ವಿಟಮಿನ್ ಸಿ ನೀರಿನಲ್ಲಿ ಕರಗುವ ಪೋಷಕಾಂಶವಾಗಿದ್ದು, ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳ ಪ್ರಕಾರ, ಅದರ ಪೂರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಇದನ್ನು ಆಹಾರದ ರೂಪದಲ್ಲಿ ತಿನ್ನುವುದು ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿದ್ದರೂ, ಪೂರಕಗಳ ರೂಪದಲ್ಲಿ ಮಿತಿಮೀರಿದ ಸೇವನೆಯು ಗೆಡ್ಡೆಗಳಲ್ಲಿ ಹೊಸ ರಕ್ತನಾಳಗಳ ರಚನೆಗೆ ಕಾರಣವಾಗಿ, ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಇದಲ್ಲದೇ ವಿಟಮಿನ್ ಸಿ ಪೂರಕಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಗೆಡ್ಡೆಗಳನ್ನು ಪೋಷಿಸುತ್ತದೆ ಮತ್ತು ಅವುಗಳನ್ನು ಹತ್ತಿರದ ಅಂಗಗಳಿಗೆ ಹರಡಲು ಸಹಾಯ ಮಾಡುತ್ತದೆ.
ಸಂಶೋಧಕರ ಪ್ರಕಾರ, ವಿಟಮಿನ್ ಸಿ ಪೂರಕಗಳಲ್ಲಿನ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಾಗ, ಹೊಸ ರಕ್ತನಾಳಗಳ ರಚನೆಯನ್ನು ಬೆಂಬಲಿಸುತ್ತದೆ, ವಿಶೇಷವಾಗಿ ಶ್ವಾಸಕೋಶದ ಗೆಡ್ಡೆಗಳಲ್ಲಿ. ಇದರಿಂದಾಗಿ ಗೆಡ್ಡೆಗಳ ಹರಡುವಿಕೆಗೆ ಕೊಡುಗೆ ನೀಡಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ. ಇದಲ್ಲದೇ ಸ್ತನ, ಶ್ವಾಸಕೋಶ ಮತ್ತು ಮೂತ್ರಪಿಂಡದ ಗೆಡ್ಡೆಗಳು ರೂಪುಗೊಂಡ ಸಮಯದಲ್ಲಿ ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ತಿಳಿದು ಬಂದಿರುವ ಅಂಶಗಳ ಪ್ರಕಾರ ಜನರು ಪ್ರೋಟೀನ್ ಅನ್ನು ಹೆಚ್ಚಿಸುವುದಕ್ಕಾಗಿ ಉತ್ಕರ್ಷಣ ನಿರೋಧಕಗಳ ಮಿತಿಮೀರಿದ ಸೇವನೆಯನ್ನು ಮಾಡುತ್ತಾರೆ. ಇದು ಜೀನ್‌ಗಳ ಅತಿಯಾದ ಒತ್ತಡಕ್ಕೆ ಕಾರಣವಾಗಿ, ಹೆಚ್ಚಿನ ರಕ್ತನಾಳಗಳು ರೂಪುಗೊಳ್ಳುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
ಈ ಹೆಚ್ಚುವರಿ ರಕ್ತನಾಳಗಳು ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪಲು ಸಹಾಯ ಮಾಡುತ್ತದೆ. ಮೂತ್ರಪಿಂಡ, ಚರ್ಮ ಮತ್ತು ಸ್ತನ ಕ್ಯಾನ್ಸರ್‌ಗಳ ಸಂದರ್ಭದಲ್ಲಿಯೂ ಇದು ಸಂಭವಿಸಬಹುದು. ಈ ಅಧ್ಯಯನವು ಜರ್ನಲ್ ಆಫ್ ಕ್ಲಿನಿಕಲ್ ಇನ್ವೆಸ್ಟಿಗೇಶನ್‌ನಿಂದ ತಿಳಿದು ಬಂದಿದೆ. ಆದ್ದರಿಂದ ಅಧ್ಯಯನವೊಂದರ ಪ್ರಕಾರ ದಿನಕ್ಕೆ 65-90 ಗ್ರಾಂ. ವಿಟಮಿನ್ ಸಿ ಪೂರಕ ತೆಗೆದುಕೊಳ್ಳಬೇಕು . ದಿನವೊಂದರಲ್ಲಿ 2000 ಗ್ರಾಂ ಗಳಷ್ಟು ವಿಟಮಿನ್ ಸಿ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿದುಬಂದಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: