AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ?

ನಮ್ಮಲ್ಲಿ ಅನೇಕರಿಗೆ ಊಟದಲ್ಲಿ ಅನ್ನವಿಲ್ಲದೆ ಒಂದು ತುತ್ತು ಕೂಡ ಗಂಟಲಿನಲ್ಲಿ ಇಳಿಯುವುದಿಲ್ಲ. ಅನ್ನವಿಲ್ಲದ ಊಟ ಅಪೂರ್ಣವೆನಿಸುತ್ತದೆ. ಆದರೆ ಕೆಲವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅನ್ನ ಸೇವನೆ ಮಾಡುವುದನ್ನೇ ನಿಲ್ಲಿಸುತ್ತಾರೆ. ಹಾಗಾದರೆ ಅನ್ನ ಬಿಟ್ಟರೆ ಆರೋಗ್ಯ ಸುಧಾರಿಸುತ್ತಾ? ಇದರಿಂದ ಪ್ರಯೋಜನವಿದೆಯೇ ಎಂಬ ಅನುಮಾನ ಹಲವರನ್ನು ಕಾಡಬಹುದು. ಅದರಲ್ಲಿಯೂ ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ?
No Rice Challenge
ಪ್ರೀತಿ ಭಟ್​, ಗುಣವಂತೆ
|

Updated on: Oct 29, 2025 | 5:45 PM

Share

ನಮ್ಮಲ್ಲಿ ಅನೇಕರಿಗೆ ಅನ್ನ (Rice) ಸೇವನೆ ಮಾಡದೆ ಒಂದು ದಿನವನ್ನೂ ಕಳೆಯಲು ಸಾಧ್ಯವೇ ಇಲ್ಲ. ಮೂರು ಹೊತ್ತು ಅನ್ನ ಕೊಟ್ಟರು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಎಷ್ಟೇ ಮೃಷ್ಟಾನ್ನ ಭೋಜನ ಮುಂದೆ ಇಟ್ಟರೂ ಕೂಡ ಅನ್ನವಿಲ್ಲದೆ ಊಟ ಅಪೂರ್ಣವೆಂದು ಪರಿಗಣಿಸುತ್ತಾರೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಅನೇಕರು ಅನ್ನ ಸೇವನೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ, ಹೌದು ಕೆಲವರು ಒಂದು ಹೊತ್ತು ಮಾತ್ರ ಅನ್ನ ಸೇವನೆ ಮಾಡುತ್ತಾರೆ, ಇನ್ನು ಕೆಲವರು ಅನ್ನವನ್ನು ಮುಟ್ಟು ಕೂಡ ನೋಡುವುದಿಲ್ಲ. ಹಾಗಾದರೆ ಅನ್ನ ಬಿಟ್ಟರೆ ಆರೋಗ್ಯ ಸುಧಾರಿಸುತ್ತಾ, ಇದರಿಂದ ಪ್ರಯೋಜನವಿದೆಯೇ ಎಂಬ ಅನುಮಾನ ಹಲವರನ್ನು ಕಾಡಬಹುದು. ಅದರಲ್ಲಿಯೂ ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ನಿಮ್ಮ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಸಿವು, ಕಿರಿಕಿರಿ:

ಅನ್ನವು ನಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ನೀವು ಇದ್ದಕ್ಕಿದ್ದಂತೆ ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ, ನಿಮ್ಮ ದೇಹವು ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಕೆಲವು ದಿನಗಳಲ್ಲಿ, ಹಸಿವು ಹೆಚ್ಚಾಗುವುದು, ದುರ್ಬಲತೆ ಅಥವಾ ಸ್ವಲ್ಪ ಕಿರಿಕಿರಿ ಅನುಭವಕ್ಕೆ ಬರಬಹುದು ಆದ್ದರಿಂದ, ಅನ್ನದ ಬದಲಿಗೆ ರಾಗಿ, ಬಾರ್ಲಿ, ಕ್ವಿನೋವಾ ಅಥವಾ ಕುಂಬಳಕಾಯಿ ಬೀಜಗಳಂತಹ ಇತರ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ತೂಕ ಇಳಿಕೆ:

ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ನೀವು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ದೇಹವು ಪಡೆಯುವ ಕ್ಯಾಲೊರಿಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ, ಇದು ತೂಕ ಇಳಿಕೆಗೆ ಕಾರಣವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಅನ್ನ ಸೇವನೆ ಮಾಡುವುದನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಹಾಲು, ಅನ್ನ ಎರಡನ್ನು ಮಿಶ್ರಣ ಮಾಡಿದರೆ ಆರೋಗ್ಯ ಭಾಗ್ಯ ಖಂಡಿತ

ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತೆ:

ಬಿಳಿ ಅಕ್ಕಿ ಬೇಗನೆ ಜೀರ್ಣವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸಲು ಕಾರಣವಾಗುತ್ತದೆ. ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ಬಿಟ್ಟರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಿಕೊಳ್ಳಬಹುದು. ಮಧುಮೇಹ ಇರುವವರಿಗೆ ಇದು ತುಂಬಾ ಪ್ರಯೋಜನಕಾರಿ.

ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು:

ಕೆಲವರು ಅನ್ನ ಸೇವನೆ ಮಾಡಿದ ನಂತರ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆಯಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಆದರೆ ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ ನಿಮಗೆ ಆರಂಭದಲ್ಲಿ ಸ್ವಲ್ಪ ಹೊಟ್ಟೆ ನೋವು ಅಥವಾ ಮಲಬದ್ಧತೆ ಅನಿಸಬಹುದು. ಆದರೆ ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಸೇವಿಸಿದರೆ, ನಿಮ್ಮ ಜೀರ್ಣಕ್ರಿಯೆ ತ್ವರಿತವಾಗಿ ಸುಧಾರಣೆಯಾಗುತ್ತದೆ.

ಪೌಷ್ಟಿಕಾಂಶ ಕೊರತೆಯ ಅಪಾಯ:

ಅಕ್ಕಿಯಲ್ಲಿ ವಿಟಮಿನ್ ಬಿ ಇದ್ದು, ಇದು ದೇಹವು ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದ ವರೆಗೆ ಅನ್ನವನ್ನು ಸೇವನೆ ಮಾಡದಿದ್ದರೆ, ಈ ವಿಟಮಿನ್ ಕೊರತೆ ಉಂಟಾಗಬಹುದು. ಇದು ಆಯಾಸ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ನೀವು ಕೂಡ ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ, ದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಬೇರೆ ಕಡೆಯಿಂದ ಪಡೆದುಕೊಳ್ಳಬೇಕಾಗುತ್ತದೆ ಜೊತೆಗೆ ನೀವು ಸೇವನೆ ಮಾಡುವ ಆಹಾರದಲ್ಲಿ ಎಲೆ ತರಕಾರಿಗಳು, ದ್ವಿದಳ ಧಾನ್ಯಗಳು, ಮೊಟ್ಟೆಗಳು ಮತ್ತು ಹಾಲಿನಂತಹ ಪರ್ಯಾಯ ಆಹಾರಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ