ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು; ನಿರ್ಲಕ್ಷ್ಯ ಬೇಡ

ಹೃದಯ ಸಂಬಂಧಿ ಕಾಯಿಲೆಗಳಿದ್ದಾಗ ದೇಹದಲ್ಲಿ ವಿವಿಧ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ವಿಶೇಷವಾಗಿ ಚರ್ಮದ ಮೇಲೆ ಕೆಲವು ಬದಲಾವಣೆಗಳಾಗುತ್ತದೆ. ಅವುಗಳ ಆಧಾರದ ಮೇಲೆ, ಮುಂಚಿತವಾಗಿ ಎಚ್ಛೆತ್ತುಕೊಂಡು ನಮ್ಮ ಜೀವ ಉಳಿಸಿಕೊಳ್ಳಬಹುದು. ಹಾಗಾದರೆ, ಹೃದಯಾಘಾತವಾಗುವ ಮೊದಲು ಚರ್ಮದ ಮೇಲೆ ಈ ರೀತಿಯ ಲಕ್ಷಣಗಳು ಏಕೆ ಕಾಣಿಸಿಕೊಳ್ಳುತ್ತವೆ? ಈ ರೀತಿ ಲಕ್ಷಣ ಕಂಡು ಬಂದಾಗ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚರ್ಮದ ಮೇಲೆ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು; ನಿರ್ಲಕ್ಷ್ಯ ಬೇಡ
ಹೃದಯಾಘಾತ

Updated on: Jul 29, 2025 | 5:22 PM

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಆದರೆ ಈ ರೀತಿ ಆಗುವ ಮೊದಲು, ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇದು ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕೂ ಮೊದಲು ದೇಹದಲ್ಲಿ ಕಂಡುಬರುವಂತಹ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆಗಾಗ ಎದೆ ನೋವು ಬರುವುದು, ಅತಿಯಾಗಿ ಬೆವರುವುದು ಮತ್ತು ಆಯಾಸ ಮುಖ್ಯ ಲಕ್ಷಣಗಳಾಗಿವೆ. ಇದಕ್ಕೂ ಹೊರತಾಗಿ ಚರ್ಮದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂದರೆ ಹೃದಯಾಘಾತದ ಮೊದಲು ಚರ್ಮದ ಮೇಲೆ ಕೆಲವು ಬದಲಾವಣೆಗಳು ಕಂಡುಬರುತ್ತವೆ ಅವುಗಳನ್ನು ಗುರುತಿಸುವುದು ಬಹಳ ಮುಖ್ಯ. ಹಾಗಾದರೆ, ಹೃದಯಾಘಾತವಾಗುವ ಮೊದಲು ಚರ್ಮದ ಮೇಲೆ ಈ ರೀತಿಯ ಲಕ್ಷಣಗಳು ಏಕೆ ಕಾಣಿಸಿಕೊಳ್ಳುತ್ತವೆ? ಈ ರೀತಿ ಲಕ್ಷಣ ಕಂಡು ಬಂದಾಗ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯ ಸಂಬಂಧಿ ಕಾಯಿಲೆಗಳಿಂದ ಅನೇಕರು ಪರದಾಡುತ್ತಿದ್ದಾರೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ವಾಸ್ತವವದಲ್ಲಿ, ಇದು ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವು ಅಧ್ಯಯನ ಮತ್ತು ವರದಿಗಳ ಪ್ರಕಾರ, ವಿಶ್ವಾದ್ಯಂತ ಕನಿಷ್ಠ 500 ಮಿಲಿಯನ್ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ, ಹೃದಯಾಘಾತ ಜನರನ್ನು ಬೆನ್ನು ಬಿಡದಂತೆ ಕಾಡುತ್ತಿದೆ. ಕೆಲವರಿಗೆ ತೀವ್ರವಾದಂತಹ ಲಕ್ಷಣಗಳು ಕಂಡುಬಂದರೆ, ಇನ್ನು ಕೆಲವರಿಗೆ ಮೌನವಾಗಿ ಬಂದು ಜೀವಕ್ಕೆ ಹಾನಿ ಮಾಡುತ್ತಿದೆ. ಆದರೆ ನೆನಪಿರಲಿ ಹೃದಯಾಘಾತ ಸಂಭವಿಸುವ ಮೊದಲು, ಚರ್ಮದ ಮೇಲೆ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಇವುಗಳ ಆಧಾರದ ಮೇಲೆ, ಮುಂಚಿತವಾಗಿ ಎಚ್ಛೆತ್ತುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಈ ಬಗ್ಗೆ ಸರಿಯಾಗಿ ತಿಳಿದಿರಬೇಕು.

ನೋವು

ಚರ್ಮದಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ಕಾಲುಗಳಲ್ಲಿ ಊತ ಕಂಡುಬರುವುದು. ಜೊತೆಗೆ ಇದ್ದಕ್ಕಿದ್ದಂತೆ, ಇಡೀ ಚರ್ಮವು ಊದಿಕೊಳ್ಳುತ್ತದೆ. ವಿಶೇಷವಾಗಿ, ಕಾಲುಗಳ ಊತವು ಹೆಚ್ಚಾಗುತ್ತದೆ. ದೀರ್ಘಕಾಲ ಕುಳಿತಿರಲಿ ಅಥವಾ ನಿಂತುಕೊಂಡಿರಲಿ ನೀರು ಪಾದಗಳಲ್ಲಿ ಸಂಗ್ರಹವಾಗುತ್ತದೆ. ಪರಿಣಾಮವಾಗಿ, ಅಲ್ಲಿ ಊತ ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹೃದಯ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಪಂಪ್ ಮಾಡುವ ಕೆಲಸ ಸರಿಯಾಗಿ ನಡೆಯುವುದಿಲ್ಲ. ಪರಿಣಾಮವಾಗಿ, ದೇಹದ ಎಲ್ಲಾ ದ್ರವ ಚರ್ಮದ ಅಡಿಯಲ್ಲಿ ಸಂಗ್ರಹವಾಗುತ್ತದೆ. ಇದು ಕ್ರಮೇಣ ಊತಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಹೃದಯದ ಕಾರ್ಯನಿರ್ವಹಣೆ ಸರಿಯಾಗಿಲ್ಲದಿದ್ದಾಗ, ಊತವು ಈ ರೀತಿ ಕಾಣಿಸಿಕೊಳ್ಳುತ್ತದೆ. ಇದು ಹೃದಯಾಘಾತದ ಸಂಕೇತವೂ ಆಗಿರಬಹುದು. ಆದ್ದರಿಂದ, ಕಾಲುಗಳಲ್ಲಿ ಆಗಾಗ ಊತ ಕಂಡುಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ; ಹೃದಯಾಘಾತ, ಪಾರ್ಶ್ವವಾಯುವಿನಿಂದ ದೂರವಿರಿ

ಬೆವರು

ಕೆಲವರು ತಂಪಾದ ವಾತಾವರಣದಲ್ಲಿಯೂ ಬೆವರುತ್ತಾರೆ ಅಥವಾ ಸ್ವಲ್ಪ ದೂರ ನಡೆದರೂ ಬೆವರುತ್ತಾರೆ. ಸಣ್ಣ ಕೆಲಸಗಳನ್ನು ಮಾಡಿದರೂ ಆಯಾಸವಾಗಿ ಬೆವರು ಬರುತ್ತೆ ಈ ಸ್ಥಿತಿಯನ್ನು ಡಯಾಫೊರೆಸಿಸ್ ಎಂದು ಕರೆಯಲಾಗುತ್ತದೆ. ಇದು ಹೃದಯದಲ್ಲಿ ಸಮಸ್ಯೆ ಇರುವುದನ್ನು ಸೂಚಿಸುತ್ತದೆ. ಹೃದಯಾಘಾತ ಸಮಯದಲ್ಲಿ, ಅತಿಯಾಗಿ ಬೆವರುತ್ತಾರೆ. ಆದರೆ ಇದು ಸಹಜ ಎಂದು ಭಾವಿಸಿ ಅನೇಕ ಜನರು ಇದನ್ನು ಹಗುರವಾಗಿ ಪರಿಗಣಿಸುತ್ತಾರೆ. ಆದರೆ ಅತಿಯಾಗಿ ಬೆವರುವುದು ಆರೋಗ್ಯ ಸಮಸ್ಯೆಯ ಲಕ್ಷಣವಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಅಪಾಯವನ್ನು ಹೆಚ್ಚಿಸುತ್ತದೆ.

ಚರ್ಮ ನೀಲಿಯಾಗುವುದು

ಹೃದಯದಲ್ಲಿ ಸಮಸ್ಯೆಗಳಿದ್ದರೆ, ಬೆರಳುಗಳು ನೀಲಿ ಬಣ್ಣಕ್ಕೆ ತಿರುಗಬಹುದು. ಇದನ್ನು ಬಾಹ್ಯ ಸೈನೋಸಿಸ್ ಎಂದು ಕರೆಯಲಾಗುತ್ತದೆ. ಹೃದಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಈ ರೀತಿಯಾಗುತ್ತದೆ. ಇದಕ್ಕೆ ಕಾರಣವೆಂದರೆ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡದಿದ್ದಾಗ, ರಕ್ತಪರಿಚಲನೆ ಸರಿಯಾಗಿ ಆಗುವುದಿಲ್ಲ ಪರಿಣಾಮವಾಗಿ, ಆಮ್ಲಜನಕದ ಮಟ್ಟ ಕಡಿಮೆಯಾಗಿ ಬೆರಳು ನೀಲಿ ಬಣ್ಣಕ್ಕೆ ತಿರುಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ