Fenugreek: ಮೆಂತ್ಯೆಯು ಈ ಸಮಸ್ಯೆಗಳಿಗೆ ದಿವ್ಯೌಷಧ, ಪ್ರಯೋಜನಗಳ ಬಗ್ಗೆ ತಿಳಿಯಿರಿ

ಪ್ರಸ್ತುತ ದಿನಗಳಲ್ಲಿ ಜನರ ಜೀವನಶೈಲಿ ತುಂಬಾ ಕಳಪೆಯಾಗುತ್ತಾ ಹೋಗುತ್ತಿದೆ. ಪ್ರತಿ ಮನೆಯಲ್ಲೂ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಅಥವಾ ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಗಳು ಇವೆ.

Fenugreek: ಮೆಂತ್ಯೆಯು ಈ ಸಮಸ್ಯೆಗಳಿಗೆ ದಿವ್ಯೌಷಧ, ಪ್ರಯೋಜನಗಳ ಬಗ್ಗೆ ತಿಳಿಯಿರಿ
Fenugreek
Updated By: ನಯನಾ ರಾಜೀವ್

Updated on: Sep 17, 2022 | 7:00 AM

ಪ್ರಸ್ತುತ ದಿನಗಳಲ್ಲಿ ಜನರ ಜೀವನಶೈಲಿ ತುಂಬಾ ಕಳಪೆಯಾಗುತ್ತಾ ಹೋಗುತ್ತಿದೆ. ಪ್ರತಿ ಮನೆಯಲ್ಲೂ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಅಥವಾ ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಗಳು ಇವೆ.

ಇದಕ್ಕೆ ದೊಡ್ಡ ಕಾರಣವೆಂದರೆ ಅನಾರೋಗ್ಯಕರ ಆಹಾರ ಮತ್ತು ನೀರಸ ದಿನಚರಿ ಎಂದು ತಜ್ಞರು ಹೇಳುತ್ತಾರೆ. ಅನೇಕ ಆರೋಗ್ಯ ಸಮಸ್ಯೆಗಳ ಜೊತೆಗೆ ಜನರು ಒತ್ತಡವನ್ನೂ ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್‌ಗಳ ಅತಿಯಾದ ಸೇವನೆಯಿಂದ ಯುವಜನರು ಈ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ತುಂಬಾ ಆತಂಕಕಾರಿಯಾಗಿದೆ.

ಆದರೆ, ದಿನಚರಿ, ಸರಿಯಾದ ಆಹಾರ ಕ್ರಮ, ದಿನನಿತ್ಯದ ವ್ಯಾಯಾಮದ ಮೂಲಕ ಇದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು. ಹೀಗೆ ಮಾಡುವುದರಿಂದ ಶುಗರ್, ಕೊಲೆಸ್ಟ್ರಾಲ್, ರಕ್ತದೊತ್ತಡ ಹೆಚ್ಚಾಗುವಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಈ ಸಮಯದಲ್ಲಿ, ನೀವು ನಿಮ್ಮ ಆಹಾರದಲ್ಲಿ ಈ ಪ್ರಯೋಜನಕಾರಿ ತರಕಾರಿಗಳು ಮತ್ತು ಬೀಜಗಳನ್ನು ಸೇರಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಮೆಂತ್ಯೆ ಮತ್ತು ಮೆಂತ್ಯೆ ಬೀಜಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಮೆಂತ್ಯವು ತುಂಬಾ ಶಕ್ತಿಯುತವಾದ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಪೋಷಕಾಂಶವಾದ ಸ್ಟೀರಾಯ್ಡ್ ಸಪೋನಿನ್ ಅನ್ನು ಹೊಂದಿರುತ್ತದೆ.

ಕ್ಯಾಲ್ಸಿಯಂ, ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ನಿಯಾಸಿನ್, ಫೈಬರ್, ಪ್ರೋಟೀನ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮೆಂತ್ಯ ಮತ್ತು ಬೀಜಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. ಆಹಾರದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇರಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಮೆಂತ್ಯವು ಉತ್ಕರ್ಷಣ ನಿರೋಧಕ, ಸ್ಟೀರಾಯ್ಡ್ ಸಪೋನಿನ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಇದೆ. ಇದು ಕಣ್ಣು ಮತ್ತು ಚರ್ಮಕ್ಕೂ ಒಳ್ಳೆಯದು. ಮೆಂತ್ಯೆಯು ಮಧುಮೇಹ ರೋಗಿಗಳಿಗೆ ಆಯುರ್ವೇದ ಔಷಧವಾಗಿ ಕೆಲಸ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.