ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ದೃಷ್ಟಿದೋಷದ ಸಮಸ್ಯೆ ಕಾಡುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಹಾಕಿಕೊಳ್ಳುವ ಪರಿಸ್ಥಿತಿ. ಹೀಗಿರುವಾಗ ಕಣ್ಣಿನ ಆರೋಗ್ಯದ ಕುರಿತಾಗಿ ಯೋಚಿಸಲೇಬೇಕು. ನಿಮ್ಮ ಸೂಕ್ಷ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪೌಷ್ಟಿಕಯುಕ್ತ ಆಹಾರ ಸೇವಿಸುವುದು ಮುಖ್ಯವಾಗಿದೆ. ಆಹಾರ ಪದ್ಧತಿಯಲ್ಲಿ ಸುಧಾರಣೆಯ ಜತೆಗೆ ನಿಮ್ಮ ದೇಹವನ್ನು ಸದೃಢವಾಗಿಸಿಕೊಳ್ಳಿ.
ಉತ್ತಮ ಆಹಾರ ಎಂದರೆ ನಿಮ್ಮ ಆಹಾರ ಪದ್ಧತಿಯಲ್ಲಿ ತಾಜಾ ತರಕಾರಿಗಳಿರಲಿ. ಉತ್ತಮ ಪೌಷ್ಟಿಕಯುಕ್ತ ಹಣ್ಣುಗಳನ್ನು ಸೇವಿಸಿ. ಆರೋಗ್ಯಕ್ಕೆ ಅಗತ್ಯವಿರುವ ದ್ವಿದಳ ಧಾನ್ಯಗಳನ್ನು ಸೇವಿಸಿ. ನೆನೆಸಿದ ಹೆಸರು ಕಾಳು, ಗೋಡಂಬಿ, ಕಡಲೆ, ದ್ರಾಕ್ಷಿ ಇವುಗಳಿಂದಲೂ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜತೆಗೆ ನೀವು ನಿಮ್ಮ ಕಣ್ಣಿನ ಆರೋಗ್ಯದ ಸುರಕ್ಷತೆಗೆ ಏನು ಮಾಡಬೇಕು ಎಂಬುದು ಈ ಕೆಳಗಿನಂತಿದೆ ಪರಿಶೀಲಿಸಿ.
ಕ್ಯಾರೆಟ್ನಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ದೃಷ್ಟಿ ಸುಧಾರಣೆಗೆ ಇದು ತುಂಬಾ ಪ್ರಯೋಜನಕಾರಿ. ವಾರಕ್ಕೆ ಎರಡು ಬಾರಿಯಾದರೂ ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನಿಮ್ಮ ದೇಹದ ಸದೃಢತೆಯ ಜತೆಗೆ ಕಣ್ಣಿನ ಆರೋಗ್ಯ ಸುಧಾರಿಸಲು ಸಹಾಯಕವಾಗಿದೆ.
ಆಮ್ಲಾ ರಸದಲ್ಲಿ ವಿಟಮಿನ್ ಸಿ ಇದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಆಮ್ಲಾ ಜ್ಯೂಸ್ ಕುಡಿಯುವ ಮೂಲಕ ಕಣ್ಣಿನ ಸುರಕ್ಷತೆ ಮಾಡಬಹುದು. ಕಣ್ಣಿನ ಆರೋಗ್ಯಕ್ಕೆ ಆಮ್ಲಾ ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಕೊಳ್ಳಿ. ಜತೆಗೆ ಜೋಳದಲ್ಲಿಯೂ ಸಹ ಕಣ್ಣಿನ ಆರೋಗ್ಯ ಸುಧಾರಿಸುವ ಪೋಷಕಾಂಶಗಳಿರುತ್ತವೆ. ಜೋಳದಲ್ಲಿರುವ ಲುಟೀನ್ನಂತಹ ಪದಾರ್ಥಗಳು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ.
ಹಸಿರು ಸೊಪ್ಪು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿರಲಿ. ಪಾಲಾಕ್ ರಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನೀಷಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಹಾಗಿರುವಾಗ ಪಾಲಾಕ್ನಿಂದ ತಯಾರಿಸುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಅರೋಗ್ಯವನ್ನು ಸುಧಾರಿಸಿಕೊಳ್ಳಿ.
ಇದನ್ನೂ ಓದಿ:
Health Tips: ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು
Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ