
ಭಾರತೀಯರ ಆಹಾರದಲ್ಲಿ ಅನ್ನಕ್ಕೆ ಪ್ರಮುಖ ಸ್ಥಾನವಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಮನೆಗಳಲ್ಲಿ ಪ್ರತಿದಿನ ಬಿಳಿ ಅಕ್ಕಿ ಅಂದರೆ ವೈಟ್ ರೈಸ್ ಸೇವಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಈ ವೈಟ್ ರೈಸ್ ಅಕ್ಕಿ ತಿಂದರೆ ದಪ್ಪಗಾಗುತ್ತಾರೆ ಎಂದು ತಿಳಿದು ಅನ್ನ ಸೇವನೆ ಮಾಡುವುದನ್ನೇ ಸಂಪೂರ್ಣವಾಗಿ ಬಿಡುತ್ತಿದ್ದಾರೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ, ಕೇವಲ ವೈಟ್ ರೈಸ್ ತಿನ್ನುವುದರಿಂದ ತೂಕ ಹೆಚ್ಚುವುದಿಲ್ಲ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ದೀರ್ಘಕಾಲ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ತೂಕ ಹೆಚ್ಚಲು ಒಂದೇ ಒಂದು ಆಹಾರ ಕಾರಣವಲ್ಲ; ಒಟ್ಟಾರೆ ಆಹಾರ ಪದ್ಧತಿ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆ ಪ್ರಮುಖ ಪಾತ್ರ ವಹಿಸುತ್ತವೆ.
ಡಯಟಿಷಿಯನ್‌ಗಳ ಪ್ರಕಾರ, ಬಿಳಿ ಅಕ್ಕಿ ಅಥವಾ ವೈಟ್ ರೈಸ್ ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದೆ. ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿ ಒದಗಿಸುವ ಪ್ರಮುಖ ಪೋಷಕಾಂಶವಾಗಿದೆ. ಹೌದು, ಬ್ರೌನ್ ರೈಸ್‌ಗಿಂತ ವೈಟ್ ರೈಸ್ ಫೈಬರ್ ಪ್ರಮಾಣ ಕಡಿಮೆ ಇರುತ್ತದೆ. ಕಾರಣ, ಅಕ್ಕಿಯನ್ನು ಹೆಚ್ಚು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಹೊರಪದರ ತೆಗೆದುಹಾಕಲಾಗುತ್ತದೆ. ಹಾಗಾಗಿ ಇದರ ಸೇವನೆ ಹೊಟ್ಟೆ ಬೇಗ ಖಾಲಿಯಾಗುವ ಅನುಭವವಾಗಬಹುದು ಹೊರತು ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿಕಾರಕವಲ್ಲ.
ಕೆಲವು ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಟ್ ರೈಸ್ ಸೇವಿಸುವುದು ಮತ್ತು ತೂಕ ಹೆಚ್ಚಾಗುವುದು ನಡುವೆ ಸಂಬಂಧ ಕಂಡುಬಂದಿದೆ. ಆದರೆ ಹಲವು ಸಂಶೋಧನೆಗಳಲ್ಲಿ ಅಂತಹ ಸ್ಪಷ್ಟ ಸಂಬಂಧ ಕಂಡುಬಂದಿಲ್ಲ. ಹೀಗಾಗಿ, ತೂಕ ಹೆಚ್ಚಲು ಕೇವಲ ಬಿಳಿ ಅಕ್ಕಿಯೇ ಕಾರಣ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಇದನ್ನೂ ಓದಿ: ಐಸ್‌ಕ್ರೀಮ್ ತಿಂದ ಬಳಿಕ ವೈದ್ಯರು ಹೇಳುವ 5 ಆರೋಗ್ಯ ಸಲಹೆಗಳನ್ನು ತಪ್ಪದೆ ಪಾಲಿಸಿ
ಎಣ್ಣೆಯಲ್ಲಿ ಫ್ರೈ ಮಾಡಿದ ರೈಸ್ ಅಥವಾ ಹೆಚ್ಚು ತುಪ್ಪ, ಬೆಣ್ಣೆ ಸೇರಿಸಿದ ಅನ್ನಕ್ಕಿಂತ ಸರಳವಾಗಿ ಬೇಯಿಸಿದ ಅನ್ನ ಉತ್ತಮ. ತುಂಬಾ ಎಣ್ಣೆ, ತುಪ್ಪ ಅಥವಾ ಹೆಚ್ಚು ಕ್ಯಾಲೊರಿ ಇರುವ ಪಲಾವ್, ಬಿರಿಯಾನಿಗಳನ್ನು ಆಗಾಗ ಸೇವಿಸಿದರೆ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.
ಗಮನಿಸಿ: ಬಿಳಿ ಅಕ್ಕಿಯನ್ನು ಸಂಪೂರ್ಣವಾಗಿ ಬಿಡುವುದರಿಂದ ಮಾತ್ರ ತೂಕ ಇಳಿಯುವುದಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಮಿತ ಪ್ರಮಾಣದ ಆಹಾರ ಸೇವನೆಯೇ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಪ್ರಮುಖ ಮಾರ್ಗಗಳಾಗಿವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ