AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies: ಟಾನ್ಸಿಲ್ ನೋವಿನಿಂದ ಪರಿಹಾರ ಪಡೆಯಲು ಈ ಸಲಹೆಗಳನ್ನು ಪಾಲನೆ ಮಾಡಿ

ಟಾನ್ಸಿಲ್ಸ್ ನಾಲಿಗೆಯ ಹಿಂಭಾಗದಲ್ಲಿ ಗಂಟಲಿನ ಎರಡೂ ಬದಿಗಳಲ್ಲಿ ದುಂಡಗಿನ ಉಂಡೆಗಳಂತೆ ಕಾಣುತ್ತದೆ. ಇವು ಬಾಯಿ, ಮೂಗು ಮತ್ತು ಗಂಟಲಿನಿಂದ ಯಾವುದೇ ರೋಗಕಾರಕವು ದೇಹವನ್ನು ಪ್ರವೇಶಿಸದಂತೆ ಕಾಳಜಿ ವಹಿಸುತ್ತದೆ. ಕೆಲವರಿಗೆ ಶೀತವಾದಾಗ ಗಂಟಲಿನ ನೋವು ಕೂಡ ಹೆಚ್ಚಾಗುತ್ತದೆ. ಈ ಸೋಂಕು ಬಹಳ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಕಂಡು ಬಂದಾಗ ಬೇರೆ ಬೇರೆ ರೀತಿಯ ಔಷಧಿಗಳನ್ನು ಸೇವನೆ ಮಾಡುವ ಬದಲು ಈ ನೋವನ್ನು ಕಡಿಮೆ ಮಾಡಲು ಮನೆಮದ್ದುಗಳನ್ನು ಮಾಡಿ ನೋಡಬಹುದು. ಈ ಸೋಂಕು ಕಂಡು ಬಂದರೆ ಕೆಳಗೆ ನೀಡಿರುವ ಮನೆ ಮದ್ದುಗಳನ್ನು ಮಾಡಿ ನೋಡಿ.

Home Remedies: ಟಾನ್ಸಿಲ್ ನೋವಿನಿಂದ ಪರಿಹಾರ ಪಡೆಯಲು ಈ ಸಲಹೆಗಳನ್ನು ಪಾಲನೆ ಮಾಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 17, 2024 | 6:15 PM

Share

ಟಾನ್ಸಿಲ್ಸ್ ಅಥವಾ ಗಂಟಲು ನೋವನ್ನು ಅನುಭವಿಸಿದವರಿಗೆ ಅದರ ಹಿಂಸೆಯೇನು ಎಂಬುದು ತಿಳಿದಿರುತ್ತದೆ. ಟಾನ್ಸಿಲ್ಸ್ ನಾಲಿಗೆಯ ಹಿಂಭಾಗದಲ್ಲಿ ಗಂಟಲಿನ ಎರಡೂ ಬದಿಗಳಲ್ಲಿ ದುಂಡಗಿನ ಉಂಡೆಗಳಂತೆ ಕಾಣುತ್ತದೆ. ಇವು ಬಾಯಿ, ಮೂಗು ಮತ್ತು ಗಂಟಲಿನಿಂದ ಯಾವುದೇ ರೋಗಕಾರಕವು ದೇಹವನ್ನು ಪ್ರವೇಶಿಸದಂತೆ ಕಾಳಜಿ ವಹಿಸುತ್ತದೆ. ಕೆಲವರಿಗೆ ಶೀತವಾದಾಗ ಗಂಟಲಿನ ನೋವು ಕೂಡ ಹೆಚ್ಚಾಗುತ್ತದೆ. ಈ ಸೋಂಕು ಬಹಳ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಕಂಡು ಬಂದಾಗ ಬೇರೆ ಬೇರೆ ರೀತಿಯ ಔಷಧಿಗಳನ್ನು ಸೇವನೆ ಮಾಡುವ ಬದಲು ಈ ನೋವನ್ನು ಕಡಿಮೆ ಮಾಡಲು ಮನೆಮದ್ದುಗಳನ್ನು ಮಾಡಿ ನೋಡಬಹುದು. ಈ ಸೋಂಕು ಕಂಡು ಬಂದರೆ ಕೆಳಗೆ ನೀಡಿರುವ ಮನೆ ಮದ್ದುಗಳನ್ನು ಮಾಡಿ ನೋಡಿ.

  1. ಒಂದು ಲೋಟ ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ. ಆ ನೀರಿನ ಹಬೆಯನ್ನು ತೆಗೆದುಕೊಳ್ಳಬೇಕು. ಈ ರೀತಿ ಮಾಡುವಾಗ ನಿಮ್ಮ ಕಿವಿ ಮತ್ತು ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ಇದು ಟಾನ್ಸಿಲ್ಸ್ ಸೋಂಕನ್ನು ಕಡಿಮೆ ಮಾಡುತ್ತದೆ. ಎದೆಯಲ್ಲಿ ಸಂಗ್ರಹವಾದ ಲೋಳೆಯನ್ನು ಸಹ ಕಡಿಮೆ ಮಾಡುತ್ತದೆ.
  2. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ ಮತ್ತು ಉಪ್ಪನ್ನು ಬೆರೆಸಿ. ಟಾನ್ಸಿಲ್ ನೋವನ್ನು ನಿವಾರಿಸಲು ಈ ಪಾನೀಯವು ತುಂಬಾ ಉಪಯುಕ್ತವಾಗಿದೆ. ಈ ನಿಂಬೆ ನೀರನ್ನು ದಿನಕ್ಕೆ 3- 4 ಬಾರಿ ಕುಡಿಯಿರಿ. ಕ್ರಮೇಣ ನೋವು ನಿವಾರಣೆಯಾಗುತ್ತದೆ.
  3. ಟಾನ್ಸಿಲ್ ನೋವನ್ನು ನಿವಾರಿಸಲು ಗ್ರೀನ್ ಟೀಯನ್ನು ಬಳಸಬಹುದು. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ 3 ಬಾರಿ ಕುಡಿಯಿರಿ. ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಗಳಿವೆ. ಅವು ಟಾನ್ಸಿಲ್ ಸೋಂಕಿನ ವಿರುದ್ಧ ಹೋರಾಡುತ್ತವೆ.
  4. ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿಯನ್ನು ಬೆರೆಸಿ ಕುಡಿಯಿರಿ. ಅರಿಶಿನವು ಉರಿಯೂತ ನಿವಾರಕ ಮತ್ತು ಆಂಟಿ- ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಅವು ಟಾನ್ಸಿಲ್ ನೋವು ಮತ್ತು ಸೋಂಕುಗಳನ್ನು ಕಡಿಮೆ ಮಾಡುತ್ತವೆ. ಅರಿಶಿನ ಬೆರೆಸಿದ ಹಾಲನ್ನು ಕುಡಿದರೆ ಶೀತ ಮತ್ತು ಕೆಮ್ಮು ಸಹ ದೂರವಾಗುತ್ತದೆ. ಇಲ್ಲವಾದಲ್ಲಿ ತರಕಾರಿ ಅಥವಾ ಚಿಕನ್ ಸೂಪ್ ಅನ್ನು ಬಿಸಿಯಾಗಿ ಕುಡಿಯುವುದರಿಂದ ಕುತ್ತಿಗೆಗೆ ವಿಶ್ರಾಂತಿ ಸಿಗುತ್ತದೆ. ಶೀತ ಮತ್ತು ಕೆಮ್ಮಿನ ಸಮಸ್ಯೆಗಳಿಂದ ಪರಿಹಾರವೂ ಸಿಗುತ್ತದೆ. ಟಾನ್ಸಿಲ್ ನೋವು ಸಹ ಕಡಿಮೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ