯಾರೂ ಕೇಳುವುದಿಲ್ಲ ಎಂದು ತಿಳಿಸಲಾಗಿದೆ.

ಇನ್ನೂ ಮುಂದುವರಿದು ಅಗರ್​​ವಾಲ್, ವೈಯಕ್ತಿಕವಾಗಿ ನಾನು ಈ ದಿನ ಕೆಲಸ ಮಾಡಬಾರದು ಅಂದುಕೊಂಡಿದ್ದೀನಿ. ನನ್ನ ಕುಟುಂಬದ ಜತೆಗೆ ಹೆಚ್ಚು ಸಮಯ ಕಳೆಯಬೇಕು ಅಂದುಕೊಂಡಿದ್ದೀನಿ. ಓಯೋ ಕೋವಿಡ್​ ವಾರ್​ ರೂಮ್​ನಲ್ಲಿ ಭಾಗವಹಿಸಿ, ಯಾವ ಸ್ನೇಹಿತರು, ಸಹೋದ್ಯೋಗಿಗಳ ಕುಟುಂಬಗಳು ಕೋವಿಡ್​ನಿಂದಾಗಿ ಕಳೆದ ಕೆಲವು ವಾರಗಳಲ್ಲಿ ಗಂಭೀರವಾದ ಪರಿಣಾಮಗಳನ್ನು ಎದುರಿಸಿವೆಯೋ ಅವರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ

(OYO announced 4 days work, flexible indefinite paid leave announced on Wednesday)

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ