Chocolate Coffee: ಮನೆಯಲ್ಲಿ ಸುಲಭವಾಗಿ ಮಾಡಿ ಚಾಕಲೇಟ್ ಕಾಫಿ; ಮಾಡುವ ವಿಧಾನ ಇಲ್ಲಿದೆ

| Updated By: sandhya thejappa

Updated on: Jun 15, 2021 | 9:04 AM

ಎಷ್ಟೇ ಹಠ ಮಾಡುತ್ತಿದ್ದರೂ ಮಕ್ಕಳಿಗೆ ಒಂದು ಚಾಕಲೇಟ್ ನೀಡಿದರೆ ಸಾಕು, ತಮ್ಮ ಪಾಡಿಗೆ ಚಾಕಲೇಟ್ ತಿನ್ನುತ್ತ ಸುಮ್ಮನೆ ಇರುತ್ತವೆ. ಎಲ್ಲರು ಇಷ್ಟಪಡುವ ಚಾಕಲೇಟ್​ನಲ್ಲಿ ಕಾಫಿ ಮಾಡುವುದು ಹೇಗೆ ಅಂತ ನಿಮಗೆ ಗೊತ್ತಾ? ತಿಳಿಯದಿದ್ದರೆ ಮಾಡುವ ವಿಧಾನವನ್ನು ತಿಳಿಸಲಾಗಿದೆ.

Chocolate Coffee: ಮನೆಯಲ್ಲಿ ಸುಲಭವಾಗಿ ಮಾಡಿ ಚಾಕಲೇಟ್ ಕಾಫಿ; ಮಾಡುವ ವಿಧಾನ ಇಲ್ಲಿದೆ
ಚಾಕಲೇಟ್ ಕಾಫಿ
Follow us on

ಚಾಕಲೇಟ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟಪಡುವ ತಿಂಡಿ ಎಂದರೆ ಅದು ಚಾಕಲೇಟ್. ಮಕ್ಕಳನ್ನು ಸಮಧಾನ ಪಡಿಸುವ ಶಕ್ತಿ ಚಾಕಲೇಟ್​ಗೆ ಮಾತ್ರ ಅನಿಸುತ್ತೆ. ಎಷ್ಟೇ ಹಠ ಮಾಡುತ್ತಿದ್ದರೂ ಮಕ್ಕಳಿಗೆ ಒಂದು ಚಾಕಲೇಟ್ ನೀಡಿದರೆ ಸಾಕು, ತಮ್ಮ ಪಾಡಿಗೆ ಚಾಕಲೇಟ್ ತಿನ್ನುತ್ತ ಸುಮ್ಮನೆ ಇರುತ್ತವೆ. ಎಲ್ಲರು ಇಷ್ಟಪಡುವ ಚಾಕಲೇಟ್​ನಲ್ಲಿ ಕಾಫಿ ಮಾಡುವುದು ಹೇಗೆ ಅಂತ ನಿಮಗೆ ಗೊತ್ತಾ? ತಿಳಿಯದಿದ್ದರೆ ಮಾಡುವ ವಿಧಾನವನ್ನು ತಿಳಿಸಲಾಗಿದೆ.

ಚಾಕಲೇಟ್ ಕಾಫಿ ಮಾಡಲು ಬೇಕಾಗುವ ಸಾಮಾಗ್ರಿಗಳು
200 ಗ್ರಾಂ ಡಾರ್ಕ್ ಚಾಕಲೇಟ್ (Dark Chocolate)
4 ಕಪ್ ಹಾಲು (Milk)
ಅರ್ಧ ಕಪ್ ವಿಪ್ಪಡ್ ಕ್ರೀಂ (Whipped Cream)
ಒಂದು ಚಮಚ ಚಾಕಲೇಟ್ ಚಿಪ್ಸ್ (Chocolate Chips)
4 ಚಮಚ ಕಾಫಿ ಪುಡಿ (Coffee Powder)
4 ಚಮಚ ಸಕ್ಕರೆ (Sugar)
4 ಐಸ್ ಕ್ಯೂಬ್ (Ice Cubes)

ಮೊದಲಿಗೆ ಚಾಕಲೇಟ್​ನ ಚಿಕ್ಕದಾಗಿ ಪುಡಿ ಮಾಡಬೇಕು. ಪುಡಿ ಮಾಡಿದ ಚಾಕಲೇಟ್​ನ ಒಂದು ಬೌಲ್​ಗೆ ಹಾಕಿ. ಪುಡಿಯಾದ ಚಾಕಲೇಟ್​ಗೆ ಸ್ವಲ್ಪ ಹಾಲು, ಕಾಫಿ ಪುಡಿ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಆ ಬಳಿಕ ಮಿಶ್ರಣವನ್ನು ಒಲೆಯಲ್ಲಿ ಒಂದರಿಂದ ಎರಡು ನಿಮಿಷ ಇಟ್ಟು ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಮಿಶ್ರಣಕ್ಕೆ ಹಾಲು ಮತ್ತು ಐಸ್ ಕ್ಯೂಬ್ ಹಾಕಿ ಪುನಃ ಮಿಶ್ರಣ ಮಾಡಬೇಕು.

ಮಿಶ್ರಣವನ್ನು ಒಂದು ಲೋಟಕ್ಕೆ ಸುರಿಯಿರಿ. ಆಮೇಲೆ ವಿಪ್ಪಡ್ ಕ್ರೀಂ ಮತ್ತು ಚಾಕೊ ಚಾಕಲೇಟ್ ಚಿಪ್ಸ್​ನ ಸೇರಿಸಿದರೆ ಚಾಕಲೇಟ್ ಕಾಫಿ ಸಿದ್ಧವಾಗುತ್ತದೆ. ಕಾಫಿಯಲ್ಲಿ ಕೆಫೀನ್, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಮ್ ಮುಂತಾದ ಗುಣಗಳಿವೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಕೊಬ್ಬನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ದೇಹದ ತೂಕ ಇಳಿಸಲು ವ್ಯಾಯಾಮ ಮಾಡುವ ಅರ್ಧ ಘಂಟೆಯ ಮೊದಲು ಕಾಫಿ ಸೇವಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

Health Tips: ನೀವು ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ

(How to make Chocolate Coffee in home)