Health Tips: ಅನಾರೋಗ್ಯಕರ ಆಹಾರವು ಯಕೃತ್ತಿನಲ್ಲಿ ವಿಷವನ್ನು ಸಂಗ್ರಹಿಸಬಹುದು; ಈ ಆಹಾರಗಳನ್ನು ತ್ಯಜಿಸಿ

| Updated By: Rakesh Nayak Manchi

Updated on: Aug 22, 2022 | 6:30 AM

ಅನಾರೋಗ್ಯಕರ ಆಹಾರವು ಯಕೃತ್ತಿನಲ್ಲಿ ವಿಷವನ್ನು ಸಂಗ್ರಹಿಸಲು ಕಾರಣವಾಗಬಹುದು. ಈ ಕಾರಣದಿಂದಾಗಿ ದೇಹದಲ್ಲಿನ ಚಯಾಪಚಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

Health Tips: ಅನಾರೋಗ್ಯಕರ ಆಹಾರವು ಯಕೃತ್ತಿನಲ್ಲಿ ವಿಷವನ್ನು ಸಂಗ್ರಹಿಸಬಹುದು; ಈ ಆಹಾರಗಳನ್ನು ತ್ಯಜಿಸಿ
ಸಾಂಕೇತಿಕ ಚಿತ್ರ
Follow us on

ಮಾನವ ದೇಹದ ಎಲ್ಲಾ ಅಂಗಗಳನ್ನು ಬಹಳ ಎಚ್ಚರಿಕೆಯಿಂದ ಸಂರಕ್ಷಿಸುವುದು ಮುಖ್ಯವಾಗಿದೆ. ಅಂತಹ ಅಂಗಗಳಲ್ಲಿ ಬಹಳ ಮುಖ್ಯವಾಗಿ ಪಾತ್ರವಹಿಸುವ ಯಕೃತ್ತು ಕೂಡ ಒಂದು. ಅನಾರೋಗ್ಯಕರ ಆಹಾರವು ಯಕೃತ್ತಿನಲ್ಲಿ ವಿಷವನ್ನು ಸಂಗ್ರಹಿಸಲು ಕಾರಣವಾಗಬಹುದು. ಈ ಕಾರಣದಿಂದಾಗಿ ದೇಹದಲ್ಲಿನ ಚಯಾಪಚಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಪರಿಣಾಮವಾಗಿ ದೇಹದಲ್ಲಿ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಯಕೃತ್ತಿನ ಆರೋಗ್ಯ ಕೆಡಿಸುವ ಕೆಲವು ಆಹಾರಗಳನ್ನು ತಪ್ಪಿಸುವುದು ಬಹಳ ಮುಖ್ಯವಾಗಿದೆ. ಹಾಗಿದ್ದರೆ ಲಿವರ್ ಅನ್ನು ಹಾಳು ಮಾಡುವ ಆಹಾರಗಳು ಯಾವುವು? ಲಿವರ್​ನ ಆರೋಗ್ಯ ಕಾಪಾಡಲು ಯಾವುದನ್ನು ತ್ಯಜಿಸಬೇಕು? ಎಂಬುದನ್ನು ಈ ಸುದ್ದಿ ಮೂಲಕ ತಿಳಿಯಿರಿ.

  1. ಮದ್ಯಪಾನ: ಬಹಳಷ್ಟು ಜನರು ಮದ್ಯಪಾನ ಮಾಡುತ್ತಾರೆ. ಅತಿಯಾದ ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ. ಆಲ್ಕೋಹಾಲ್ ಉರಿಯೂತ, ಜೀವಕೋಶದ ಸಾವು ಮತ್ತು ಫೈಬ್ರೋಸಿಸ್​ಗೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ ಲಿವರ್ ಸಿರೋಸಿಸ್ ಸಹ ಸಂಭವಿಸಬಹುದು.
  2. ಸಕ್ಕರೆ: ಹೆಚ್ಚು ಸಕ್ಕರೆ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಬೊಜ್ಜು ಹೆಚ್ಚಾಗುವುದರೊಂದಿಗೆ ಮಧುಮೇಹದ ಅಪಾಯವೂ ಹೆಚ್ಚಾಗಬಹುದು. ಹೆಚ್ಚು ಸಕ್ಕರೆಯು ಯಕೃತ್ತನ್ನು ಸಹ ಹಾನಿಗೊಳಿಸುತ್ತದೆ. ಹಾಗಾಗಿ ಸಕ್ಕರೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
  3. ಕೆಂಪು ಮಾಂಸ: ಅನೇಕ ಜನರು ಮಾಂಸವನ್ನು ಸೇವಿಸುತ್ತಾರೆ. ಬಿಳಿ ಮಾಂಸಗಳಾದ ಕೋಳಿ ಮತ್ತು ಮೀನು ಸೇವಿಸಬಹುದು. ಆದರೆ ಕೆಂಪು ಮಾಂಸವನ್ನು ಸೇವಿಸುವುದು ಯಕೃತ್ತಿಗೆ ಹಾನಿಯಾಗಬಹುದು. ಏಕೆಂದರೆ ಅದನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ.
  4. ಫಾಸ್ಟ್ ಫುಡ್: ಅನೇಕ ಜನರಿಗೆ ಫಾಸ್ಟ್ ಫುಡ್ ಬಲು ಇಷ್ಟ, ಬರ್ಗರ್, ಸ್ಯಾಂಡ್‌ವಿಚ್, ಪಿಜ್ಜಾ, ಫ್ರೆಂಚ್ ಫ್ರೈಸ್ ಬಾಯಲ್ಲಿ ನೀರೂರಿಸುತ್ತದೆ. ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಯಕೃತ್ತನ್ನು ಹಾನಿಗೊಳಿಸುತ್ತವೆ.
  5. ಮೈದಾ ಹಿಟ್ಟು: ಮೈದಾ ಹಿಟ್ಟನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಹೀಗಾಗಿ ಇದರ ಹೆಚ್ಚಿನ ಸೇವನೆಯು ಲಿವರ್ ಮೇಲೆ ಪರಿಣಾಮ ಬೀರುತ್ತದೆ. ಇದು ಖನಿಜಗಳು, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ