Kiwi Health Benefits: ಕಿವಿ ಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ
Kiwi Health Benefits: ಕಿವಿ ಹಣ್ಣಿನ ಸೇವನೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಈ ಹಣ್ಣಿನ ಸೇವನೆಯನ್ನು ಹೆಚ್ಚಿಸಿದೆ. ಆದರೆ ಇದನ್ನು ಯಾವ ರೀತಿ ತಿನ್ನಬೇಕು ಎಂಬುದು ಎಲ್ಲರಿಗೂ ತಿಳಿದಿಲ್ಲ. ಕೆಲವರು ಇದರ ತೆಳ್ಳಗಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಇನ್ನು ಕೆಲವರು ಇದನ್ನು ಮಧ್ಯದಲ್ಲಿ ಕತ್ತರಿಸಿ ಚಮಚದಿಂದ ಅದರ ಒಳಭಾಗವನ್ನು ಹೊರ ತೆಗೆದು ಸೇವನೆ ಮಾಡುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಲ್ಲಿ ಕಿವಿ ಹಣ್ಣನ್ನು ತಿನ್ನುವ ಸರಿಯಾದ ಮಾರ್ಗದ ಬಗ್ಗೆ ವಿವರಣೆ ನೀಡಲಾಗಿದೆ. ಈ ಹಣ್ಣನ್ನು ಸೇಬಿನಂತೆ ಕಚ್ಚಿ ತಿನ್ನಬೇಕು ಎಂದು ಅದರಲ್ಲಿ ಹೇಳಲಾಗಿದೆ. ಅಂದರೆ ಈ ಹಣ್ಣಿನ ಸಿಪ್ಪೆಯನ್ನು ಕೂಡ ಸೇವನೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಈ ರೀತಿ ಸೇವನೆ ಮಾಡುವುದು ಸರಿಯೇ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಕಿವಿ ಹಣ್ಣಿನ ಸೇವನೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಈ ಹಣ್ಣಿನ ಸೇವನೆಯನ್ನು ಹೆಚ್ಚಿಸಿದೆ. ಆದರೆ ಇದನ್ನು ಯಾವ ರೀತಿ ತಿನ್ನಬೇಕು ಎಂಬುದು ಎಲ್ಲರಿಗೂ ತಿಳಿದಿಲ್ಲ. ಕೆಲವರು ಇದರ ತೆಳ್ಳಗಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಇನ್ನು ಕೆಲವರು ಇದನ್ನು ಮಧ್ಯದಲ್ಲಿ ಕತ್ತರಿಸಿ ಚಮಚದಿಂದ ಅದರ ಒಳಭಾಗವನ್ನು ಹೊರ ತೆಗೆದು ಸೇವನೆ ಮಾಡುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಲ್ಲಿ ಕಿವಿ ಹಣ್ಣನ್ನು ತಿನ್ನುವ ಸರಿಯಾದ ಮಾರ್ಗದ ಬಗ್ಗೆ ವಿವರಣೆ ನೀಡಲಾಗಿದೆ. ಈ ಹಣ್ಣನ್ನು ಸೇಬಿನಂತೆ ಕಚ್ಚಿ ತಿನ್ನಬೇಕು ಎಂದು ಅದರಲ್ಲಿ ಹೇಳಲಾಗಿದೆ. ಅಂದರೆ ಈ ಹಣ್ಣಿನ ಸಿಪ್ಪೆಯನ್ನು ಕೂಡ ಸೇವನೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಈ ರೀತಿ ಸೇವನೆ ಮಾಡುವುದು ಸರಿಯೇ? ಪೌಷ್ಟಿಕಾಂಶ ತಜ್ಞ ಡಾ. ಆಮಿ ಶಾ ಅವರು ಈ ರೀತಿ ಸೇವನೆ ಮಾಡುವುದು ಉತ್ತಮ ಎಂದಿದ್ದು ಆ ಹೇಳಿಕೆಯನ್ನು ದೃಢಪಡಿಸಿದ್ದಾರೆ. ಈ ಕಿವಿ ಹಣ್ಣನ್ನು ಸಿಪ್ಪೆ ಜೊತೆ ತಿಂದರೆ ಫೈಬರ್ ಅಂಶ 50% ಹೆಚ್ಚಾಗುತ್ತದೆ ಎಂದು ವಿವರಿಸಿದ್ದಾರೆ. ಹೆಚ್ಚುವರಿಯಾಗಿ, ಕಿವಿ ಹಣ್ಣಿನ ಸಿಪ್ಪೆಯಲ್ಲಿ ಫೋಲೇಟ್ (ವಿಟಮಿನ್ ಬಿ 9) ಅಂಶವನ್ನು ಮತ್ತು ವಿಟಮಿನ್ ಇ ಅನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಿವಿ ಹಣ್ಣನ್ನು ತಿನ್ನುವ ಸರಿಯಾದ ವಿಧಾನ ಯಾವುದು?
ಈ ಹಣ್ಣನ್ನು ಮೊದಲ ಬಾರಿಗೆ ಸಿಪ್ಪೆ ಜೊತೆಗೆ ಸೇವನೆ ಮಾಡುವಾಗ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ಹೆಚ್ಚುವರಿ ಪೌಷ್ಠಿಕಾಂಶ ಪಡೆಯಲು ನಯವಾದ ಚರ್ಮವಿರುವ ಕಿವಿ ಹಣ್ಣನ್ನು ಆರಿಸಿ. ಈ ಹಣ್ಣನ್ನು ಸಿಪ್ಪೆ ತೆಗೆದು ಸೇವನೆ ಮಾಡಬೇಡಿ.
ಈ ಹಣ್ಣನ್ನು ಸಿಪ್ಪೆ ಜೊತೆಗೆ ಯಾರು ಸೇವನೆ ಮಾಡಬಾರದು?
ಕಿವಿ ಸಿಪ್ಪೆಯನ್ನು ತಿನ್ನುವಾಗ ಕೆಲವರಿಗೆ ತುರಿಕೆಯ ಅನುಭವ ಆದರೆ ಅಂತವರು ಇದನ್ನು ಸೇವನೆ ಮಾಡಬಾರದು. ಕಿವಿ ಹಣ್ಣಿನ ಸಿಪ್ಪೆಯಿಂದ ಕೆಲವರಿಗೆ ಅಲರ್ಜಿ ಇರಬಹುದು, ಅಂತವರು ಸಿಪ್ಪೆ ಸುಲಿದು ತಿನ್ನುವುದು ಉತ್ತಮ.
ಈ ಹಣ್ಣನ್ನು ಏಕೆ ಸೇವನೆ ಮಾಡಬೇಕು?
ಕಿವಿ ಹಣ್ಣನ್ನು ಏಕೆ ಸೇವನೆ ಮಾಡಬೇಕು ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು. ಹಾರ್ವರ್ಡ್ ಹೆಲ್ತ್ ಪ್ರಕಾರ, ಒಂದು ಕಿವಿ ಹಣ್ಣು ದೈನಂದಿನ ವಯಸ್ಕರಿಗೆ ಅಗತ್ಯವಿರುವ ವಿಟಮಿನ್ ಸಿಯನ್ನು (ಸುಮಾರು 80%) ಒದಗಿಸುತ್ತದೆ. ಜೊತೆಗೆ ಈ ಹಣ್ಣು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ ಎಂದು ಡಾ. ಆಮಿ ಶಾ ವಿವರಿಸುತ್ತಾರೆ. ಅಲ್ಲದೆ ಇದು ಪೆರಿಮೆನೊಪಾಸ್ ವಯಸ್ಸಿನ (35 ರಿಂದ 55) ಮಹಿಳೆಯರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅವು ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ.
ಇದನ್ನೂ ಓದಿ: ನಿಮಗೂ ಸಿಹಿತಿಂಡಿ ಇಷ್ಟನಾ? ಆರೋಗ್ಯ ಕಾಪಾಡಿಕೊಳ್ಳಲು ಯಾವ ಸಮಯದಲ್ಲಿ ತಿನ್ನಬೇಕು?
ಕಿವಿ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಬಯಸಿದರೆ, ಇಲ್ಲಿ ನೀಡಿರುವ ರುಚಿಕರವಾದ ಪಾಕವಿಧಾನಗಳು ಟ್ರೈ ಮಾಡಿ:
1. ದಾಳಿಂಬೆ ಮತ್ತು ಕಿವಿ ಸಲಾಡ್: ಈ ಎರಡು ಹಣ್ಣು ತುಂಬಾ ರುಚಿಕರವಾಗಿದ್ದು ಇವೆರಡನ್ನೂ ಸೇರಿಸುವುದರಿಂದ ರುಚಿ ದುಪ್ಪಟ್ಟಾಗುತ್ತದೆ. ಈ ಆರೋಗ್ಯಕರ ಮತ್ತು ರುಚಿಕರವಾದ ಸಲಾಡ್ ನಲ್ಲಿ ಎರಡು ಹಣ್ಣನ್ನು ಸಂಯೋಜಿಸಿ, ಬೇಕಾದಲ್ಲಿ ಕಿತ್ತಳೆ ಮತ್ತು ಪುದೀನಾ ಸೇರಿಸಿಕೊಳ್ಳಿ.
2. ಕಿವಿ ಸ್ಮೂಥಿ: ಹಸಿರು ಸ್ಮೂಥಿಗಳು ನಿಮಗೆ ಇಷ್ಟವಾಗುತ್ತಿದ್ದರೆ ಕಿವೀಸ್ ಜೊತೆಗೆ ಪಾಲಕ್, ಸೇಬು ಮತ್ತು ಪೇರಳೆಯನ್ನು ಸೇರಿಸಿ ಮಿಶ್ರಣ ಮಾಡಿ. ಸಿಹಿ ಬಯಸಿದರೆ ರುಚಿಗೆ ಜೇನುತುಪ್ಪವನ್ನು ಸೇರಿಸಿ. ಅಗತ್ಯವಿದ್ದರೆ ಸೋಸಿಕೊಂಡು ಕುಡಿಯಿರಿ.
3. ಕಿವಿ ಹಣ್ಣಿನ ಶರಬತ್: ಬಿಸಿಲು ಹೆಚ್ಚಾದಾಗ ತಾಜಾ ಕಿವಿಹಣ್ಣಿನ ಶರಬತ್ ಮಾಡಿ ಆನಂದಿಸಿ. ಕಿವಿ ಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿ, ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ಗಂಟೆಗಳ ಕಾಲ ಫ್ರೀಜ್ ಮಾಡಿ ಬಳಿಕ ಕುಡಿಯಿರಿ.
ಸಾಧ್ಯವಾದರೆ ಕಿವಿ ಹಣ್ಣನ್ನು ಸಿಪ್ಪೆಯೊಂದಿಗೆ ನಿಮ್ಮ ಆಹಾರದಲ್ಲಿ ಸೇರಿಸಿ ಎಲ್ಲಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Tue, 17 September 24