ಮೇ ತಿಂಗಳಿನಲ್ಲಿ ದೇಶದ ಅನೇಕ ಪ್ರದೇಶಗಳು ತೀವ್ರ ಶಾಖವನ್ನು ಅನುಭವಿಸುತ್ತಿವೆ. ಇದರಿಂದ ಅನೇಕ ರೋಗಗಳ ಅಪಾಯವೂ ಇದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತಾಪಮಾನ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ಜೊತೆಗೆ ಈ ಋತುವಿನಲ್ಲಿ ಚರ್ಮದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಚರ್ಮದ ಮೇಲೆ ಕೆಂಪು ದದ್ದುಗಳು, ತುರಿಕೆ, ಚರ್ಮ ಸುಡುವಂತಹ ಅನುಭವ ಮತ್ತು ಚರ್ಮ ಕಪ್ಪು ಬಣ್ಣಕ್ಕೆ ತಿರುಗುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಇವೆಲ್ಲಾ ತೊಂದರೆಗಳಿಂದ ರಕ್ಷಣೆ ಪಡೆದುಕೊಳ್ಳುವುದು ಅಗತ್ಯ. ಹಾಗಾದರೆ ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡುವುದು ಹೇಗೆ? ಇಲ್ಲಿದೆ ತಜ್ಞರ ಅಭಿಪ್ರಾಯ.
ಚರ್ಮರೋಗ ತಜ್ಞೆ ಡಾ. ಸೌಮ್ಯ ಹೇಳುವ ಪ್ರಕಾರ “ಈ ಬೇಸಿಗೆಯಲ್ಲಿ ಚರ್ಮದ ಕಾಂತಿ ಹಾಳಾಗುತ್ತದೆ. ಸೂರ್ಯನ ಬೆಳಕು, ಧೂಳು ಮತ್ತು ಅಲರ್ಜಿಗಳಿಂದಾಗಿ ಚರ್ಮ ರೋಗಗಳು ಬರಬಹುದು. ಇನ್ನು ಕೆಲವರ ದೇಹದ ಮೇಲೆ ಕೆಂಪು ದದ್ದುಗಳ ಸಮಸ್ಯೆಯೂ ಹೆಚ್ಚಾಗುತ್ತದೆ. ಇದು ಹೆಚ್ಚಾಗಿ ಬೆನ್ನಿನ ಮೇಲೆ ಅಥವಾ ಮುಖ ಮತ್ತು ಕೈಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಯಾವುದೇ ವ್ಯಕ್ತಿ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅದರ ಹೊರತಾಗಿ ನೀವೇ ಔಷಧಿ ತೆಗೆದುಕೊಳ್ಳಬಾರದು” ಎಂದಿದ್ದಾರೆ.
ದೀರ್ಘಕಾಲದವರೆಗೆ ತೀವ್ರ ಬಿಸಿಲಿಗೆ ಮೈಯೊಡ್ಡಿಕೊಳ್ಳುವುದರಿಂದ ಈ ರೀತಿ ಸಮಸ್ಯೆಗೆ ಕಾರಣವಾಗಬಹುದು ಇದರಿಂದ ಚರ್ಮಕ್ಕೆ ಹಾನಿಯಾಗಬಹುದು. ಆದ್ದರಿಂದ, ಈ ಋತುವಿನಲ್ಲಿ ಸೂರ್ಯನ ಬೆಳಕಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಬಿಸಿಲಿನಲ್ಲಿ ಹೊರಗೆ ಹೋಗುವ ಸಂದರ್ಭ ಬಂದಾಗ ನಿಮ್ಮ ಮುಖ ಮತ್ತು ಇಡೀ ದೇಹವನ್ನು ಮುಚ್ಚಿಕೊಳ್ಳಿ. ಹೊರಗೆ ಹೋಗುವ 15 ನಿಮಿಷಗಳ ಮೊದಲು ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. 30 ಕ್ಕಿಂತ ಹೆಚ್ಚು ಎಸ್ಪಿಎಫ್ ಹೊಂದಿರುವ ಸನ್ ಸ್ಕ್ರೀನ್ ಬಳಸಲು ಪ್ರಯತ್ನಿಸಿ. ಮಧ್ಯಾಹ್ನ 12 ರಿಂದ 4 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ. ಹೋಗುವ ಅಗತ್ಯವಿದ್ದರೆ, ಹೊರಗೆ ಹೋದ ನಂತರ ನೀರು ಕುಡಿಯುತ್ತಲೇ ಇರಿ ಕಾಲೋಚಿತ ಹಣ್ಣುಗಳನ್ನು ಸೇವಿಸಿ. ನೀರಿನ ಅಂಶವಿರುವ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡಿ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಶುರುವಾಯಿತು ಚಿಂತೆ? ತಜ್ಞರು ಹೇಳುವುದೇನು?
ಈ ಋತುವಿನಲ್ಲಿ ಚರ್ಮದ ಮೇಲೆ ಯಾವುದೇ ರೀತಿಯ ಕಲೆಗಳು ಕಂಡರೆ ಅಥವಾ ದದ್ದುಗಳು ಇದ್ದಕ್ಕಿದ್ದಂತೆ ಬೆನ್ನಿನ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯೋಚಿತ ಚಿಕಿತ್ಸೆಯಿಂದ, ಚರ್ಮ ರೋಗಗಳು ಗಂಭೀರವಾಗುವುದನ್ನು ತಡೆಯಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ