AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನೀವು ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ

ಅರ್ಧ ತಲೆನೋವು ಕಾಣಿಸಿಕೊಂಡಾಗ ಹಣೆಯ ಭಾಗಕ್ಕೆ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. ಮನೆಯಲ್ಲಿದ್ದ ಔಷಧಿಗಳನೆಲ್ಲಾ ಹಚ್ಚುತ್ತಾರೆ. ಅರ್ಧ ತಲೆನೋವಿನಿಂದ ಮನಸ್ಸಿಗೆ ಕಿರಿ ಕಿರಿಯಾಗುತ್ತದೆ. ಕೆಲಸ ಮಾಡಲು ಆಸಕ್ತಿ ಇರಲ್ಲ. ಊಟ ಬೇಡ ಅಂತ ಅನಿಸುತ್ತೆ. ತಲೆನೋವು ತಡೆದುಕೊಳ್ಳಲಾಗದೆ ಮಾತ್ರೆನೂ ತಿನ್ನುತ್ತಾರೆ.

Health Tips: ನೀವು ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ
ಸಾಂದರ್ಭಿಕ ಚಿತ್ರ
sandhya thejappa
|

Updated on: Jun 13, 2021 | 8:50 AM

Share

ಮನುಷ್ಯನಿಗೆ ಯಾವುದೇ ನೋವುಗಳಿರಬಹುದು, ಅದನ್ನು ಸಹಿಸಿಕೊಳ್ಳುವುದು ಆತನಿಗೆ ಕಷ್ಟವೇ ಆಗಿರುತ್ತದೆ. ಒಂದೊಂದು ನೋವಿನಿಂದ ಬಳಲುವವರು ಆ ನೋವು ಯಾರಿಗೂ ಬೇಡಪ್ಪ ಅಂತಾರೆ. ಆದರೆ ಪ್ರತಿಯೊಂದು ನೋವು ಅವರಿಗೆ ಮಾತ್ರ ಗೊತ್ತಿರುತ್ತೆ. ಎಲ್ಲರಿಗೂ ಅವರು ಅನುಭವಿಸುತ್ತಿರುವ ನೋವು ದೊಡ್ಡದಾಗಿರುತ್ತದೆ. ಅದೇನೆ ಇರಲಿ. ಈ ಅರ್ಧ ತಲೆನೋವು ಅಥವಾ ಮೈಗ್ರೇನ್ ಮಾತ್ರ ಇಡೀ ದಿನದ ಸಂತೋಷವನ್ನೇ ಕಿತ್ತುಕೊಳ್ಳುವುದರಲ್ಲಿ ಅನುಮಾನವಿಲ್ಲ. ತಲೆಗೆ ಏನಾದರೂ ಬಡಿದುಕೊಳ್ಳುವಷ್ಟು ನೋವಾಗುತ್ತಿರುತ್ತದೆ. ಯಾರಾದರೂ ಮಾತನಾಡಿದರೆ ಕೋಪ ಬರುತ್ತೆ.

ಅರ್ಧ ತಲೆನೋವು ಕಾಣಿಸಿಕೊಂಡಾಗ ಹಣೆಯ ಭಾಗಕ್ಕೆ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಕೊಳ್ಳುತ್ತಾರೆ. ಮನೆಯಲ್ಲಿದ್ದ ಔಷಧಿಗಳನೆಲ್ಲಾ ಹಚ್ಚುತ್ತಾರೆ. ಅರ್ಧ ತಲೆನೋವಿನಿಂದ ಮನಸ್ಸಿಗೆ ಕಿರಿ ಕಿರಿಯಾಗುತ್ತದೆ. ಕೆಲಸ ಮಾಡಲು ಆಸಕ್ತಿ ಇರಲ್ಲ. ಊಟ ಬೇಡ ಅಂತ ಅನಿಸುತ್ತೆ. ತಲೆನೋವು ತಡೆದುಕೊಳ್ಳಲಾಗದೆ ಮಾತ್ರೆನೂ ತಿನ್ನುತ್ತಾರೆ. ಒಟ್ಟಾರೆ ದಿನ ಪೂರ್ತಿ ತಲೆ ನೋವಿನಿಂದ ಕಳೆದುಹೋಗಿ ಸಂತೋಷದ ಕ್ಷಣಗಳು ಹಾಳಾಗುತ್ತದೆ. ಈ ಅರ್ಧ ತಲೆನೋವಿಗೆ ಮದ್ದು ನಮ್ಮ ಕೈಯಲ್ಲೇ ಇರುತ್ತೆ.

ಯೋಗ ಸರ್ವ ಕಾಯಿಲೆಗೆ ಯೋಗ ಮದ್ದಿದ್ದಂತೆ. ಬೆಳಿಗ್ಗೆ ಅರ್ಧ ಗಂಟೆಗಳ ಕಾಲ ಯೋಗಾಸನ ಮಾಡಿದರೆ ದಿನಪೂರ್ತಿ ಉಲ್ಲಾಸದಿಂದ ಇರಬಹುದು. ಜೊತೆಗೆ ಅರ್ಧ ತಲೆನೋವಿನಿಂದ ಬಳಲುವವರು ಪ್ರತಿದಿನ ಯೋಗಾಸನ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬೇಕಾದರೆ ಇಂದಿನಿಂದಲೆ ಯೋಗಾಸವನ್ನು ಮಾಡುವುದಕ್ಕೆ ಪ್ರಾರಂಭಿಸಬೇಕು.

ದೇಸಿ ತುಪ್ಪ ವಿಪರೀತ ತಲೆನೋವಿನಿಂದ ಬಳಲುವವರಿಗೆ ದೇಸಿ ತುಪ್ಪ ಹೇಳಿ ಮಾಡಿಸಿದ ಔಷಧಿ. ಮೂಗಿನ ಎರಡು ಹೊರಳೆಗಳಿಗೆ ಪ್ರತಿ ನಿತ್ಯ 2 ರಿಂದ 3 ಹನಿ ದೇಸಿ ತುಪ್ಪವನ್ನು ಹಾಕಿದಾಗ ತಲೆನೋವಿನಿಂದ ಮುಕ್ತರಾಗಬಹುದು. ತಕ್ಷಣ ತಲೆ ನೋವು ಕಡಿಮೆಯಾಗದೆ ಇದ್ದರೂ, ಪ್ರತಿ ನಿತ್ಯ ಈ ರೀತಿ ಮೂಗಿಗೆ ದೇಸಿ ತುಪ್ಪ ಹಾಕಿದರೆ ಫಲಿತಾಂಶ ಬೇಗ ಗೊತ್ತಾಗುತ್ತದೆ. ಜೊತೆಗೆ ತಲೆ ನೋವನ್ನು ದೂರ ಮಾಡಿ ಸಂತೋಷದಿಂದ ಇರಬಹುದು.

ನೀರು ಮತ್ತು ನಿದ್ರೆ ಮನುಷ್ಯ ಪ್ರತಿ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು. ಆರೋಗ್ಯವಾಗಿರಲು ನೀರು ಅನಿವಾರ್ಯ. ಮೈಗ್ರೇನ್​​ನಿಂದ ಬಳಲುವವರು ಜಾಸ್ತಿ ನೀರು ಕುಡಿಯಬೇಕು. ಹೆಚ್ಚು ನೀರನ್ನು ಕುಡಿಯುವುದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ. ಅಲ್ಲದೇ ನಿದ್ರೆ ಸರಿಯಾಗಿ ಆಗದೆ ಇದ್ದರೆ ತಲೆನೋವು ಕಾಣಿಸಿಕೊಳ್ಳುವುದು ಸಹಜ. ಹಾಗಾಗಿ ದಿನ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ಸರಿಯಾಗಿ ನಿದ್ರೆ ಆದರೆ ಕಣ್ಣಿನ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಜೊತೆಗೆ ತಲೆನೋವು ಕಡಿಮೆಯಾಗುತ್ತದೆ.

ಆಹಾರ ಕ್ರಮ ಈಗಿನ ಬ್ಯುಸಿ ಲೈಫ್​ನಲ್ಲಿ ಊಟ ಮಾಡುವುದಕ್ಕೂ ಸಮಯ ಇರಲ್ಲ. ದುಡಿಯುವುದು ಹೊಟ್ಟೆ ಪಾಡಿಗಾದರೂ, ಊಟವನ್ನೆ ಮರೆಯುವಷ್ಟು ಕೆಲಸದಲ್ಲಿ ತೊಡಗಿರುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ ಊಟವನ್ನು ಸರಿಯಾದ ಸಮಯಕ್ಕೆ ಸೇವಿಸದೆ ಇದ್ದರೆ ಹಲವು ಕಾಯಿಲೆಗಳ ಹುಟ್ಟಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಎಷ್ಟೇ ಬ್ಯುಸಿ ಇದ್ದರೂ ಊಟ ಮಾತ್ರ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ಆಹಾರ ದೇಹಕ್ಕೆ ಸರಿಯಾದ ಸಮಯಕ್ಕೆ ಹೋಗದೆ ಇದ್ದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ವಾಂತಿ ಬಂದಂತಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ದೂರವಿಡಲು ಆಹಾರ ಕ್ರಮ ಸರಿಯಾಗಿರಬೇಕು.

ಇದನ್ನೂ ಓದಿ

Health Tips: ಮೊಸರಿನೊಂದಿಗೆ ಇತರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಇದೆಯೇ? ನಿಮ್ಮ ಆಹಾರ ಸೇವನೆ ಬಗ್ಗೆ ಎಚ್ಚರ ಇರಲಿ

Health Tips: ಹಾಲಿನ ಜತೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

(Best solution for reduce Migraine in home)