Home remedies: ಈ ಒಂದು ಎಲೆಗೆ, ದೇಹದಲ್ಲಿನ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಗುಣವಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 5:53 PM

ಅಮೃತ ಬಳ್ಳಿ, ಹೆಸರು ಹೇಳುವಂತೆ ಇದು ಭೂಮಿಯ ಮೇಲೆ ದೊರಕುವ ಅಮೃತ ಎಂದರೆ ತಪ್ಪಾಗಲಾರದು. ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಎಲೆಗಳಿಂದ ಹಲವಾರು ರೀತಿಯ ಔಷಧಗಳು ತಯಾರಾಗುತ್ತದೆ. ನೀವು ಇದನ್ನು ಯಾವ ರೀತಿಯಲ್ಲಿ ತೆಗೆದುಕೊಂಡರೂ ಸಹ, ಅದು ದೇಹಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

Home remedies: ಈ ಒಂದು ಎಲೆಗೆ, ದೇಹದಲ್ಲಿನ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಗುಣವಿದೆ
ಅಮೃತ ಬಳ್ಳಿ
Follow us on

ಪ್ರಕೃತಿಯಲ್ಲಿ ಅನೇಕ ತರನಾದ ಔಷಧೀಯ ಗುಣಗಳಿರುವ ಸಸ್ಯಗಳಿವೆ. ಇವು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ನೈಸರ್ಗಿಕ ಔಷಧಿಗಳಾಗಿವೆ. ಅವುಗಳಲ್ಲಿ ಅಮೃತ ಬಳ್ಳಿಯೂ ಹೌದು. ಹೆಸರು ಹೇಳುವಂತೆ ಇದು ಭೂಮಿಯ ಮೇಲೆ ದೊರಕುವ ಅಮೃತ ಎಂದರೆ ತಪ್ಪಾಗಲಾರದು. ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಎಲೆಗಳಿಂದ ಹಲವಾರು ರೀತಿಯ ಔಷಧಗಳು ತಯಾರಾಗುತ್ತದೆ. ನೀವು ಇದನ್ನು ಯಾವ ರೀತಿಯಲ್ಲಿ ತೆಗೆದುಕೊಂಡರೂ ಸಹ ಅದು ದೇಹಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

ಅಮೃತ ಬಳ್ಳಿಯ ಎಲೆಗಳಂತೆ ಇದರ ಕಾಂಡಗಳನ್ನು ಕೂಡ ಔಷಧಗಳ ಬಳಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ಇದನ್ನು ಔಷಧೀಯ ಸಸ್ಯವೆಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಹಾಗಾಗಿಯೇ ಇದನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಬಳಸಲಾಗುತ್ತದೆ.

  • ಅಮೃತ ಬಳ್ಳಿ ಬೇರುಗಳಿಂದ ತಯಾರಿಸಿದ ಕಷಾಯವನ್ನು ಜೇನುತುಪ್ಪದೊಂದಿಗೆ ಬೆರೆಸಿ ನಿಯಮಿತವಾಗಿ ಸೇವನೆ ಮಾಡಿದರೆ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.
  • ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದೊಂದಿಗೆ ಸೇವಿಸಿದರೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
  • 10- 20 ಮಿಲಿಲೀಟರ್ ಅಮೃತ ಬಳ್ಳಿಯ ರಸವನ್ನು ದಿನಕ್ಕೆ 3 ಬಾರಿ ಕುಡಿಯುವುದರಿಂದ ಚರ್ಮ ರೋಗಗಳಿಂದ ಪರಿಹಾರ ಸಿಗುತ್ತದೆ.
  • ಅದಲ್ಲದೆ ಇದರಿಂದ ಮಾಡಿದ ಕಷಾಯಗಳನ್ನು ಸೇವನೆ ಮಾಡುವುದರಿಂದ ಉಸಿರಾಟದ ಸಮಸ್ಯೆಗಳು ಕಡಿಮೆಯಾಗುತ್ತವೆ ಜೊತೆಗೆ ಅಸ್ತಮಾ ಕೂಡ ದೂರವಾಗುತ್ತದೆ.
  • ಅಮೃತ ಬಳ್ಳಿಯ ರಸವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಈ ಎಲೆಗಳು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ರೋಗಗಳನ್ನು ನಿಯಂತ್ರಿಸುತ್ತದೆ.
  • ಕೀಲುಗಳಲ್ಲಿ ಊತ, ನೋವು ಅಥವಾ ಉರಿಯೂತವಿದ್ದರೆ. ಇದರ ಬೇರುಗಳಿಂದ ತಯಾರಿಸಿದ ಕಷಾಯವನ್ನು ಕುಡಿಯಬಹುದು. ಅದರಲ್ಲಿಯೂ ಈ ಕಷಾಯವನ್ನು ಬೆಳಿಗ್ಗೆ ಕುಡಿದರೆ ತುಂಬಾ ಒಳ್ಳೆಯದು.
  • ಅಮೃತ ಬಳ್ಳಿಯು ಅಪಾಯಕಾರಿ ಜ್ವರಗಳಾದ ಡೆಂಗ್ಯೂ, ಹಂದಿ ಜ್ವರ, ಮಲೇರಿಯಾದಂತಹ ಹಲವಾರು ಮಾರಣಾಂತಿಕ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
  • ಅಲ್ಲದೆ ಈ ಬಳ್ಳಿಯೂ ನಿಮ್ಮ ಒತ್ತಡ ಮತ್ತು ಆತಂಕವನ್ನು ಶಮನಗೊಳಿಸುತ್ತದೆ.
  • ಅಮೃತ ಬಳ್ಳಿ ರಸವು ಚರ್ಮವನ್ನು ಪೋಷಿಸಲು ಮತ್ತು ವಯಸ್ಸಾದ ಗೋಚರ ಚಿಹ್ನೆಗಳನ್ನು ಕಡಿಮೆ ಮಾಡಲು ಕಾಲಜನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 5:52 pm, Wed, 7 August 24