Dengue and Chikungunya: ಮಕ್ಕಳಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ತಡೆಗಟ್ಟಲು ಏನು ಮಾಡಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2024 | 2:12 PM

ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ. ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲೂ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಬೇಗನೆ ಕಾಯಿಲೆಗಳು ಬರುವ ಸಂಭವ ಇರುತ್ತದೆ. ಡೆಂಗ್ಯೂ ಜೊತೆಗೆ ಮಳೆಗಾಲದಲ್ಲಿ ಕಂಡು ಬರುವ ಇನ್ನೊಂದು ರೋಗವೆಂದರೆ ಅದು ಚಿಕನ್ ಗುನ್ಯಾ. ಇದು ಒಂದು ವೈರಲ್ ಸೋಂಕಾಗಿದ್ದು ಸೊಳ್ಳೆಗಳಿಂದ ಮನುಷ್ಯರಿಗೆ ಹರಡಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಹಾಗಾಗಿ ದೊಡ್ಡವರ ಜೊತೆಗೆ ಮಕ್ಕಳನ್ನು ಕೂಡ ಆರೋಗ್ಯವಾಗಿ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

Dengue and Chikungunya: ಮಕ್ಕಳಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ತಡೆಗಟ್ಟಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
Follow us on

ಇತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿದೆ. ಅದರಲ್ಲಿಯೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ. ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲೂ ಡೆಂಗ್ಯೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಬೇಗನೆ ಕಾಯಿಲೆಗಳು ಬರುವ ಸಂಭವ ಇರುತ್ತದೆ. ಡೆಂಗ್ಯೂ ಜೊತೆಗೆ ಮಳೆಗಾಲದಲ್ಲಿ ಕಂಡು ಬರುವ ಇನ್ನೊಂದು ರೋಗವೆಂದರೆ ಅದು ಚಿಕನ್ ಗುನ್ಯಾ. ಇದು ಒಂದು ವೈರಲ್ ಸೋಂಕಾಗಿದ್ದು ಸೊಳ್ಳೆಗಳಿಂದ ಮನುಷ್ಯರಿಗೆ ಹರಡಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಹಾಗಾಗಿ ದೊಡ್ಡವರ ಜೊತೆಗೆ ಮಕ್ಕಳನ್ನು ಕೂಡ ಆರೋಗ್ಯವಾಗಿ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಈ ಸಮಯದಲ್ಲಿ ನಾವು ಮಕ್ಕಳನ್ನು ಎಷ್ಟು ಆರೋಗ್ಯವಾಗಿ ನೋಡಿಕೊಂಡರು ಸಾಕಾಗುವುದಿಲ್ಲ. ಹಾಗಾಗಿ ಅವರ ಆಹಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ದೊಡ್ಡವರಂತೆ ಮಕ್ಕಳಿಗೆ ರೋಗಲಕ್ಷಣಗಳನ್ನು ತಡೆಯುವ ಶಕ್ತಿ ಇರುವುದಿಲ್ಲ ಹಾಗಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ಮೊದಲು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

*ಮಕ್ಕಳಿಗೆ ವಿಟಮಿನ್ ‘ ಸಿ ‘ ಮತ್ತು ವಿಟಮಿನ್ ‘ ಇ ‘ ಅಂಶ ಹೆಚ್ಚಾಗಿರುವ ಆಹಾರಗಳನ್ನು ನೀಡಿ.

*ಖರೀದ ಅಥವಾ ಹೊರಗಿನ ಆಹಾರಗಳನ್ನು ನೀಡಬೇಡಿ. ಆದಷ್ಟು ಮನೆಯಲ್ಲಿಯೇ ಬಿಸಿ ಬಿಸಿಯಾಗಿ ಮಾಡಿದ ಆಹಾರಗಳನ್ನು ನೀಡಿ.

*ಮಗುವನ್ನು ಆಟವಾಡಲು ಹೊರಗಡೆ ಬಿಡಬೇಡಿ. ಅದರಲ್ಲಿಯೂ ನಿಮ್ಮ ಸುತ್ತಮುತ್ತಲಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಮಕ್ಕಳನ್ನು ಸ್ವಲ್ಪ ದಿನದ ಮಟ್ಟಿಗೆ ಆಟವಾಡಲು ಹೋಗುವುದನ್ನು ತಡೆಯಿರಿ.

*ಮಕ್ಕಳಿಗೆ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ ಮಕ್ಕಳಿಗೆ ಹೆಚ್ಚು ಹೆಚ್ಚು ದ್ರವ ರೂಪದ ಆಹಾರಗಳನ್ನು ನೀಡುತ್ತಿರಿ.

*ಮಕ್ಕಳಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ನೀಡಿ.

ಇದನ್ನೂ ಓದಿ: ಈ ಕಷಾಯ ಡೆಂಗ್ಯೂ ಜ್ವರವನ್ನು ನಿವಾರಿಸುತ್ತದೆ! ಮಾಡುವ ವಿಧಾನ ಇಲ್ಲಿದೆ

*ಮಲಗುವಾಗ ಸೊಳ್ಳೆ ಪರದೆ ಹಾಕಿ ಮಕ್ಕಳನ್ನು ಮಲಗಿಸಿ, ಸೊಳ್ಳೆ ಕಚ್ಚದಂತೆ ಕ್ರೀಮ್‌ಗಳನ್ನು ದೇಹಕ್ಕೆ ಹಚ್ಚಿ. (ಅದಕ್ಕೂ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ)

*ಹಸಿರು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೆ ಬಳಸಿ. ಇದರಿಂದ ಮಕ್ಕಳ ಆರೋಗ್ಯ ಸುಧಾರಣೆಯಾಗುತ್ತದೆ. ಜೊತೆಗೆ ಡೆಂಗ್ಯೂ, ಚಿಕನ್‌ ಗುನ್ಯಾ ವಿರುದ್ಧ ಹೋರಾಡುವಂತಹ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.

*ಮನೆಯಲ್ಲಿರುವ ಮಕ್ಕಳಿಗೆ ಮೈ ತುಂಬಾ ಬಟ್ಟೆ ಹಾಕಿ, ಸೊಳ್ಳೆಗಳು ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ