Coronavirus: ಪ್ಲಾಸ್ಮಾ ಚಿಕಿತ್ಸೆಯು ಕೊರೊನಾ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡುತ್ತದೆ? ಇಲ್ಲಿದೆ ವಿವರ

| Updated By: ಆಯೇಷಾ ಬಾನು

Updated on: Apr 29, 2021 | 8:05 AM

ನೀವು ಕೊವಿಡ್​ನಿಂದ ಚೇತರಿಸಿಕೊಂಡಿದ್ದರೆ ಮತ್ತು ನಿಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಬಯಸಿದ್ದರೆ, ಅಥವಾ ಪ್ಲಾಸ್ಮಾ ದಾನಿಗಾಗಿ ಯಾರಾದರೂ ಹುಡುಕುತ್ತಿದ್ದರೆ, ಪ್ಲಾಸ್ಮಾ ದಾನ ಮಾಡುವುದು ಹೇಗೆ? ಯಾರು ದಾನ ಮಾಡಲು ಅರ್ಹರು ಎಂಬುದನ್ನು ಮೊದಲು ತಿಳಿದುಕೊಳ್ಳುವವರೆಗೆ ಪ್ಲಾಸ್ಮಾ ದಾನಕ್ಕೆ ಮುಂದಾಗಬೇಡಿ.

Coronavirus: ಪ್ಲಾಸ್ಮಾ ಚಿಕಿತ್ಸೆಯು ಕೊರೊನಾ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡುತ್ತದೆ? ಇಲ್ಲಿದೆ ವಿವರ
ಪ್ಲಾಸ್ಮಾ ಥೆರೆಪಿ
Follow us on

ಇತ್ತೀಚಿಗೆ ಕೊರೊನಾ ವೈರಸ್​ ಪ್ರಕರಣಗಳು ಉಲ್ಬಣಗೊಳುತ್ತಿದ್ದು, ಇದು ವೈದ್ಯಕೀಯ ಸಂಪನ್ಮೂಲಗಳ ಬೇಡಿಕೆಗಳನ್ನು ಹೆಚ್ಚಿಸಿದೆ. ಪ್ರಸ್ತುತ ಸೋಂಕು ಪ್ರಕರಣಗಳ ಹೆಚ್ಚುವಿಕೆಯಿಂದ ಆಮ್ಲಜನಕ ಸಿಲಿಂಡರ್​ಗಳು, ಸಾಂದ್ರಕಗಳು, ಆ್ಯಂಟಿವೈರಸ್​ ಔಷಧಿಗಳು ಸೇರಿದಂತೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ತೀವ್ರ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಹೆಚ್ಚು ಅವಶ್ಯಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ನೀವು ಕೊವಿಡ್​ನಿಂದ ಚೇತರಿಸಿಕೊಂಡಿದ್ದರೆ ಮತ್ತು ನಿಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಬಯಸಿದ್ದರೆ, ಅಥವಾ ಪ್ಲಾಸ್ಮಾ ದಾನಿಗಾಗಿ ಯಾರಾದರೂ ಹುಡುಕುತ್ತಿದ್ದರೆ, ಪ್ಲಾಸ್ಮಾ ದಾನ ಮಾಡುವುದು ಹೇಗೆ? ಯಾರು ದಾನ ಮಾಡಲು ಅರ್ಹರು ಎಂಬುದನ್ನು ಮೊದಲು ತಿಳಿದುಕೊಳ್ಳುವವರೆಗೆ ಪ್ಲಾಸ್ಮಾ ದಾನಕ್ಕೆ ಮುಂದಾಗಬೇಡಿ.

ಪ್ಲಾಸ್ಮಾ ಚಿಕಿತ್ಸೆ ಎಂದರೇನು?
ಪ್ಲಾಸ್ಮಾ ಥೆರೆಪಿ ಒಂದು ವೈದ್ಯಕೀಯ ವಿಧಾನ. ಇದರಲ್ಲಿ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತವನ್ನು ಹೊರತೆಗೆದು ರೋಗದಿಂದ ಬಳಲುತ್ತಿರುವ ರೋಗಿಗೆ ನೀಡಲಾಗುತ್ತದೆ. ಆಗ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ರೋಗದ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ. ಇದರಿಂದ ರೋಗ ಲಕ್ಷಣಗಳಿಂದ ಹೊರಬರಲು ಸಕಹಾಯವಾಗುತ್ತದೆ ಮತ್ತು ರೋಗಿಯು ಬಹುಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

ಕೊವಿಡ್​ 19 ಮತ್ತು ಪ್ಲಾಸ್ಮಾ ಚಿಕಿತ್ಸೆ
ಅದೇ ರೀತಿ ಕೊವಿಡ್​ 19 ರೋಗಿಗಳ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಬಹುದು. ತೀವ್ರವಾದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಚುಚ್ಚು ಮದ್ದು ನೀಡಿದಾಗ ರಕ್ತದಲ್ಲಿನ ವೈರಸ್​ನಿಂದ ಹೋರಾಡಲು ಸಹಾಯವಾಗುತ್ತದೆ. ಮತ್ತು ಚುಚ್ಚು ಮದ್ದು ದೇಹವನ್ನು ಶಕ್ತಗೊಳಿಸುತ್ತದೆ. ಪ್ಲಾಸ್ಮಾ ಚಿಕಿತ್ಸೆಯು ನಿಜವಾಗಿಯೂ ರೋಗಿಯನ್ನು ಗುಣಪಡಿಸುತ್ತದೆ ಎಂಬುದರ ಕುರಿತಾಗಿ ಯಾವುದೇ ದೃಢೀಕರಣವಿಲ್ಲದಿದ್ದರೂ, ಅಧ್ಯಯನಗಳು ಕೊವಿಡ್​19ನಿಂದ ಚೇತರಿಸಿಕೊಳ್ಳಲು ಪ್ಲಾಸ್ಮಾ ಚಿಕಿತ್ಸೆ ಸಹಾಯ ಮಾಡುತ್ತದೆ. ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ.

ಪ್ಲಾಸ್ಮಾ ಯಾರು ದಾನ ಮಾಡಬಹುದು?
ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ಕೇಂದ್ರವು ಅನುಮೋದಿಸಿದೆ. ಕೊರೊನಾ ವೈರಸ್​ನಿಂದ ಚೇತರಿಸಿಕೊಂಡ 28 ರಿಂದ 30 ದಿನಗಳ ನಂತರವೇ ತಮ್ಮ ಪ್ಲಾಸ್ಮಾವನ್ನು ದಾನ ಮಾಡಬಹುದು. ಪ್ಲಾಸ್ಮಾ ದಾನ ಮಾಡಲು ಬಯಸಿದವರು 18 ರಿಂದ 60 ವರ್ಷದೊಳಗಿನವರಾಗಿರಬೇಕು. 50 ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿರಬೇಕು. ರೋಗ ಲಕ್ಷಣಗಳನ್ನು ಅನುಭವಿಸಿದ ಜನರು (ಜ್ವರ, ಶೀತ, ಕೆಮ್ಮು ಇತ್ಯಾದಿ) ಪ್ಲಾಸ್ಮಾ ದಾನ ಮಾಡಬೇಕು. ಲಸಿಕೆ ಪಡೆದ ಅವರು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಮತ್ತು ಕೊರೊನಾ ಎರಡನೇ ಅಲೆಯ ಮಟ್ಟವನ್ನು ಹೊಡೆದೋಡಿಸಲು ಹೆಚ್ಚಿನ ಶಕ್ತಿ ಅವರಲ್ಲಿರಬಹುದು.

ಪ್ಲಾಸ್ಮಾ ಚಿಕಿತ್ಸೆ ಕೊವಿಡ್​ 19 ರೋಗಿಗಳನ್ನು ಗುಣಪಡಿಸಬಹುದು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದೇ?
ಕೊರೊನಾ ಸೋಂಕು ಹೆಚ್ಚುವಿಕೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯು ಕೆಲವು ಸಂದರ್ಭಗಳಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಹೆಚ್ಚುತ್ತಿರುವ ಬೇಡಿಕೆ, ಅದಾಗಿಯೂ, ಇದು ನಿಜವಾಗಿಯೂ ಮರಣ ಪ್ರಮಾಣವನ್ನು ನಿಗ್ರಹಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಈ ಹಿಂದೆ ವೈದ್ಯಕೀಯ ವೃತ್ತಿಪರರು ಪ್ಲಾಸ್ಮ ಚಿಕಿತ್ಸೆ ‘ಹಳೆಯದು’ ಎಂದು ಕರೆದಿದ್ದಾರೆ. ಮತ್ತು ಪ್ಲಾಸ್ಮಾ ಚಿಕಿತ್ಸೆಯು ಕೊವಿಡ್​19 ಸಂಬಂಧಿಸಿದ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್​) ಹೇಳಿಕೊಂಡಿತ್ತು.

ಯಾವುದೇ ಅಪಾಯಗಳಿವೆಯೇ?
ಪ್ಲಾಸ್ಮಾ ಚಿಕಿತ್ಸೆಗೆ ಸಂಬಂಧಿಸಿದಂತೆಯೇ ಯಾವುದೇ ಅಪಾಯ ಕಂಡುಬಂದಿಲ್ಲವಾದರೂ, ವೈದ್ಯಕೀಯ ವೃತ್ತಿಪರರ ಅಭಿಪ್ರಾಯದಂತೆ ಈ ವಿಧಾನವನ್ನು ನಡೆಸುವುದು ಬಹಳ ಮುಖ್ಯ.

ಪ್ಲಾಸ್ಮಾವನ್ನು ದಾನ ಮಾಡಲು ಯೋಚಿಸುತ್ತಿದ್ದರೆ ನೀವು ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದ ಕೆಲವು ವಿಷಯಗಳಿವೆ. ಮಾಡಲೇಬೇಕಾದ ಕೆಲವು ಪಟ್ಟಿಯನ್ನು ಕೇಂದ್ರವು ಒದಗಿಸಿದೆ.

ಕೊವಿಡ್​19 ನಕಾರಾತ್ಮಕ ವರದಿಯ (ಆರ್​ಟಿಪಿಸಿಆರ್​)ನಕಲನ್ನು ಮತ್ತು ಆಧಾರ್​ ಕಾರ್ಡ್​ ನಕಲನ್ನು ಹೊಂದಿರಲು ಮರೆಯದಿರಿ.

ನೀವು ಕೊವಿಡ್​ ಲಕ್ಷಣದಿಂದ ಹೊರಬಂದಿದ್ದರೆಕೊವಿಡ್​ ಪಾಸಿಟಿವ್​ ವರದಿಯ 14 ದಿನದ ನಂತರವೇ ದಾನ ಮಾಡಿ. ನೀವು ರೋಗ ಲಕ್ಷಣಗಳನ್ನು ಹೊಂದಿದ್ದರೆ ವೈದ್ಯರ ನಿರ್ಣಯದ ನಂತರ ದಾನ ಮಾಡಬೇಕು.

ಗರ್ಭಿಣಿ ಮಹಿಳೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೂ ಪ್ಲಾಸ್ಮಾ ದಾನ ಮಾಡಲು ಸಾಧ್ಯವಿಲ್ಲ.

ಪ್ಲಾಸ್ಮಾ ದಾನ ಮಾಡುವ ಮುಂಚಿತವಾಗಿ ಯಾವುದೇ ಮಾಹಿತಿಗಾಗಿ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿ.

ಇದನ್ನೂ ಓದಿ: ಕೊವಿಡ್​ನಿಂದ ಚೇತರಿಸಿಕೊಂಡ ತೆಂಡೂಲ್ಕರ್; ಅಗತ್ಯವಿರುವವರಿಗೆ ಪ್ಲಾಸ್ಮಾ ನೀಡುತ್ತೇನೆ ಎಂದ ಸಚಿನ್