Height and cancer Relation: ವ್ಯಕ್ತಿಯ ಅತಿಯಾದ ಎತ್ತರವು ಕ್ಯಾನ್ಸರ್​ಗೆ ಕಾರಣವಾಗಬಹುದೇ? ಸಂಶೋಧನೆ ಹೇಳುವುದೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 10:55 AM

Height and cancer Relation: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ 2023 ರಲ್ಲಿ 1.4 ದಶಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಮುಂಬರುವ ವರ್ಷಗಳಲ್ಲಿ ಇದು ವೇಗವಾಗಿ ಹೆಚ್ಚಾಗುವ ಅಪಾಯವಿದೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಅಥವಾ ಇದರ ಕುರಿತು ಮಾಹಿತಿ ಕಲೆ ಹಾಕಲು ಇದಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಂಶೋಧನೆಗಳು ನಡೆಯುತ್ತಿರುತ್ತದೆ. ನಾವು ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ರೀತಿಯ ಆಹಾರ ಪದ್ಧತಿ ಕ್ಯಾನ್ಸರ್ ಗೆ ದೊಡ್ಡ ಅಪಾಯಕಾರಿ ಅಂಶ ಎಂದು ಅಂದುಕೊಂಡಿದ್ದೇವೆ. ಆದರೆ ಇದರ ಜೊತೆಗೆ ಈಗ ಕ್ಯಾನ್ಸರ್ ಕುರಿತಾಗಿ ನಡೆದ ಹೊಸ ಸಂಶೋಧನೆಯೊಂದು, ಕ್ಯಾನ್ಸರ್ ಗೂ ವ್ಯಕ್ತಿಯ ಎತ್ತರಕ್ಕೂ ಸಂಬಂಧವಿದೆ ಎಂದು ಹೇಳಿದೆ.

Height and cancer Relation: ವ್ಯಕ್ತಿಯ ಅತಿಯಾದ ಎತ್ತರವು ಕ್ಯಾನ್ಸರ್​ಗೆ ಕಾರಣವಾಗಬಹುದೇ? ಸಂಶೋಧನೆ ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಪ್ರತಿವರ್ಷ ಹೆಚ್ಚಾಗುತ್ತಿರುವ ಬಗ್ಗೆ ನಾವು ಕೇಳುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ 2023 ರಲ್ಲಿ 1.4 ದಶಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಮುಂಬರುವ ವರ್ಷಗಳಲ್ಲಿ ಇದು ವೇಗವಾಗಿ ಹೆಚ್ಚಾಗುವ ಅಪಾಯವಿದೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಅಥವಾ ಇದರ ಕುರಿತು ಮಾಹಿತಿ ಕಲೆ ಹಾಕಲು ಇದಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಂಶೋಧನೆಗಳು ನಡೆಯುತ್ತಿರುತ್ತದೆ. ನಾವು ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ರೀತಿಯ ಆಹಾರ ಪದ್ಧತಿ ಕ್ಯಾನ್ಸರ್ ಗೆ ದೊಡ್ಡ ಅಪಾಯಕಾರಿ ಅಂಶ ಎಂದು ಅಂದುಕೊಂಡಿದ್ದೇವೆ. ಆದರೆ ಇದರ ಜೊತೆಗೆ ಈಗ ಕ್ಯಾನ್ಸರ್ ಕುರಿತಾಗಿ ನಡೆದ ಹೊಸ ಸಂಶೋಧನೆಯೊಂದು, ಕ್ಯಾನ್ಸರ್ ಗೂ ವ್ಯಕ್ತಿಯ ಎತ್ತರಕ್ಕೂ ಸಂಬಂಧವಿದೆ ಎಂದು ಹೇಳಿದೆ.

ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿಯ ಪ್ರಕಾರ, ವ್ಯಕ್ತಿಯ ಎತ್ತರ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯ ನಡುವೆ ಆಳವಾದ ಸಂಬಂಧವಿದೆ. ಒಬ್ಬ ವ್ಯಕ್ತಿಯ ಎತ್ತರವು ಸಾಮಾನ್ಯ ಎತ್ತರವಿರುವ ವ್ಯಕ್ತಿಗಿಂತ ಕರುಳು, ಗರ್ಭಾಶಯ (ಎಂಡೊಮೆಟ್ರಿಯಂ), ಅಂಡಾಶಯ, ಪ್ರಾಸ್ಟೇಟ್, ಮೂತ್ರಪಿಂಡ ಮತ್ತು ಸ್ತನ ಕ್ಯಾನ್ಸರ್ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಹೇಳಿದೆ. ಇದರಿಂದ, ಎತ್ತರವಾಗಿರುವ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಕಂಡು ಬಂದಿದೆ.

ಅಧಿಕ ಎತ್ತರವು ಕ್ಯಾನ್ಸರ್ ಅಪಾಯವನ್ನು 16 ಪ್ರತಿಶತದಷ್ಟು ಹೆಚ್ಚಿಸುತ್ತದೆ!

ವ್ಯಕ್ತಿಯ ಉದ್ದವು ಕ್ಯಾನ್ಸರ್ ಅಪಾಯವನ್ನು ಸುಮಾರು 16% ಹೆಚ್ಚಿಸುತ್ತದೆ ಎಂದು ಸಂಶೋಧನೆ ಕಂಡು ಹಿಡಿದಿದೆ. ಸಾಮಾನ್ಯ ಎತ್ತರವಿರುವ (ಸುಮಾರು 165 ಸೆಂ. ಮೀ) ಪ್ರತಿ 10,000 ಮಹಿಳೆಯರಲ್ಲಿ ಸುಮಾರು 45 ಜನರು ಕ್ಯಾನ್ಸರ್ ಅಪಾಯದಲ್ಲಿದ್ದರು. ಜೊತೆಗೆ 175 ಸೆಂ. ಮೀ. ಎತ್ತರವಿರುವ ಮಹಿಳೆಯರಲ್ಲಿ, ಪ್ರತಿ 10,000 ಮಹಿಳೆಯರಲ್ಲಿ 52 ಜನ ಕ್ಯಾನ್ಸರ್ ಹೊಂದಿದ್ದರು. ಅಂದರೆ, ಹೆಚ್ಚು ಉದ್ದವಿರುವವರಲ್ಲಿ ಕ್ಯಾನ್ಸರ್ ನ ಅಪಾಯ ಹೆಚ್ಚು. ಇದು ಎತ್ತರವಿರುವ ಎಲ್ಲಾ ವ್ಯಕ್ತಿಗೂ ಅನ್ವಯವಾಗುವುದಿಲ್ಲ ಎಂದು ಸಂಶೋಧನೆ ಹೇಳಿದೆ. ಅದರಲ್ಲಿಯೂ ಅನೇಕ ಸಂದರ್ಭಗಳಲ್ಲಿ ಕ್ಯಾನ್ಸರ್ ಆನುವಂಶಿಕವಾಗಿ ಬರಬಹುದು. ಉದಾಹರಣೆಗೆ, ಮಹಿಳೆಗೆ ಸ್ತನ ಕ್ಯಾನ್ಸರ್ ಇದ್ದರೆ, ಈ ಕ್ಯಾನ್ಸರ್ ಅವಳ ಮಗಳಿಗೂ ಬರಬಹುದು ಇಲ್ಲಿ ಎತ್ತರದ ವಿಷಯ ಬರುವುದಿಲ್ಲ.

ಇದನ್ನೂ ಓದಿ: ಟಾನ್ಸಿಲ್ ನೋವಿನಿಂದ ಪರಿಹಾರ ಪಡೆಯಲು ಈ ಸಲಹೆಗಳನ್ನು ಪಾಲನೆ ಮಾಡಿ

ವ್ಯಕ್ತಿಯ ಎತ್ತರಕ್ಕೂ ಕ್ಯಾನ್ಸರ್ ಗೂ ಇರುವ ಸಂಬಂಧವೇನು?

ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿಯ ಪ್ರಕಾರ, ಎತ್ತರವಿರುವ ವ್ಯಕ್ತಿಯಲ್ಲಿ ಹೆಚ್ಚು ಕೋಶಗಳಿರುತ್ತವೆ. ಈ ಜೀವಕೋಶಗಳಲ್ಲಿ ರೂಪಾಂತರ ಮತ್ತು ವಿಭಜನೆಯ ಅಪಾಯ ಹೆಚ್ಚಾಗಿದೆ. ಇವು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದರೆ, ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಪುರುಷರಲ್ಲಿ ಈ ಅಪಾಯ ಹೆಚ್ಚು;

ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಎತ್ತರವಾಗಿರುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಹಾಗಾಗಿ ಪುರುಷರಲ್ಲಿ ಕ್ಯಾನ್ಸರ್ ಅಪಾಯವು ಮಹಿಳೆಯರಿಗಿಂತ ಹೆಚ್ಚಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು. ವ್ಯಕ್ತಿಯ ಎತ್ತರ ಮತ್ತು ಕ್ಯಾನ್ಸರ್ ಅಪಾಯದ ಬಗ್ಗೆ ಹೆಚ್ಚಿನ ಡೇಟಾ ಸಂಗ್ರಹಿಸಬೇಕಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ